ಮುಂದೊಂದು ದಿನ ಮೈಸೂರಿಗೆ  ಕಸವೇ ಕಂಟಕವಾಗುತ್ತದೆ

ಪ್ರಜಾಪಾರ್ಟಿ ರಾಜ್ಯಾಧ್ಯಕ್ಷ ಶಿವಣ್ಣ ಆತಂಕ

ಮೈಸೂರು,ಜ.12-ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ  ಸಂಬಂಧ ಜಿಲ್ಲಾಡಳಿತ ಪರಿಣಾಮಕಾರಿ ಕ್ರಮ ವಹಿಸುವಂತೆ ಕರ್ನಾಟಕ ಪ್ರಜಾ ಪಾರ್ಟಿ(ರೈತಪರ್ವ) ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಶಿವಣ್ಣ ಆಗ್ರಹಿಸಿದ್ದಾರೆ.

ಮೈಸೂರು ನಗರ ವಿಸ್ತರಿಸುವುದರೊಂದಿಗೆ ದಿನೇ ದಿನೆ ಜನ ಸಂಖ್ಯೆಯೂ ಹೆಚ್ಚುತ್ತಿದೆ. ಪರಿಣಾಮ ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಸವಾಲಾಗಿ ಪರಿಣಮಿಸುವುದು ನಿಶ್ಚಿತ. ರಿಂಗ್‍ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಕಾಣುವ ಕಸದ ರಾಶಿಯೇ ಭವಿಷ್ಯದ ಸಮಸ್ಯೆ ಬಗ್ಗೆ ಎಚ್ಚರಿಸುವಂತಿದೆ. ಈ ಬಗ್ಗೆ ನಿರ್ಲಕ್ಷ್ಯ ತಳೆದರೆ ಕಸವೇ ಮೈಸೂರಿಗೆ ಕಂಟಕವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸೀವೇಜ್ ಫಾರ್ಮ್‍ನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದ ಸಾಮಥ್ರ್ಯಕ್ಕಿಂತ ಹೆಚ್ಚು ತ್ಯಾಜ್ಯದ ರಾಶಿ ಹಾಗೇ ಬಿದ್ದಿರುವುದರಿಂದ ಸುತ್ತಮುತ್ತಲ ಬಡಾವಣೆ ಜನ ದುರ್ವಾಸನೆ ಸಹಿಸಿಕೊಂಡು, ರೋಗದ ಭೀತಿಯಲ್ಲಿ ಬದುಕುತ್ತಿದ್ದಾರೆ. ಈ ದುಸ್ಥಿತಿ ನಗರದೆಲ್ಲೆಡೆ ವಿಸ್ತರಿ ಸುವ ದಿನಗಳು ದೂರವಿಲ್ಲ. ಆದ್ದರಿಂದ ಸಾಂಸ್ಕøತಿಕ ನಗರಿಯ ಸೌಂದರ್ಯ, ನಾಗರಿಕರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಗರದ 4 ಕಡೆ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿ, ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ವೈಜ್ಞಾನಿಕ ರೀತಿಯಲ್ಲಿ ನಿರ್ವ ಹಣೆ ಮಾಡುವುದು ಅನಿವಾರ್ಯವಾಗಿದೆ. ತ್ಯಾಜ್ಯ ಸಂಸ್ಕರಣೆಯಿಂದ ಉತ್ಪತ್ತಿಯಾಗುವ ಗೊಬ್ಬರ ಇನ್ನಿತರ ಮೂಲಗಳಿಂದ ಆದಾಯ ಗಳಿಕೆಯೂ ಸಾಧ್ಯವಿದೆ. ಮೈಸೂರು ಸಾರ್ವಕಾಲಿಕ ಸ್ವಚ್ಛ ನಗರವಾಗಿಯೂ ಹಿರಿಮೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಶೀಘ್ರ ಕ್ರಮ ವಹಿಸುವ ವಿಶ್ವಾಸವಿದೆ ಎಂದು ಬಿ.ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.