ಜನವರಿ ಅಂತ್ಯಕ್ಕೆ ಮೃಗಾಲಯದ ಸಬ್‍ವೇ ಸೇವೆಗೆ ಮುಕ್ತ

ಮೈಸೂರು,ಡಿ.9(ಎಂಟಿವೈ)- ವಾಹನ ಗಳ ಪಾರ್ಕಿಂಗ್ ಸ್ಥಳದಿಂದ ಮೃಗಾ ಲಯಕ್ಕೆ ಸಂಪರ್ಕ ಕಲ್ಪಿಸಲು 1.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಬ್‍ವೇ ಮೊದಲ ಹಂತದ ಕಾಮಗಾರಿ 2021ರ ಜನವರಿ ಅಂತ್ಯದ ವೇಳೆಗೆ ಪೂರ್ಣ ಗೊಂಡು, ಪ್ರವಾಸಿಗರ ಬಳಕೆಗೆ ಮುಕ್ತ ವಾಗಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ.

ಕೋವಿಡ್-19ನಿಂದಾಗಿ ಲಾಕ್‍ಡೌನ್ ಮಾಡಲಾಗಿದ್ದ ಅವಧಿಯಲ್ಲಿ ಸಬ್‍ವೇ ಕಾಮಗಾರಿ ಸ್ಥಗಿತಗೊಂಡಿತ್ತು. ಅನ್‍ಲಾಕ್ ನಿಯಮ ಜಾರಿಗೆ ಬಂದ ನಂತರ ಗುತ್ತಿಗೆ ದಾರರು ಕಾಮಗಾರಿ ಪುನರಾರಂಭಿಸಿ ದ್ದರು. ದಸರಾ ವೇಳೆ ಕಾರ್ಮಿಕರು ಗೈರಾ ದರೆ, ದೀಪಾವಳಿ ಆಚರಣೆಗೆಂದು ಊರಿಗೆ ಹೋದ ಉತ್ತರ ಕರ್ನಾಟಕದ ಕಾರ್ಮಿ ಕರು ವಾಪಸ್ಸಾಗದೇ ಇರುವುದರಿಂದ ಸಬ್‍ವೇ ಕಾಮಗಾರಿ ಆಮೆಗತಿಯಲ್ಲಿ ಸಾಗು ತ್ತಿದೆ. ಆದರೂ ಗುತ್ತಿಗೆದಾರರಿಗೆ ಸಬ್‍ವೇ ಕಾಮಗಾರಿಯನ್ನು ಶೀಘ್ರವೇ ಪೂರ್ಣ ಗೊಳಿಸುವಂತೆ ಸೂಚಿಸಲಾಗಿದ್ದು, 2021ರ ಜನವರಿ ವೇಳೆಗೆ ಸಬ್‍ವೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿ ದ್ದಾರೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿರುವುದರಿಂದ ಮೃಗಾಲಯಕ್ಕೆ ಬರುವ ಪ್ರವಾಸಿಗರು ಜನವರಿ ನಂತರ ಸಬ್‍ವೇ ಮೂಲಕವೇ ಆಗಮಿಸುವ ಹಾಗೂ ನಿರ್ಗಮಿಸಲು ಅವ ಕಾಶ ಮಾಡಿಕೊಡಲಾಗುತ್ತದೆ ಎಂದರು.

ಕೊರೊನಾ ಸೋಂಕಿನ ಹರಡುವಿಕೆ ಹಿನ್ನೆಲೆಯಲ್ಲಿ 2020ರ ಫೆಬ್ರವರಿ ತಿಂಗ ಳಿಂದ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾ.24ರಿಂದ ಬಂದ್ ಆಗಿದ್ದ ಮೃಗಾಲಯ ಸೆಪ್ಟಂಬರ್ ನಿಂದ ಪುನರಾರಂಭವಾಗಿದೆ. ಆದರೂ ನಿರೀಕ್ಷಿತ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ಕೇವಲ ಎರಡು ಸಾವಿರದಿಂದ 2500 ಮಂದಿ, ರಜೆ ಹಾಗೂ ವಾರಾಂತ್ಯ ರಜೆ ದಿನ 3.500 ಮಂದಿಯಷ್ಟೇ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಆದಾಯ ಸಂಗ್ರಹದಲ್ಲಿ ತೀರ ಹಿನ್ನಡೆಯಾಗಿದೆ. ಇದ ರಿಂದ ಮೃಗಾಲಯದಲ್ಲಿ ಸಂಪನ್ಮೂ ಲದ ಕೊರತೆ ಎದುರಾಗಿರುವುದರಿಂದ ಎರ ಡನೇ ಹಂತದ ಸಬ್‍ವೇ ಕಾಮಗಾರಿ ಮುಂದೂಡಲು ನಿರ್ಧರಿಸಲಾಗಿದೆ. ಎರ ಡನೇ ಹಂತದಲ್ಲಿ ಸವ್‍ವೇ ಒಳಭಾಗದ ಗೋಡೆಗಳ ಮೇಲೆ ವನ್ಯಜೀವಿ ಸಂರಕ್ಷಣೆ ಕುರಿತಂತೆ ಚಿತ್ರ ಬರೆಸುವುದು, ಅಲಂಕಾರಿಕ ವಿದ್ಯುತ್ ಬಲ್ಬ್ ಅಳವಡಿಕೆ, ರೇಲಿಂಗ್ಸ್ ಅಳವಡಿಕೆ ಸೇರಿದಂತೆ ಇನ್ನಿತರ ಅಲಂ ಕಾರಿಕಾ ಕಾಮಗಾರಿ ನಡೆಸಲು ಉದ್ದೇ ಶಿಸಲಾಗಿತ್ತು. ಆದರೆ ಆ ಕಾಮಗಾರಿಯನ್ನು ಮುಂದೂಡಿ, ಸದ್ಯಕ್ಕೆ ಸಬ್‍ವೇ ಪ್ರವಾಸಿ ಗರ ಬಳಕೆಗೆ ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.