ಪಾರದರ್ಶಕತೆ, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ

ಮಂಡ್ಯ, ಆ.21(ಮೋಹನ್‍ರಾಜ್)- ಕಾಮಗಾರಿಗಳ ಅನುಷ್ಠಾನ, ಸಾಮಗ್ರಿ ಖರೀದಿ, ಫಲಾನುಭವಿಗಳ ಆಯ್ಕೆ ಸೇರಿದಂತೆ ಇನ್ನಿತರ ಕಾರ್ಯ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆವಾಗಿ ಕಾರ್ಯ ನಿರ್ವಹಿಸುವಂತೆ ಜಿಪಂ ಮುಖ್ಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿ ಡಾ.ವಿ.ರಾಮ್‍ಪ್ರಸಾತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶನಿವಾರ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ 2021-22ನೇ ಜಿಪಂ ಲಿಂಕ್ ಡಾಕ್ಯುಮೆಂಟ್ ಕ್ರಿಯಾ ಯೋಜನೆ ಹಾಗೂ ಇನ್ನಿತರ ಅನುದಾನ ಕ್ರಿಯಾ ಯೋಜನೆಗಳ ಅನುಮೋದನೆ ಬಗ್ಗೆ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇಲಾಖಾವಾರು ಮಂಜೂರಾಗಿ ರುವ ಅನುದಾನವನ್ನು ನಿಯಮಾನುಸಾರ ವಾಗಿ ಸ್ಥಳೀಯ ಅಧಿಕಾರಿಗಳÀ ಸಲಹೆ ಪಡೆದು ಕ್ರಿಯಾಯೋಜನೆ ತಯಾರಿಸು ವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಜವಾಬ್ದಾರಿ ಎಂದರು.

ಅಧಿಕಾರ ವ್ಯಾಪ್ತಿಯಲ್ಲಿ ಯಾವುದೇ ಲೋಪ-ದೋಷ ಕಂಡು ಬರದಂತೆ, ಯಾವುದೇ ಆಮಿಷÀಕ್ಕೆ ಒಳಗಾಗದೆÉ ಅನು ದಾನಗಳು ಸಮರ್ಪಕವಾಗಿ ಸದ್ಭಳಕೆ ಮಾಡ ಬೇಕು ಎಂದು ಸೂಚಿಸಿದ ಅವರು, 15ನೇ ಹಣಕಾಸು ಹಾಗೂ ಅಭಿವೃದ್ಧಿ ಯೋಜ ನೆಗೆ ಅನುಮೋದನೆ ನೀಡಲಾಗಿದ್ದು, ಈಗಾಗಲೇ ತಿಳಿಸಿರುವಂತೆ ಕೆಲ ಇಲಾಖೆ ಗಳ ಕ್ರಿಯಾಯೋಜನೆಗಳನ್ನು ಸರಿಪಡಿಸಿ ಕೊಂಡು ಇದೇ ತಿಂಗಳ 25ನೇ ತಾರೀಖಿ ನೊಳಗೆ ಅನುಮೋದನೆಗೆ ಅಂತಿಮಪಟ್ಟಿ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಎಸ್‍ಸಿ ಹಾಗೂ ಎಸ್‍ಟಿ ವರ್ಗಕ್ಕೆ ನೀಡ ಬೇಕಾದ ಶೇ.25 ರಷ್ಟು ಅನುದಾನವನ್ನು ಕಡ್ಡಾಯವಾಗಿ ನೀಡಲೇಬೇಕು. ಎಲ್ಲೆಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕು ಅದನ್ನು ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿ ಗಳು ಸಲಹಾ ಸಮಿತಿ ರಚಿಸಿಕೊಂಡು ಗ್ರಾಪಂವಾರು ಅವಶ್ಯಕತೆಗಳನ್ನು ಗುರುತಿಸಿ ಆದ್ಯತೆ ಹಾಗೂ ನಿಯಮಾನುಸಾರ ಕ್ರಿಯಾಯೋಜನೆ ಮಂಡಿಸಿ. ಯಾವುದೇ ಗೊಂದಲಗಳಿದ್ದಲ್ಲಿ ಸಿಇಓ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ಸರ್ಕಾರದ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಇನ್ನು ಆರು ತಿಂಗಳ ಕಾಲ ಅವಕಾಶವಿರುವುದರಿಂದ ಸುದೀರ್ಘವಾಗಿ ಚರ್ಚಿಸಿ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ವಾಗಿ ಅನುದಾನ ಬಳಕೆ ಮಾಡಿ. ಹಾಗೊಂದು ವೇಳೆ ತಮ್ಮ ಕಾರ್ಯದಲ್ಲಿ ಲೋಪದೋಷ, ವಂಚನೆ ಕಂಡುಬಂದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ಶಿಫಾರಸ್ಸು ಮಾಡಬೇಕಾ ಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರಿ ಶಾಲೆಯ ಮಕ್ಕಳಿಗೆ ಪೌಷ್ಟಿಕ ಆಹಾರಕ್ಕಾಗಿ 1 ರಿಂದ 5ನೇ ತರಗತಿ ಮಕ್ಕಳಿಗೆ ದಿನಕ್ಕೆ ತಲಾ 4.52 ಪೈಸೆ ಹಾಗೂ 6 ರಿಂದ 10ನೇ ತರಗತಿ ಮಕ್ಕಳಿಗೆ ದಿನಕ್ಕೆ ತಲಾ 7.45 ಪೈಸೆ ಮೇ-ಜೂನ್ ತಿಂಗಳ ಹಣವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಕ್ರಮ ವಹಿಸ ಲಾಗಿದೆ. ಅನುದಾನಗಳ ಬಳಕೆ ಹಾಗೂ ಇಲಾಖೆಗಳ ಯಾವುದೇ ಕಾರ್ಯಗಳಲ್ಲಿ ಒಂದೂ ಕಪ್ಪುಚುಕ್ಕೆ ಬಾರದಂತೆ ಅಧಿಕಾರಿ ಗಳು ನಿಗದಿತ ಗುಣಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಜಿಪಂ ಸಿಇಓ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿದರು. ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಸೌಮಿತ್ರ, ಉಪಕಾರ್ಯ ದರ್ಶಿ (ಅಭಿವೃದ್ಧಿ) ಜಿ.ಧನರಾಜು, ಮುಖ್ಯ ಲೆಕ್ಕಾಧಿಕಾರಿ ಡಿ.ಬಿ.ಕವಿತಾ, ಯೋಜನಾ ನಿರ್ದೇಶಕರು ಹೆಚ್.ಎ.ಷÀಣ್ಮುಗಂ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.