ಬೆಂಗಳೂರು, ಮೇ 9-ಲಾಕ್‍ಡೌನ್ ವೇಳೆ ಅಕ್ರಮವಾಗಿ ಸಿಗರೇಟ್ ಮಾರಾ ಟಕ್ಕೆ ಅವಕಾಶ ನೀಡಲು ಲಂಚ ಪಡೆದ ಆರೋಪದ ಮೇರೆಗೆ ಬೆಂಗಳೂರು ಸಿಸಿಬಿ ಎಸಿಪಿ ಮತ್ತು ಇಬ್ಬರು ಇನ್ಸ್ ಪೆಕ್ಟರ್‍ಗಳನ್ನು ಅಮಾನತುಪಡಿಸಲಾ ಗಿದೆ. ಸಿಸಿಬಿ ಎಸಿಪಿ ಪ್ರಭುಶಂಕರ್ ಮತ್ತು ಇಬ್ಬರು ಇನ್ಸ್‍ಪೆಕ್ಟರ್‍ಗಳು ಅಮಾ ನತಿಗೊಳಪಟ್ಟವರಾಗಿದ್ದು, ಇವರೆಲ್ಲಾ ಸೇರಿ ಲಾಕ್‍ಡೌನ್ ವೇಳೆ ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ಅವಕಾಶ ಕಲ್ಪಿ ಸಲು ಸಿಗರೇಟ್ ವಿತರಕರಿಂದ 62.5 ಲಕ್ಷ ರೂ. ಲಂಚ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಯಲ್ಲಿ ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ತನಿಖಾತಂಡ ನೇಮಿಸಲಾಗಿತ್ತು. ಅಧಿಕಾರಿಗಳು ಲಂಚ ಪಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ಎಸಿಪಿ ಪ್ರಭುಶಂಕರ್ 25 ಲಕ್ಷ ರೂ. ಲಂಚ ಪಡೆದಿರುವುದು ಸಾಬೀತಾಗಿದೆ. ತನಿಖಾ ವರದಿ ಆಧರಿಸಿ ಇಬ್ಬರು ಸಿಸಿಬಿ ಇನ್ಸ್‍ಪೆಕ್ಟರ್‍ಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅಮಾನತುಪಡಿಸಿದರೆ, ಎಸಿಪಿ ಪ್ರಭುಶಂಕರ್ ಅವರನ್ನು ಗೃಹ ಇಲಾಖೆ ಅಮಾನತುಪಡಿಸಿ ಇಂದು ಸಂಜೆ ಆದೇಶ ಹೊರಡಿಸಿದೆ.