ಹೆಚ್ಚುವರಿ ಕೆಲಸಕ್ಕೆ ವಿರೋಧ: ಮೈಸೂರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು, ಡಿ.23(ವೈಡಿಎಸ್)- ಶಾಲೆಗೆ ಸೇರದ 6 ವರ್ಷ ಮೇಲ್ಪಟ್ಟ ಮಕ್ಕಳ ಸರ್ವೆ ಕಾರ್ಯವನ್ನು ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಸಹಾಯಕಿಯರಿಗೆ ವಹಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ನೂರಾರು ಪ್ರತಿಭಟನಾಕಾರರು ಸರ್ಕಾ ರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ರಾಜ್ಯ ಸರ್ಕಾ ರದ ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಯಲ್ಲಿ ಹಲವು ಕೆಲಸಗಳನ್ನು ನಿರ್ವಹಿ ಸುತ್ತಿದ್ದಾರೆ. ಚುನಾವಣೆ ಕೆಲಸ, ಹಿರಿಯ ನಾಗರಿಕರ ಆರೋಗ್ಯ ತಪಾಸಣಾ ಮಾಹಿತಿ ಸಂಗ್ರಹ, ಕೊರೊನಾ ವಿರುದ್ಧದ ಸಮರ ಮೊದಲಾದ ಕೆಲಸಗಳನ್ನೂ ಮಾಡು ತ್ತಿದ್ದಾರೆ. ಈಗ ಆರು ವರ್ಷ ಮೇಲ್ಪಟ್ಟ ಮಕ್ಕಳ ಸರ್ವೆ ಕೆಲಸವನ್ನೂ ವಹಿಸಿರು ವುದು ಐಸಿಡಿಎಸ್ ನಿಯಮಕ್ಕೆ ವಿರುದ್ಧ ವಾಗಿದೆ. ಕೂಡಲೇ ಸರ್ವೆ ಕಾರ್ಯದಿಂದ ನಮ್ಮನ್ನು ಕೈಬಿಡಬೇಕು ಎಂದು ಒತ್ತಾಯಿ ಸಿದರು ಫೆಡರೇಷನ್‍ನ ರಾಜ್ಯ ಮಂಡಳಿ ಸದಸ್ಯ ಡಿ.ಜಗನ್ನಾಥ್, ಸುನಂದ, ಗೀತಾ ಮತ್ತಿತರರು ಪ್ರತಿಭಟನೆಯಲ್ಲಿದ್ದರು.