ಕೊರೊನಾ ವೈರಸ್ ವಿರುದ್ಧ ಕಲಾವಿದರಿಂದ ಜನ ಜಾಗೃತಿ

ಮೈಸೂರು, ಮಾ.23(ಆರ್‍ಕೆಬಿ)- ಕೊರೊನಾ ವೈರಸ್ ಹರಡುವಿಕೆ ವಿರುದ್ಧ ಕಲಾವಿದರು ಬೀದಿಗಿಳಿದಿದ್ದಾರೆ. ಕಲಾವಿದ ಎಸ್.ಯೋಗಾನಂದ್ ನೇತೃತ್ವದ ತಂಡ ಸೋಮವಾರ ಮೈಸೂರಿನ ಚಿಕ್ಕ ಗಡಿಯಾರ ವೃತ್ತದ ಬಳಿ ಕಲೆಯ ಮೂಲಕ ಕೊರೊನಾ ವಿಚಾರದಲ್ಲಿ ಜನಜಾಗೃತಿ ಮೂಡಿಸಿದರು.

ಕೊರೊನಾ ವೈರಸ್‍ನ ಚಿತ್ರವನ್ನು ರಚಿಸಿ, ಅದರಿಂದ ಉಂಟಾಗುವ ಭೀಕರತೆ ಬಗ್ಗೆ ಜನರಿಗೆ ಅರಿವು ಮೂಡಿಸಿದರು. ವೈರಸ್ ಹರಡಬೇಡಿ, ಮುಂಜಾಗ್ರತೆ ವಹಿಸಿ ದರೆ ಕೊರೊನಾ ವೈರಸ್ ಓಡಿಸಬಹುದು. ಎಲ್ಲರೂ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಿ. ಮಾಸ್ಕ್ ಧರಿಸಿ, ಆಗಾಗ್ಗೆ ಸ್ಯಾನಿಟೈಜûರ್ ಬಳಸಿ ಕೈ ತೊಳೆಯುತ್ತಿರಿ. ಮುಖ, ಬಾಯಿ, ಮೂಗು, ಕಣ್ಣು ಇತ್ಯಾದಿಗಳನ್ನು ಪದೇ ಪದೆ ಕೈನಿಂದ ಮುಟ್ಟಬೇಡಿ, ಆಗಾಗ್ಗೆ ಸ್ಯಾನಿ ಟೈಜûರ್ ಬಳಸಿ ಕೈ ತೊಳೆಯುತ್ತಿರಿ. ಸುರಕ್ಷಿತವಾಗಿರಿ, ಭಯ ಪಡಬೇಡಿ, ಜಾಗೃತಿ ಮೂಡಿಸೋಣ ಎಂಬುದಾಗಿ ಜನರಲ್ಲಿ ತಿಳುವಳಿಕೆ ಮೂಡಿಸಿದರು.