ವಿದ್ಯುತ್ ಅವಘಡ: ನಾಲ್ವರು ಕಾರ್ಮಿಕರು ದುರ್ಮರಣ

ಮೈಸೂರು, ಮೇ 21(ಎಸ್‍ಬಿಡಿ, ವೈಡಿಎಸ್)- ಮೈಸೂರಿನಲ್ಲಿ ನಾಲ್ವರು ಕಾರ್ಮಿಕರು ಗುರುವಾರ ಮಧ್ಯಾಹ್ನ ವಿದ್ಯುತ್ ಪ್ರವ ಹಿಸಿ ಮೃತಪಟ್ಟಿದ್ದಾರೆ.

ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಮೂವರು ಹಾಗೂ ಮೇಟಗಳ್ಳಿ ಠಾಣೆ ವ್ಯಾಪ್ತಿಯಲ್ಲಿ ಓರ್ವ ಕಾರ್ಮಿಕ ವಿದ್ಯುತ್‍ಗೆ ಬಲಿಯಾಗಿದ್ದಾರೆ.

ಘಟನೆ-1: ವರುಣಾ ಠಾಣಾ ವ್ಯಾಪ್ತಿಯ ಕೀಳನ ಪುರದಲ್ಲಿ ಜೋಳದ ಕಡ್ಡಿ ತುಂಬಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ, ತಿ.ನರಸೀಪುರ ತಾಲೂಕು ಹೊಸಪುರ ಗ್ರಾಮದ ತೇಜು(21), ಮಹದೇವಸ್ವಾಮಿ ಅಲಿಯಾಸ್ ಸಿದ್ದರಾಜು (26) ಹಾಗೂ ಮಹದೇವ ನಾಯಕ (46) ಮೃತಪಟ್ಟಿದ್ದಾರೆ. ಹೊಸಪುರದ ಸಿದ್ದಪ್ಪ ಅವರ ಲಾರಿಯಲ್ಲಿ ಅದೇ ಗ್ರಾಮದ 10ಕ್ಕೂ ಹೆಚ್ಚು ಮಂದಿ ಕಾರ್ಮಿಕರು, ಕೆಲಸಕ್ಕೆ ಬಂದಿದ್ದರು. ಮೈಸೂ ರಿನ ಪಿಂಜರಾಪೋಲ್ ರಾಸುಗಳಿಗೆ ಮೇವಿಗಾಗಿ ಗುರುವಾರ ಮಧ್ಯಾಹ್ನ ಕೀಳನಪುರದಲ್ಲಿ ಜೋಳದ ಕಡ್ಡಿಯನ್ನು ಲೋಡ್ ಮಾಡಿಕೊಂಡು, ಮೈಸೂರಿನ ಪಿಂಜರಾಪೋಲ್‍ಗೆ ಸಾಗಿಸುವಾಗ ಈ ದುರ್ಘಟನೆ ನಡೆದಿದೆ. ಮುಖ್ಯರಸ್ತೆಗೆ ಸಂಪರ್ಕಿಸುವ ದಾರಿಯಲ್ಲಿ ವಿದ್ಯುತ್ ಮಾರ್ಗ ಹಾದು ಹೋಗಿದೆ. ಈ ಜಾಗದಲ್ಲಿ ಲಾರಿ ಸಂಚರಿಸುತ್ತಿದ್ದ ವೇಳೆ ಮಹದೇವ ನಾಯಕ ರಸ್ತೆಯಲ್ಲಿ ನಿಂತು ವಿದ್ಯುತ್ ತಂತಿಗೆ ತಗುಲುತ್ತದೆಯೇ ಎಂದು ನೋಡಿಕೊಂಡು, ಚಾಲಕನಿಗೆ ತಿಳಿಸುತ್ತಿದ್ದರು. ಆದರೆ ವಿದ್ಯುತ್ ತಂತಿಯಿದ್ದ ಸ್ಥಳದಿಂದ ಲಾರಿ ಸಾಗುವ ಮೊದಲೇ, ಅವರು ಲಾರಿ ಯನ್ನೇರಲು ಮುಂದಾಗಿದ್ದಾರೆ. ಅಷ್ಟರಲ್ಲೇ ವಿದ್ಯುತ್ ಪ್ರವಹಿಸಿ, ಚೀರಿಕೊಂಡು ನೆಲಕ್ಕುರುಳಿದ್ದಾರೆ. ಮಹ ದೇವಸ್ವಾಮಿ ಹಾಗೂ ತೇಜು, ಏನಾಯಿತೆಂದು ನೋಡಲು ಲಾರಿಯಿಂದ ಕೆಳಗಿಳಿಯುತ್ತಿದ್ದಾಗ ಅವರಿಗೂ ವಿದ್ಯುತ್ ಪ್ರವಹಿಸಿದೆ. ಘಟನೆಯಲ್ಲಿ ಮಹದೇವ ನಾಯಕ ಹಾಗೂ ಮಹದೇವಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದರೆ, ತೇಜು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸು ನೀಗಿದ್ದಾನೆ. ಎಎಸ್ಪಿ ಸ್ನೇಹಾ, ಡಿವೈಎಸ್ಪಿ ಸುಮಿತ್, ಸರ್ಕಲ್ ಇನ್‍ಸ್ಪೆಕ್ಟರ್ ಜೀವನ್ ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ.

ಚಾಲಕ ಸೇರಿದಂತೆ ಲಾರಿ ಕ್ಯಾಬಿನ್‍ನ ಸೀಟ್‍ನಲ್ಲಿ ಕುಳಿತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಲ್ಪ ಮುಂದೆ ಹೋಗಿ ಲಾರಿ ನಿಲ್ಲಿಸಿದ್ದರಿಂದ ಭಾರೀ ಅವಘಡ ತಪ್ಪಿದಂತಾಗಿದೆ. ಲಾರಿಗೆ ಹಸಿರು ಜೋಳದ ಕಡ್ಡಿಯನ್ನು ಮಿತಿಮೀರಿ ತುಂಬಿದ್ದರಿಂದ ವಿದ್ಯುತ್ ತಂತಿಗೆ ತಗುಲಿ, ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಲಾರಿ ಚಾಲಕ ಹಾಗೂ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ದೇಹಗಳನ್ನು ಮೈಸೂರು ವೈದ್ಯಕೀಯ ಕಾಲೇಜು ಹಾಗೂ

ಸಂಶೋಧನಾ ಸಂಸ್ಥೆ ಶವಾ ಗಾರದಲ್ಲಿಡಲಾಗಿದ್ದು, ಶುಕ್ರವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ಬಳಿಕ, ವಾರಸುದಾರರಿಗೆ ಒಪ್ಪಿಸ ಲಾಗುವುದು ಎಂದು ವರುಣಾ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಟಿ.ಎಸ್.ಲೋಲಾಕ್ಷಿ ತಿಳಿಸಿದ್ದಾರೆ.

ಘಟನೆ-2: ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಪ್ರವಹಿಸಿ, ಮೈಸೂರು ತಾಲೂಕು ಕಡಕೊಳ ಸಮೀಪದ ಕೋಚನಹಳ್ಳಿ ನಿವಾಸಿ, ಶಿವಣ್ಣ ಅವರ ಪುತ್ರ ಮಹದೇವಸ್ವಾಮಿ(33) ಮೃತಪಟ್ಟಿ ದ್ದಾರೆ. ಕಳೆದ ರಾತ್ರಿ ಬೀಸಿದ ಬಿರುಗಾಳಿಗೆ ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮರದ ಕೊಂಬೆ ಬಿದ್ದು, 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು. ದುರಸ್ತಿಗೆ ಕಂಟ್ರಾಕ್ಟರ್ ಪ್ರಭು ಅವರು, ಕೋಚನ ಹಳ್ಳಿಯಿಂದ ಮಹದೇವಸ್ವಾಮಿ, ಬಸಪ್ಪ, ಯಶ್ವಂತ್‍ಕುಮಾರ್, ಗಣೇಶ್ ಎಂಬು ವರನ್ನು ಕರೆಯಿಸಿದ್ದರು. ಮೇಟಗಳ್ಳಿ ಜೆ.ಕೆ.ಟೈರ್ಸ್ ಬಳಿಯ ಪೆಟ್ರೋಲ್ ಬಂಕ್ ಸಮೀಪದಲ್ಲಿ ತುಂಡಾಗಿದ್ದ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬ ಹಾಗೂ ತಂತಿಗಳನ್ನು ಅಳವಡಿಸುತ್ತಿದ್ದರು. ಗುರುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮಹದೇವಸ್ವಾಮಿ ಕನೆಕ್ಷನ್(ಜಂಪ್) ಕೊಡುತ್ತಿದ್ದಾಗ ವಿದ್ಯುತ್ ಸ್ಪರ್ಶಗೊಂಡು ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಮಹದೇವಸ್ವಾಮಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾ ಯಿತಾದರೂ ಆತ ಬದುಕುಳಿಯಲಿಲ್ಲ ಎಂದು ಜೊತೆಯಲ್ಲಿದ್ದ ಸ್ನೇಹಿತರು ತಿಳಿಸಿದ್ದಾರೆ. ಮೃತದೇಹವನ್ನು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಶವಾಗಾರದಲ್ಲಿ ಇಡಲಾಗಿದೆ. ವಿಷಯ ತಿಳಿದು ಶವಾಗಾರದ ಬಳಿ ಜಮಾಯಿಸಿದ ಕೋಚನಹಳ್ಳಿ ಗ್ರಾಮಸ್ಥರು, ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹದೇವಸ್ವಾಮಿ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಈ ವೇಳೆ ವಿವಿ ಮೊಹಲ್ಲಾ ವಿಭಾಗದ ಸೆಸ್ಕ್‍ನ ಅಧಿಕಾರಿಗಳು, ಇಲಾಖೆ ಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಈ ಕುರಿತು ವಿವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಚಿಕ್ಕಸಿದ್ದೇಗೌಡ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿ, ಬುಧವಾರ ಸಂಜೆ ಬಿರುಗಾಳಿಗೆ ಮೇಟಗಳ್ಳಿ ಕೈಗಾರಿಕಾ ಪ್ರದೇಶದÀ ಸುತ್ತಮುತ್ತ ಹಾನಿಯಾಗಿದ್ದ ವಿದ್ಯುತ್ ಕಂಬಗಳ ದುರಸ್ಥಿಗೊಳಿ ಸಲು ಮೂವರು ಕಂಟ್ರಾಕ್ಟರ್‍ಗಳಿಗೆ ವಹಿಸಲಾಗಿತ್ತು. ಪ್ರಭು ಎಂಬು ವರು ಮಹದೇವಸ್ವಾಮಿ ಎಂಬುವರಿಂದ ದುರಸ್ಥಿ ಕೆಲಸ ಮಾಡಿಸು ತ್ತಿದ್ದರು. ಕೆಲಸ ಮುಗಿದು ಕೊನೆಯಲ್ಲಿ ಜಂಪ್ ಕನೆಕ್ಷನ್ ಕೊಡುತ್ತಿದ್ದಾಗ ಯಾವುದೋ ಕಾರ್ಖಾನೆಯವರು ಜನರೇಟರ್ ಆನ್ ಮಾಡಿ ದ್ದರಿಂದ ವಿದ್ಯುತ್ ಸ್ಪರ್ಶಕೊಂಡು ಮೃತಪಟ್ಟಿರಬಹುದು. ಮರ ಣೋತ್ತರ ಪರೀಕ್ಷೆ ನಂತರ ಕಾರಣ ಗೊತ್ತಾಗಲಿದೆ ಎಂದರು.