ಪ್ರಧಾನಿ ಮೋದಿಗೆ ಸಂಸದ ಪ್ರತಾಪ್ ಸಿಂಹ ಆಹ್ವಾನ

ಮೈಸೂರು,ಏ.೫(ಪಿಎಂ)-ಮುAಬರುವ ಜೂನ್ ೨೧ರ ಅಂತಾರಾಷ್ಟಿçÃಯ ಯೋಗ ದಿನದಂದು ೧,೧೦,೦೦೦ಕ್ಕೂ ಅಧಿಕ ಮಂದಿ ಸಾಮೂಹಿಕ ಯೋಗ ಪ್ರದರ್ಶಿಸಿ ವಿಶ್ವ ದಾಖಲೆ ಬರೆಯಲು ಮೈಸೂರು ನಗರ ಸಜ್ಜಾಗುತ್ತಿದ್ದು, ಆ ಬೃಹತ್ ಯೋಗ ಪ್ರದರ್ಶ ನಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಹ್ವಾನ ನೀಡಿ ದ್ದಾರೆ. ದೆಹಲಿಯಲ್ಲಿ ಮಂಗಳವಾರ ನರೇಂದ್ರ ಮೋದಿಯವರನ್ನು ಕುಟುಂಬ ಸಮೇತ ಭೇಟಿ ಮಾಡಿದ ಸಂಸದ ಪ್ರತಾಪ್ ಸಿಂಹ, ಸದರಿ ಸಾಮೂಹಿಕ ಯೋಗ ಪ್ರದ ರ್ಶನಕ್ಕೆ ಮೈಸೂರಿಗೆ ಆಗಮಿಸಬೇಕೆಂದು ಆಹ್ವಾನಿಸಿ, ಮನವಿ ಸಲ್ಲಿಸಿದರು.

ಅಷ್ಟಾಂಗ ಯೋಗದ ಜನ್ಮಸ್ಥಳವಾಗಿ ಐತಿಹಾಸಿಕ ನಗರ ಮೈಸೂರು ಖ್ಯಾತಿ ಪಡೆ ದಿದ್ದು, ಈ ಯೋಗಾಭ್ಯಾಸಕ್ಕೆ ಸೂಕ್ತ ಸ್ಥಳ ವಾಗಿದೆ. ಯೋಗ ಗುರು ಪಟ್ಟಾಭಿ ಜೋಯಿಸ್ ಸೇರಿದಂತೆ ಇನ್ನಿತರ ಯೋಗ ಸಾಧಕರ ಬೋಧನೆ ಮೂಲಕ ಯೋಗ ವಿದ್ಯೆಯ ಸಂರಕ್ಷಣೆ, ಅಭಿವೃದ್ಧಿ ಮತ್ತು ಪ್ರಚಾರಕ್ಕೆ ಕೊಡುಗೆ ನೀಡಿದ ಶ್ರೀಮಂತ ಇತಿಹಾಸ ವನ್ನು ಮೈಸೂರು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯAತ ಯೋಗಾ ಭ್ಯಾಸದ ಪ್ರಯೋಜನ ಮನದಟ್ಟಾಗುತ್ತಿದೆ. ಆ ಮೂಲಕ ಯೋಗ ವಿದ್ಯೆ ಪ್ರತಿದಿನ ವಿಸ್ತಾರ ವಾಗಿ ಬೆಳೆಯುತ್ತಿದೆ. ಹಲವು ಖ್ಯಾತ ಯೋಗ ವಿದ್ವಾಂಸರು ಮತ್ತು ಗುರುಗಳು ಮೈಸೂರಿ ನಲ್ಲಿ ಯೋಗ

ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧ ಪಡೆಯುತ್ತಿರುವ ಯೋಗ ಕಲೆಗೆ ಉತ್ತೇಜನ ನೀಡುತ್ತಿದ್ದಾರೆ. ವಿಶ್ವಸಂಸ್ಥೆಯು `ಜೂನ್ ೨೧’ ಅನ್ನು `ಅಂತಾ ರಾಷ್ಟಿçÃಯ ಯೋಗ ದಿನ’ ಎಂದು ಘೋಷಿಸಿದೆ. ಆ ಮೂಲಕ ಉನ್ನತ ಮಟ್ಟದ ವಿದ್ಯೆಯನ್ನು ಜಗತ್ತಿಗೆ ನೀಡಿದ ಹಿರಿಮೆಯನ್ನು ಭಾರತ ಹೊಂದಿದೆ. `ಅಂತಾರಾಷ್ಟಿçÃಯ ಯೋಗ ದಿನ’ ೨೦೧೫ರಲ್ಲಿ ಪ್ರಾರಂಭವಾದಾಗಿನಿAದಲೂ ಮೈಸೂರಿನಲ್ಲಿ ಈ ದಿನವನ್ನು ಸೂಕ್ತ ರೀತಿಯಲ್ಲಿ ಆಚರಿಸಲಾಗುತ್ತಿದೆ. ಆ ಮೂಲಕ ಸ್ಥಳೀಯವಾಗಿ ಸಮಾಜದ ಎಲ್ಲಾ ವರ್ಗಗಳ ಜನರಿಗೂ ಜೀವನದಲ್ಲಿ ಸ್ವಾಸ್ಥö್ಯ ಸಂಸ್ಕೃತಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಸಾಮಾಜಿಕ ಜವಾಬ್ದಾರಿ ಮೆರೆಯಲಾಗುತ್ತಿದೆ. ಮೈಸೂರಿನಲ್ಲಿ ೨೦೧೭ರ ಅಂತಾರಾಷ್ಟಿçÃಯ ಯೋಗ ದಿನಾಚರಣೆಯಂದು ೫೫,೫೦೬ಕ್ಕೂ ಅಧಿಕ ಮಂದಿ ಸಾಮೂಹಿಕ ಯೋಗ ಪ್ರದರ್ಶಿಸಿದ್ದ ಗಿನ್ನಿಸ್ ದಾಖಲೆಯಾಗಿತ್ತು. ಈ ದಾಖಲೆಯ ಶ್ರೇಯಸ್ಸನ್ನು ಪ್ರಧಾನಿಗಳಾದ ತಮಗೆ ಅರ್ಪಿಸಿದ್ದೇವೆ. ರಾಜಸ್ಥಾನದ ಕೋಟಾದಲ್ಲಿ ೨೦೧೮ರಲ್ಲಿ ನಡೆದ ಅಂತಾರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ೧,೦೦,೯೮೪ ಮಂದಿ ಭಾಗವಹಿಸಿದ್ದು, ಆ ಮೂಲಕ ಮೈಸೂರಿನ ದಾಖಲೆ ಮುರಿಯಲಾಗಿದೆ. ಈ ವರ್ಷ ಮೈಸೂರಿನಲ್ಲಿ ಹಿಂದಿನ ಗಿನ್ನಿಸ್ ದಾಖಲೆ ಮೀರಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಇಂತಹ ಬೃಹತ್ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪ್ರಧಾನಿಗಳಾದ ತಾವು ಆಗಮಿಸಬೇಕೆಂದು ಸಂಸದರು ಮನವಿಯಲ್ಲಿ ಕೋರಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದÀ ಪ್ರತಾಪ್ ಸಿಂಹ ಪತ್ನಿ ಅರ್ಪಿತಾ ಸಿಂಹ, ಪುತ್ರಿ ವಿಪಂಚಿ ಸಿಂಹ ಇದ್ದರು.