ಬುದ್ಧಿ ಮಾಂದ್ಯ ಮಕ್ಕಳಿಗೆ ಪ್ರಬುದ್ಧ ಭಾರತ ಪ್ರಶಸ್ತಿ ಪ್ರದಾನ

ಮೈಸೂರು: ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ, ರಾಜ್ಯ ಯುವ ಬರಹಗಾರರ ಒಕ್ಕೂಟದ ಆಶ್ರಯದಲ್ಲಿ ಭಾನುವಾರ ಮೈಸೂರಿನ ತಿಲಕ್‍ನಗರ ಬಂಬೂಬಜಾರ್ ಅಂಧ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಬುದ್ಧಿ ಮಾಂದ್ಯ ಮಕ್ಕಳಿಗೆ ಹಾಗೂ ಇತರೆ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿರುವ ಸಾಧಕರಿಗೆ ಪ್ರಬುದ್ಧ ಭಾರತ ಪ್ರಶಸ್ತಿ ಪ್ರದಾನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.

ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ರಾಜ್ಯಾಧ್ಯಕ್ಷ ಲಕ್ಷ್ಮೀಕಾಂತ್ ಅವರು ಸಂಘಟಿಸಿದ ಕಾರ್ಯಕ್ರಮಕ್ಕೆ ನಿವೃತ್ತ ಡಿವೈಎಸ್‍ಪಿ ಅನುಪಮಾ ಶೆಣೈ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಸಮಾಜ ಸೇವಕಿ ಐಶ್ವರ್ಯ ಮಹದೇವು ಮಂಚನಹಳ್ಳಿ ಅವರು ಸಾಧಕರಿಗೆ ಪ್ರಬುಧ್ಧ ಭಾರತ ಪ್ರಶಸ್ತಿಗಳನ್ನು ವಿತರಿಸಿದರು.

ಮನುಷ್ಯನಿಗೊಂದು ಬೆಲೆ, ಮನುಷ್ಯನಿಗೊಂದು ಕಲೆ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಯಿತು. ರಾಜ್ಯ ಯುವ ಬರಹಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಹೂಹಳ್ಳಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಹಾಯಕ ಆಯುಕ್ತ ರಾಮಕೃಷ್ಣಯ್ಯ, ಸಮಾಜ ಸೇವಕರಾದ ರೋಹಿತ್ ವಿದ್ವಾತ್, ಸಮಾಜ ಸೇವಕ ಧನಂಜಯ, ಪಾಲಿಕೆ ಸದಸ್ಯ ಎಸ್.ಸ್ವಾಮಿ, ಅಂಧ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ಸತೀಶ್ ಇನ್ನಿತರರು ಭಾಗವಹಿಸಿದ್ದರು.