ಮಳವಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮಳವಳ್ಳಿ, ಅ.27- ಮಳವಳ್ಳಿ ಪುರ ಸಭೆಯ ಆಧ್ಯಕ್ಷರಾಗಿ ರಾಧಾ ನಾಗರಾಜ್ ಉಪಾಧ್ಯಕ್ಷರಾಗಿ ಟಿ.ನಂದಕುಮಾರ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಪುರಸಭೆಯ 23 ಸ್ಥಾನಗಳು ಲೋಕಸಭಾ ಸದಸ್ಯರ ಹಾಗೂ ಶಾಸಕರ ಮತದಾನ ಸೇರಿ ಒಟ್ಟು 25 ಮತದಾರರಿದ್ದ ಈ ಚುನಾವಣೆಗೆ ರಾಧ ನಾಗರಾಜು(17ನೇ ವಾರ್ಡ್), ಅಧ್ಯಕ್ಷ ಸ್ಥಾನಕ್ಕೆ ಟಿ.ನಂದಕುಮಾರ್(10ನೇ ವಾರ್ಡ್) ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಇಲ್ಲಿ 9 ಜೆಡಿಎಸ್, 5 ಕಾಂಗ್ರೆಸ್, 2 ಬಿಜೆಪಿ, 7 ಪಕ್ಷೇತರ ಸದಸ್ಯರಿದ್ದಾರೆ. ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಚಂದ್ರಮೌಳಿಯವರು ಅಧ್ಯಕ್ಷರಾಗಿ ರಾಧಾ ನಾಗರಾಜು, ಉಪಾಧ್ಯಕ್ಷರಾಗಿ ಟಿ.ನಂದಕುಮಾರ್ ಆಯ್ಕೆ ಆಗಿದ್ದಾರೆಂದು ಘೊಷಿಸಿದರು. ಚುನಾವಣೆÉಯಲ್ಲಿ ಒಟ್ಟು 18 ಪುರಸಭಾ ಸದಸ್ಯರು, ಶಾಸಕ ಅನ್ನದಾನಿ ಸೇರಿ 19 ಮಂದಿ ಹಾಜರಿದ್ದರು, 5 ಜನ ಸದಸ್ಯರು ಹಾಗೂ ಲೋಕಸಭಾ ಸದಸ್ಯ ಸುಮಲತಾ ಅಂಬರೀಷ್ ಸೇರಿ 6 ಮಂದಿ ಗೈರುಹಾಜ ರಾಗಿದ್ದರು. ಚುನಾವಣೆ ಬಳಿಕ ಮಾತನಾಡಿದ ಶಾಸಕ ಡಾ.ಅನ್ನದಾನಿ, ಅಧ್ಯಕ್ಷರು, ಉಪಾ ಧ್ಯಕ್ಷರು ಪಟ್ಟಣದ ಅಭಿವೃದ್ಧಿಗೆ ಯಾವುದೇ ರಾಜಕೀಯವಿಲ್ಲದೆ ಜನರ ಸೇವೆಗೆ ಮುಂದಾಗುವಂತೆ ಕಿವಿಮಾತು ಹೇಳಿದರು.

ಚುನಾವಣೆ ಪಕ್ರಿಯೆಯಲ್ಲಿ ಪಾಲ್ಗೊಂಡು ಹಾಗೂ ಜೆಡಿಎಸ್ ಪಕ್ಷದ ಗೆಲುವಿಗೆ ಕಾರಣಕರ್ತರಾದ ಎಲ್ಲಾ ಜೆಡಿಎಸ್ ಸದಸ್ಯರಿಗೆ, ಬಿಜೆಪಿ ಸದಸ್ಯರಿಗೆ ಹಾಗೂ ಎಲ್ಲಾ ಪಕ್ಷೇತರ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ಅವಿರೋಧ ಆಯ್ಕೆ ಘೋಷಣೆ ಆಗುತ್ತಿದ್ದಂತೆಯೆ ಜೆಡಿಎಸ್ ಕಾರ್ಯ ಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.