ಶೈಕ್ಷಣ ಕ ಸಮಸ್ಯೆಗಳಿಗೆ ಹೋರಾಡಲು ನನ್ನನ್ನು ಗೆಲ್ಲಿಸಿ

Karnataka Legislative Council

ಮೈಸೂರು: ವಿಧಾನ ಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಯಲ್ಲಿ ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಶೈಕ್ಷಣ ಕ ಕ್ಷೇತ್ರದ ಅನೇಕ ಸಮಸ್ಯೆಗಳ ಕುರಿತು ಹೋರಾಡಲು ಕಂಕಣಬದ್ಧರಾಗಿರುವ ತಮಗೆ ಶಿಕ್ಷಕ ಮತದಾರರು ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಮಾನಸಗಂಗೋತ್ರಿ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ.ಮಹದೇವ ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರಿಗೆ ಅರ್ಹತೆ ಪ್ರಕಾರ ಪದೋನ್ನತಿ ನೀಡಬೇಕು. ನೂತನ ಸಂಬಳ ನೀತಿ ಜಾರಿಗೊಳಿಸಿ, ನೀಡಬೇಕಾದ ಬಾಕಿಯನ್ನು ಒಂದೇ ಕಂತಿನಲ್ಲಿ ನೀಡಬೇಕು. ಕರ್ನಾಟಕ ಲೋಕಸೇವಾ ಆಯೋಗ ಭರ್ತಿ ಮಾಡುವ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಅಂಕವೊಂದೇ ಮಾನದಂಡವಾಗಬೇಕು. ಶಿಕ್ಷಕರ ವರ್ಗಾವಣೆ ಕಾನೂನು ಸಡಿಲಗೊಳ್ಳಬೇಕು ಎಂಬ ಅನೇಕ ಬೇಡಿಕೆಗಳ ಈಡೇರಿಕೆಗೆ ತಾವು ಶ್ರಮಿಸುವುದಾಗಿ ಭರವಸೆ ನೀಡಿದರು.

ಸುಮಾರು ಒಂದೂವರೆ ವರ್ಷದಿಂದ ರಾಜ್ಯದ 7 ವಿವಿಗಳ ಕುಲಪತಿಗಳ ನೇಮಕ ಮಾಡದೆ ಸರ್ಕಾರ ತಾತ್ಸಾರದಿಂದ ವರ್ತಿಸುತ್ತಿದೆ. ವಿಶ್ವವಿದ್ಯಾನಿಲಯಗಳ ಉನ್ನತ ಹುದ್ದೆಗಳಿಗೆ ನೇಮಕ ಮಾಡುವ ಸಂಬಂಧ ನಿಗಮ-ಮಂಡಳಿಗಳಿಗೆ ನೇಮಕ ಮಾಡುವ ರೀತಿಯಲ್ಲಿ ರಾಜಕೀಯ ಪಕ್ಷಗಳು ಪರಿಗಣ ಸುತ್ತಿದ್ದು, ಇದರಿಂದಾಗಿ ಶಿಕ್ಷಣ ಕ್ಷೇತ್ರ ಅವ್ಯವಸ್ಥೆಗೆ ಸಿಲುಕಿದೆ. ಕುಲಪತಿ ಇಲ್ಲದೇ ಮೈಸೂರು ವಿವಿ ಗುಣಮಟ್ಟ ಕುಸಿಯುತ್ತಿದೆ. ಅಭಿವೃದ್ಧಿ ಇಲ್ಲದೆ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದೆ. ಮುಕ್ತ ವಿವಿಗೂ ಯುಜಿಸಿ ಮಾನ್ಯತೆ ಇಲ್ಲದಂತಾಗಿದೆ. ಇದು ಸರ್ಕಾರಕ್ಕೆ ಶೈಕ್ಷಣ ಕ ಕ್ಷೇತ್ರದ ಬಗ್ಗೆ ಕಳಕಳಿ ಇಲ್ಲದಿರುವುದನ್ನು ತೋರಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನೆಲೆ ಹಿನ್ನೆಲೆಯ ಕೆ.ಆರ್.ಗೋಪಾಲಕೃಷ್ಣ, ಸುಷ್ಮಾ, ಅಪ್ಪಣ್ಣ, ಯೋಗೇಶ್, ನವೀನ್‍ರಾವ್ ಉಪಸ್ಥಿತರಿದ್ದರು.