ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಮೈಸೂರು, ಸೆ.7(ಆರ್‍ಕೆಬಿ)- ದೆಹಲಿ ಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಅತ್ಯಾಚಾರ ನಡೆಸಿ, ಭೀಕರ ರೀತಿ ಯಲ್ಲಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಮೈಸೂರು ಪುರಭವನದ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.

ದೇಶ ಕಾಯುವ ಯೋಧರಿಗೆ, ಜನರನ್ನು ರಕ್ಷಿಸುವ ಪೊಲೀಸರಿಗೇ ಭದ್ರತೆ ಇಲ್ಲದಂತಾ ಗಿದೆ. ದೆಹಲಿಯ ಪೊಲೀಸ್ ಅಧಿಕಾರಿ ಯಾಗಿ ನಾಲ್ಕು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ 21 ವರ್ಷದ ಯುವತಿಯ ಮೇಲೆ ದುಷ್ಕರ್ಮಿಗಳು ವಿಕೃತ ರೀತಿ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದರೂ ಆರೋಪಿ ಗಳನ್ನು ಈವರೆಗೆ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿ ಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕು. ಪೊಲೀಸರಿಗೆ ಸೂಕ್ತ ಭದ್ರತೆ ಸಿಗುವಂತಾಗ ಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಸಂಚಾಲಕ ಪಿ. ರಾಜು, ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ, ದೇವರಾಜ ಅರಸು ಸಂಘದ ಡೈರಿ ವೆಂಕಟೇಶ್, ರಾಂ ರಹೀಮ್ ಕ್ಷೇಮಾಭಿವೃದ್ಧಿ ಸಂಘದ ರೆಹಮಾನ್ ಖಾನ್, ಡಾ.ಅಂಬೇಡ್ಕರ್ ದಲಿತ ಮಹಿಳಾ ಸಂಘದ ಬಬಿತಾ, ದಲಿತ ಜನಜಾಗೃತಿ ಮಹಾಸಭಾದ ಸಿ.ಶ್ರೀನಿವಾಸಪ್ರಸಾದ್, ಕಟ್ಟಡ ಕಾರ್ಮಿಕರ ಸಂಘದ ಸಿದ್ದಪ್ಪ, ಬಸವಣ್ಣ, ಅಂತೋಣಿ ರಾಜ್, ಬೀರೇಶ್, ಗಣೇಶಮೂರ್ತಿ ಇನ್ನಿತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.