ಚಾಮರಾಜನಗರ,ಮಾ.3- ಚಾಮುಲ್ ಅಕ್ರಮ ನೇಮಕಾತಿ ರದ್ದು ಮಾಡಿ ಆಡಳಿತ ಮಂಡಳಿಯನ್ನು ಸೂಪರ್‍ಸೀಡ್ ಮಾಡು ವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆ ಗಳ ಒಕ್ಕೂಟದ ವತಿಯಿಂದ ಮಂಗಳ ವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಡಳಿತ ಭವನದ ಎದುರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವೆಂಕಟರಮಣಸ್ವಾಮಿ(ಪಾಪು) ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟ ನಾಕಾರರು, ಚಾಮುಲ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ವೆಂಕಟರಮಣಸ್ವಾಮಿ ಮಾತನಾಡಿ, ಚಾ.ನಗರ ಹಾಲು ಒಕ್ಕೂಟದಲ್ಲಿ 72 ಹುದ್ದೆಗಳನ್ನು ನಿಗದಿಪಡಿಸಿರುವ ಮೀಸ ಲಾತಿ ವರ್ಗೀಕರಣದ ಅನ್ವಯ ನೇಮಕ ಮಾಡಿಕೊಳ್ಳದೇ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ. ಕೂಡಲೇ ಈ ಅಕ್ರಮ ನೇಮಕಾತಿ ರದ್ದುಪಡಿಸಿ, ಚಾಮುಲ್ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡುವಂತೆ ಒತ್ತಾಯಿಸಿದರು.
ನಮ್ಮ ಸಂಘಟನೆ ಹೋರಾಟಕ್ಕೆ ಮಣಿದು ಹಿಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತನಿಖೆಗೆ ಆದೇಶ ಹೊರಡಿಸಿದರು. ಅಧಿಕಾರಿಗಳು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ವರದಿಯನ್ನು ಸದನ ದಲ್ಲಿ ಕೂಲಂಕುಷವಾಗಿ ಪರಿಶೀಲಿಸಿ ಅನ್ಯಾಯವಾಗಿರುವ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಿಕೊಡಬೇಕು. ತಪ್ಪಿಸ್ಥ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ, ಉಪನಿರ್ದೇ ಶಕ ಶ್ರೀಕಾಂತ್ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಅಧ್ಯಕ್ಷ ಡಿ.ಪರಶಿವ ಮೂರ್ತಿ, ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರಸ್ವಾಮಿ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಜನ ಹಿತಾಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ್, ಸಿದ್ದರಾಜು, ಮಲ್ಲು, ಗೋವಿಂದ ರಾಜು, ನಿಜಧ್ವನಿ ಗೋವಿಂದರಾಜು, ಶ್ರೀನಿವಾಸಮೂರ್ತಿ, ಕುಮಾರ್, ಮೂರ್ತಿ, ಮರಪ್ಪ, ಮಹೇಶ್, ಮಹೇಶ್, ನಂಜುಂಡಯ್ಯ ಇತರರಿದ್ದರು.
ವಾಟಾಳ್ ಬೆಂಬಲ
ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಮಾತನಾಡಿ, ಚಾಮುಲ್‍ನಲ್ಲಿ ನಡೆದಿರುವ ಹಗ ರಣದ ಬಗ್ಗೆ ಸಮಗ್ರ ತನಿಖೆಯಾ ಗಬೇಕು ಎಂದು ಒತ್ತಾಯಿಸಿದರು.
ಚಾಮುಲ್‍ನಲ್ಲಿ ಅರ್ಹರಿಗೆ ಕೆಲಸ ದೊರಕಿಲ್ಲ. ಪ್ರತಿ ಕೆಲಸ ವ್ಯಾಪಾರವಾಗಿ ಬಿಟ್ಟಿದೆ. ಸರ್ಕಾರ ಕೂಡಲೇ ಚಾಮುಲ್ ಆಡಳಿತ ಮಂಡಳಿ ಸೂಪರ್‍ಸೀಡ್ ಮಾಡಬೇಕು. ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರು ಪ್ರಾಮಾಣಿಕ ವಾಗಿ ತಪ್ಪಿತಸ್ಥರ ಮೇಲೆ ಕ್ರಮಕೈ ಗೊಳ್ಳಬೇಕು. ಗುಣಮಟ್ಟದ ಹಾಲನ್ನು ತಮಿಳುನಾಡಿಗೆ ಸರಬರಾಜು ಮಾಡು ತ್ತಿದ್ದು, ರಾಜ್ಯದ ಜನತೆಗೆ ಕಳಪೆ ಹಾಲನ್ನು ನೀಡುತ್ತಿದೆ. ಇದನ್ನು 15 ದಿನಗಳೊಳಗೆ ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಹೋರಾಟ ಮಾಡಲಾಗು ವುದು ಎಂದು ಎಚ್ಚರಿಸಿದರು.