ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬದನಗುಪ್ಪೆ, ಜು.9(ಮಲ್ಲಣ್ಣ)-ಚಾಮರಾಜ ನಗರ-ಮುತ್ತಿಗೆ ಗ್ರಾಮದ ಸಮೀಪವಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವ ರಣದಲ್ಲಿ ವರುಣಾ ಕ್ಷೇತ್ರ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಶ್ರೀ ಬೀರ ಲಿಂಗೇಶ್ವರಸ್ವಾಮಿ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರು, ಈ ಭವನ ನಿರ್ಮಾಣಕ್ಕೆ ಹಿಂದು ಳಿದ ವರ್ಗಗಳ ಇಲಾಖೆಯಿಂದ 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಇದು ನನ್ನ ಕ್ಷೇತ್ರವಾಗಿಲ್ಲದಿದ್ದರೂ ನನ್ನ ತಂದೆಯ ಹಾಗೂ ನನ್ನ ಮೇಲಿನ ಪ್ರೀತಿ, ವಿಶ್ವಾಸ, ಅಭಿಮಾನದಿಂದ ಕರೆದು ಗುದ್ದಲಿ ಪೂಜೆ ನೆರವೇರಿಸಿದ್ದೀರಿ ಹಾಗೂ ನಿಮ್ಮನ್ನೆಲ್ಲ ಭೇಟಿ ಮಾಡುವ ಅವಕಾಶ ಸಿಕ್ಕಿದೆ. ನೀವು ತೋರಿ ಸುವ ಗೌರವಕ್ಕೆ ಸದಾ ಅಭಾರಿ ಎಂದರು.

ಈ ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಂಸದ ಆರ್.ಧ್ರುವನಾರಾಯಣ್ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಆಗಮಿಸಿ ದೇವರ ದರ್ಶನ ಪಡೆದು ಶುಭ ಕೋರಿದರು. ಈ ವೇಳೆ ಗುಂಡ್ಲುಪೇಟೆ ಕ್ಷೇತ್ರದ ಮುಖಂಡ ಗಣೇಶ್ ಪ್ರಸಾದ್, ಜಿಪಂ ಮಾಜಿ ಸದಸ್ಯರಾದ ಬಾಲರಾಜು, ಕೆರೆಹಳ್ಳಿ ನವೀನ್ ಹಾಗೂ ತಾಲೂಕು ಕುರುಬ ಸಂಘದ ಉಪಾಧ್ಯಕ್ಷ ಆರ್. ಉಮೇಶ್, ನಿರ್ದೇಶಕರಾದ ಸೋಮಣ್ಣೆಗೌಡ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಸಂಘದ ಗೌರವಾಧ್ಯಕ್ಷ ಹೆಚ್.ಎನ್.ಬಸವರಾಜು, ಅಧ್ಯಕ್ಷ ಬಿ.ಬಸವರಾಜು, ಉಪಾಧ್ಯಕ್ಷ ಎಂ.ಬಿ.ಗುರುಸ್ವಾವಿ ಮುತ್ತಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.