ಬೆಂಗಳೂರು ಪಾದರಾಯನಪುರದಲ್ಲಿ ಪುಂಡರ ದಾಂಧಲೆ; ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಯತ್ನ

ಬೆಂಗಳೂರು, ಏ.19- ಬೆಂಗಳೂ ರಿನ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರನ್ನು ಕ್ವಾರಂ ಟೇನ್‍ಗೆ ಕರೆದೊಯ್ಯಲು ಭಾನುವಾರ ರಾತ್ರಿ ಬಂದ ವೈದ್ಯಕೀಯ ಸಿಬ್ಬಂದಿ, ಅವರ ರಕ್ಷಣೆಗೆ ಬಂದಿದ್ದ ಪೊಲೀಸರ ಮೇಲೆಯೇ ಸ್ಥಳೀಯ ನಿವಾಸಿಗಳಾದ ನೂರಾರು ಪುಂಡರು ದಾಳಿ ನಡೆಸಿ ದ್ದಾರೆ. ಸ್ಥಳೀಯರ ದುಂಡಾವರ್ತನೆಗೆ ಅಂಜಿದ ಪೊಲೀಸರು, ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಸ್ಥಳದಿಂದ ಕಾಲ್ಕಿತ್ತಿ ದ್ದಾರೆ. ಕೈಬೆರಳೆಣಿಕೆಯಷ್ಟಿದ್ದ ಪೊಲೀಸ್ ಸಿಬ್ಬಂದಿಯೂ ಕ್ರಮ ಕೈಗೊಳ್ಳಲು ಹೆದರಿ ಹಿಂದೆ ಸರಿದಿದ್ದಾರೆ. ಸದ್ಯ ಪಾದ ರಾಯನಪುರದಲ್ಲಿ ಉದ್ವಿಗ್ನತೆ ನೆಲೆಸಿದ್ದು, ಸದ್ಯ ಕೆಎಸ್‍ಆರ್‍ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಪಾದರಾಯನಪುರದ 58 ಮಂದಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಕೆಲವರು ಕ್ವಾರಂಟೈನ್‍ಗೆ ಒಪ್ಪಿದರೂ, ಹೆಚ್ಚಿನವರು ವಿರೋಧ ವ್ಯಕ್ತಪಡಿ ಸಿದರು. ವೈದ್ಯಕೀಯ ಸಿಬ್ಬಂದಿಗಳನ್ನೇ ನಿಂದಿಸಿ ಹಲ್ಲೆಗೆ ಮುಂದಾದರು. ಇವರಿಗೆ ಕೆಲವು ಸ್ಥಳೀಯರೂ ಬೆಂಬಲ ಸೂಚಿಸಿದ್ದರಿಂದ ಗಲಭೆ ಜೋರಾಯಿತು. ಪೊಲೀಸ್, ವೈದ್ಯಕೀಯ ಸಿಬ್ಬಂದಿಗಳ ಕ್ರಮಕ್ಕೆ ಅಡ್ಡಿಪಡಿಸಿದ ಕೆಲ ಸ್ಥಳೀಯರು, ಕೆಲ ಪುಂಡರು ರೌಡಿಗಳ ರೀತಿಯಲ್ಲಿ ವರ್ತಿಸಿದರು. ಪೆÇಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಟೆಂಟ್‍ಗಳನ್ನು ಧ್ವಂಸಗೊಳಿಸಿ ಗದ್ದಲ ಎಬ್ಬಿಸಿದರು. ವೈದ್ಯಕೀಯ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆಗೂ ಯತ್ನಿಸಿದರು. ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗೆಂದು ಬಂದಿದ್ದ ಪೊಲೀಸರು ಅಲ್ಪ ಸಂಖ್ಯೆಯಲ್ಲಿದ್ದುದರಿಂದ ಕ್ರಮ ಕೈಗೊಳ್ಳಲು ಹಿಂಜರಿದರು.

ಪೆÇಲೀಸ್ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿರುವುದನ್ನು ಗಮನಿಸಿದ ಪುಡಿ ರೌಡಿಗಳು ದಾಂಧಲೆ ನಡೆಸಿದರು. ಏಕಾಏಕಿ ಗುಂಪು ಕಟ್ಟಿಕೊಂಡು ವಾಹನಗಳಲ್ಲಿ ಬಂದ ಜನರನ್ನು ನೋಡಿ ಬೆಚ್ಚಿದ ಪೆÇಲೀಸರು ಹೆಜ್ಜೆ ಹಿಂದಿಟ್ಟರು. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಏರುತ್ತಲೇ ಇದ್ದು, ನಿಯಂತ್ರಣಕ್ಕೆ ಸರ್ಕಾರ ಮತ್ತು ಆಡಳಿತ ಹರಸಾಹಸ ಮಾಡುತ್ತದೆ. ಪಾದರಾಯನಪುರದಲ್ಲಿ ಸೆಕೆಂಡರಿ ಕಾಟ್ಯಾಂಕ್ಟ್‍ನಲ್ಲಿದ್ದವರನ್ನು ಲಿಸ್ಟ್ ಸಿದ್ಧವಾಗಿತ್ತು. 58 ಜನರನ್ನು ಕ್ವಾರಂಟೈನ್ ಮಾಡಲು ಸ್ಥಳೀಯ ಹೊಟೇಲ್‍ನಲ್ಲಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಬಿಬಿಎಂಪಿಯ ಆರೋಗ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಮೊದಲಿಗೆ 15 ಜನರು ತಾವಾಗಿಯೇ ಕ್ವಾರಂಟೈನ್‍ನಲ್ಲಿರುವುದಾಗಿ ಆರೋಗ್ಯ ಸಿಬ್ಬಂದಿ ಜತೆಗೆ ಬಂದಿದ್ದಾರೆ. ಆದರೆ, ಉಳಿದವರು ಮಾತ್ರ ಬಲವಾಗಿ ವಿರೋಧಿಸಿದ್ದಾರೆ. ಸ್ಥಳೀಯ ಶಾಸಕರು ಬಂದ ನಂತರವಷ್ಟೇ ಅವರೊಂದಿಗೆ ಚರ್ಚಿಸಿ ಕ್ವಾರಂಟೈನ್‍ಗೆ ತೆರಳುವುದಾಗಿ ಷರತ್ತು ತಕರಾರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳೀಯ ಕಾಪೆರ್Çೀರೇಟರ್ ಇಮ್ರಾನ್ ಪಾಷಾ, ಕೆಲ ಯುವಕರು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದು ಭಾನುವಾರವಾದ್ದರಿಂದ ಪೆÇಲೀಸರು ಕಡಿಮೆ ಸಂಖ್ಯೆಯಲ್ಲಿದ್ದರು. ನಗರದಲ್ಲಿ ಈ ರೀತಿ ಘಟನೆ ನಡೆದಿದ್ದು ಇದೇ ಮೊದಲು. ಪಾದರಾಯನಪುರದ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಇಲ್ಲ. ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದಿದ್ದಾರೆ.