ಪಂಜಾಬ್ ಸೋಲು: ಕರ್ನಾಟಕಕ್ಕೆ ಎಚ್ಚರಿಕೆ ಗಂಟೆ!

ಪAಜಾಬ್‌ನಲ್ಲಿ ಸಿಎಂ ಚನ್ನಿ-ಸಿಧು ಕಚ್ಚಾಟದಿಂದ ಹೀನಾಯ ಸೋಲು

ಕರ್ನಾಟಕದಲ್ಲಿ ಸಿದ್ದು-ಡಿಕೆಶಿ ಶೀತಲ ಸಮರದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋಗುವ ಆತಂಕ
ಬೆAಗಳೂರು, ಮಾ.೧೦(ಕೆಎಂಶಿ)- ಕರ್ನಾಟಕದಲ್ಲಿನ ಕಾಂಗ್ರೆಸ್ ನಾಯಕರ ಮುಸುಕಿನ ಗುದ್ದಾಟದಿಂದ ಮುಂಬ ರುವ ಚುನಾವಣೆಯಲ್ಲಿ ಪಂಜಾಬ್‌ನ ಸ್ಥಿತಿಯೇ ಇಲ್ಲಿಯೂ ಎದುರಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ೪ ರಾಜ್ಯಗಳಲ್ಲಿ ಮತ್ತೆ ಅಧಿಕಾರದ ಚುಕ್ಕಾಣ ಹಿಡಿಯುತ್ತಿದ್ದು, ಪಂಜಾಬ್‌ನಲ್ಲಿ ಮಾತ್ರ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಪ್ರಬಲ ಎದುರಾಳಿ ಇಲ್ಲದಿದ್ದರೂ ಆಡಳಿತ ದಲ್ಲಿದ್ದ ಕಾಂಗ್ರೆಸ್, ಪ್ರಾದೇಶಿಕ ಪಕ್ಷದ ಮುಂದೆ ಹೀನಾಯ ಸೋಲು ಅನುಭವಿಸ ಬೇಕಾಯಿತು. ಅಲ್ಲಿನ ಮುಖ್ಯಮಂತ್ರಿ ಚನ್ನಿ ಹಾಗೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವ ಜೋತ್ ಸಿಂಗ್ ಸಿಧು ನಡುವಿನ ಆಂತ ರಿಕ ಕಚ್ಚಾಟದಿಂದ ಪಕ್ಷ ಅಧಿಕಾರ ಕಳೆದು ಕೊಂಡಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಕನಸು ಕಂಡಿದೆ. ಇದಕ್ಕೆ ಪೂರಕ ವಾತಾವರಣವೂ ಇದೆ. ಆದರೆ, ಪಂಜಾಬ್ ಮಾದರಿಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಸಾಮರಸ್ಯವೇ ಇಲ್ಲ. ಇವರ ಪರಸ್ಪರ ಕಚ್ಚಾಟ ನಿಲ್ಲಿ ಸಲು ಹೈಕಮಾಂಡ್‌ಈಗಾಗಲೇ ೨ ಬಾರಿ ಸಂಧಾನ ಸಭೆಗಳನ್ನು ನಡೆಸಿದೆ, ಆದರೂ ಪ್ರಯೋ ಜನವಾಗಿಲ್ಲ. ಶಿವಕುಮಾರ್ ಯಾರ ವಿಶ್ವಾಸವನ್ನೂ ಪಡೆಯದೆ ಪಕ್ಷವನ್ನು ತಮ್ಮ ಮನಬಂದAತೆ ಮುನ್ನಡೆಸುತ್ತಿದ್ದಾರೆ. ಈ ಕುರಿತು ಸಿದ್ದರಾಮಯ್ಯ, ಆಪ್ತರ ಬಳಿ ನೇರವಾಗಿ ಆರೋಪಗಳನ್ನು ಮಾಡಿದ್ದಾರೆ. ಇವರ ನಡೆಯಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ, ನನ್ನನ್ನೂ ಸೇರಿದಂತೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಎಲ್ಲಾ ವಿಷಯಗಳಲ್ಲೂ ಏಕಾಂಗಿ ನಿರ್ಧಾರ ಕೈಗೊಂಡು ಮುನ್ನಡೆಯುತ್ತಾರೆ, ನಾವು ವಿಧಿಯಿಲ್ಲದೆ ಕೈಜೋಡಿಸಬೇಕಾಗಿದೆ, ಅವರ ಹೋರಾಟ ಗಳಿಂದ ಪಕ್ಷಕ್ಕೆ ಯವುದೇ ಪ್ರಯೋಜನ ಇಲ್ಲ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿ ದ್ದಾರೆ. ಇದಾವುದನ್ನೂ ಲೆಕ್ಕಿಸದೆ ಶಿವಕುಮಾರ್, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲು ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳುತ್ತಿದ್ದಾರೆ.

ಇವರಿಬ್ಬರ ನಡೆ, ಪಕ್ಷದ ಇತರ ನಾಯಕರು ಮತ್ತು ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದೆ. ನಮಗಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಬದಲು, ಈ ನಾಯಕರ ಆಂತರಿಕ ಕಚ್ಚಾಟ, ದೊರೆಯಲಿರುವ ಅಧಿಕಾರವೂ ದೊರೆಯದಂತಾಗ ಲಿದೆ ಎಂಬ ಭಾವನೆ ಬರುತ್ತಿದೆ. ಶಿವಕುಮಾರ್ ಅವರಿಗೆ ಹಳೆ ಮೈಸೂರಿನಲ್ಲೂ ಪ್ರಾಬಲ್ಯವಿಲ್ಲ, ತುಮಕೂರಿನಿಂದೀಚೆಗೆ ಅವರನ್ನು ಕೇಳುವವರಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ಅವರಿಗೆ ಪ್ರತಿ ಕ್ಷೇತ್ರದಲ್ಲೂ ಬೆಂಬಲವಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಬದಲು ವ್ಯಕ್ತಿ ಪ್ರತಿಷ್ಠೆ ಮತ್ತು ಸಿಎಂ ಪಟ್ಟಕ್ಕಾಗಿ ಅಧಿಕಾರ ಬರುವ ಮುನ್ನವೇ ಪಕ್ಷವನ್ನು ತುಳಿಯಲಾಗುತ್ತಿದೆ. ಇವರು ತಮ್ಮ ಧೋರಣೆಗಳನ್ನು ಸರಿಪಡಿಸಿಕೊಳ್ಳದಿದ್ದರೆ, ಪಂಜಾಬ್ ಸ್ಥಿತಿಯೇ ಇಲ್ಲೂ ಎದುರಾಗಲಿದೆ ಎಂಬ ಮಾತುಗಳೂ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.