ರೈಲ್ವೆ ಖಾಸಗೀಕರಣ ವಿರೋಧಿಸಿ ರೈಲ್ವೆ ನೌಕರರ ಪ್ರತಿಭಟನೆ

ಮೈಸೂರು, ಆ.9(ಆರ್‍ಕೆಬಿ)- ರೈಲ್ವೆ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ (ಹುಬ್ಬಳ್ಳಿ) ಮೈಸೂರು ಘಟಕದ ರೈಲ್ವೆ ನೌಕರರು ಭಾನುವಾರ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. `ರೈಲ್ವೆ ಉಳಿಸಿ-ದೇಶ ಉಳಿಸಿ’. ರೈಲ್ವೆಯನ್ನು ಖಾಸಗಿಗೆ ಹಸ್ತಾಂತರಿಸು ವುದು ಬೇಡ, ಕೋವಿಡ್-19ನಿಂದ ಸಾವಿ ಗೀಡಾದ ಸಿಬ್ಬಂದಿಯ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ರೈಲ್ವೆ ಪೆÇ್ರಡ ಕ್ಷನ್ ಘಟಕಗಳ ಸಾಂಸ್ಥೀಕರಣ ನಿಲ್ಲಿಸ ಬೇಕು. ಎನ್‍ಪಿಎಸ್ ನಿಲ್ಲಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಪರಿಚಯಿಸಬೇಕು. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂಬ ಘೋಷಣೆ ಗಳನ್ನು ಕೂಗಿದರು. 1942ರ ಆ.9ರಂದು ಮಹಾತ್ಮ ಗಾಂಧಿ ದೇಶದಲ್ಲಿ ಬ್ರಿಟಿಷರ ಆಡಳಿತ ಕೊನೆಗಾಣಿಸಲು ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿದರು. ನವದೆಹಲಿಯ ಆಲ್ ಇಂಡಿಯಾ ರೈಲ್ವೆ ಮೆನ್ಸ್ ಫೆಡರೇಷನ್ (ಎಐಆರ್‍ಎಫ್) ಅದೇ ದಿನವಾದ ಆಗಸ್ಟ್ 9ರಂದು `ರೈಲು ಉಳಿಸಿ-ದೇಶ ಉಳಿಸಿ’ ಪ್ರತಿಭಟನೆಗೆ ಕರೆ ನೀಡಿದೆ. ನೈರುತ್ಯ ರೈಲ್ವೆ ಮಜ್ದೂರ್ ಸಂಘದ ಮೈಸೂರು ಘಟಕ ಇಂದು ಪ್ರತಿಭಟನೆ ನಡೆಸಿದ್ದೇವೆ ಎಂದ ಸಂಘದ ವಿಭಾಗೀಯ ಕಾರ್ಯದರ್ಶಿ ಪಿ.ಶಿವ ಪ್ರಕಾಶ್ ತಿಳಿಸಿದರು.

ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ರೈಲ್ವೆ ಖಾಸಗೀಕರಣ ಕೈಬಿಡಬೇಕು ಎಂದು ಆಗ್ರಹಿಸಿದರು. ಸಂಘದ ವಿಭಾಗೀಯ ಅಧ್ಯಕ್ಷ ಎಸ್.ಸೋಮ ಶೇಖರ್, ಪದಾಧಿಕಾರಿಗಳಾದ ನಾಗೇಂ ದ್ರನ್, ಫರ್ನಾಂಡಿಸ್, ಶ್ರೀಪತಿ, ವಿ.ಶಿವ ಕುಮಾರ್, ಸಿ.ಶಿವಕುಮಾರ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.