ಮೈಸೂರಲ್ಲಿ ಸತತ 5ನೇ ದಿನವೂ ಮಳೆ

ಮೈಸೂರು,ಮೇ 29(ವೈಡಿಎಸ್)-ಮೈಸೂರಲ್ಲಿ ಶುಕ್ರವಾರ ರಾತ್ರಿಯೂ ಮಿಂಚು-ಗುಡುಗಿನೊಂದಿಗೆ ಜೋರು ಮಳೆ ಸುರಿಯಿತು.
ಕಳೆದ 5 ದಿನಗಳಿಂದ ಜೋರು ಮಳೆ ಸುರಿಯುತ್ತಿದೆ. ಶುಕ್ರವಾರ ರಾತ್ರಿಯೂ 9 ಗಂಟೆಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರಾಗಿ ಸುರಿಯಿತು. ತಡರಾತ್ರಿವರೆಗೂ ಹನಿ ಹಾಕುತ್ತಿತ್ತು.

ಮನೆಗಳಿಗೆ ನೀರು ನುಗ್ಗಿದ, ಮರ ಅಥವಾ ವಿದ್ಯುತ್ ಕಂಬ ಮುರಿದು ಬಿದ್ದಿ ರುವ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಪಾಲಿಕೆ ಸಹಾಯವಾಣಿ ಸಿಬ್ಬಂದಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ನಿನ್ನೆ: ಗುರುವಾರ ರಾತ್ರಿ ಸುರಿದ ಮಳೆಗೆ ಕುವೆಂಪು ನಗರ ಅಮ್ಮ ಕಾಂಪ್ಲೆಕ್ಸ್ ಬಳಿ, ನವಿಲು ರಸ್ತೆ 6ನೇ ಕ್ರಾಸ್, ರಾಮಕೃಷ್ಣನಗರ, ವಿದ್ಯಾರಣ್ಯಪುರಂನ ಸಾರ್ವಜನಿಕ ಹಾಸ್ಟೆಲ್ ಹಿಂಭಾಗ ಮರಗಳು ಧರೆಗುರುಳಿದ್ದರೆ, ಅಗ್ರಹಾರದ ಅನಘ ಆಸ್ಪತ್ರೆ ಬಳಿ ಮತ್ತು ಮಾಲ್ ಆಫ್ ಮೈಸೂರ್ ಬಳಿ ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಪಾಲಿಕೆಯ `ಅಭಯ’ ತಂಡ ಸ್ಥಳಕ್ಕೆ ತೆರಳಿ ಮರ, ಕೊಂಬೆಗಳನ್ನು ತೆರವುಗೊಳಿಸಿದೆ