ನಿರಾಶ್ರಿತರ ಶಿಬಿರದಲ್ಲಿದ್ದ ರಾಜಾಸ್ತಾನಿಗಳು ಮರಳಿ ಮನೆಗೆ

ಮೈಸೂರು,ಮೇ 6(ಆರ್‍ಕೆಬಿ)- ಲಾಕ್ ಡೌನ್‍ನಿಂದಾಗಿ ಊರು ಸೇರಲಾಗದೇ ಮೈಸೂರಿನ ನಿರಾಶ್ರಿತ ಕೇಂದ್ರದಲ್ಲಿ ಲಾಕ್ ಆಗಿದ್ದ ರಾಜಸ್ತಾನದ 170 ಮಂದಿಗೆ ಅವರ ವರ ಊರಿಗೆ ತೆರಳುವ ಅವಕಾಶ ಲಭಿಸಿದೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ವಿವಿಧೆಡೆ ಮೇವಾಡ್ ಐಸ್‍ಕ್ರೀಂ, ಪಾನಿಪುರಿ, ಬೇಲ್‍ಪುರಿ ವ್ಯಾಪಾರ ಮಾಡಿ ಕೊಂಡಿದ್ದ ರಾಜಸ್ತಾನ ಮೂಲದ 23 ಮಹಿಳೆ ಯರು, 22 ಮಕ್ಕಳು ಸೇರಿದಂತೆ 170 ಮಂದಿ ಕಳೆದ 35 ದಿನಗಳಿಂದ ಸಿದ್ದಾರ್ಥ ನಗರದ ಸಿಐಟಿಬಿ ಛತ್ರದಲ್ಲಿ ಆಶ್ರಯ ಪಡೆದಿದ್ದರು.

2 ಲಾರಿಗಳಲ್ಲಿ ಮಾ.30ರಂದು ರಾಜ ಸ್ತಾನದತ್ತ ಹೊರಟಿದ್ದ ಇವರನ್ನು ಶಹಾಪುರ ಬಳಿ ಮಹಾರಾಷ್ಟ್ರ ಪೆÇಲೀಸರು ತಡೆದು ಮೈಸೂರಿಗೆ ವಾಪಸ್ ಕಳುಹಿಸಿದ್ದರು. ಏ.1 ರಂದು ಮೈಸೂರಿಗೆ ವಾಪಸಾದ ಇವರನ್ನು ಮೈಸೂರು ರಿಂಗ್ ರಸ್ತೆ ಬಳಿ ಆಲನಹಳ್ಳಿ ಪೆÇಲೀಸರು ತಡೆದು ಸಿಐಟಿಬಿ ಛತ್ರದ ನಿರಾ ಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಿದ್ದರು. ಅಂದಿ ನಿಂದಲೂ ಇವರು ರಾಜಸ್ತಾನಕ್ಕೆ ಹೋಗಬೇಕು. ತಮ್ಮ ಕುಟುಂಬಗಳನ್ನು ಸೇರಬೇಕು ಎಂಬ ಪ್ರಯತ್ನ ನಡೆಸಿದ್ದರು. ಅದಕ್ಕೆ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಈ ಬಗ್ಗೆ ‘ಮೈಸೂರು ಮಿತ್ರ’ ವರದಿ ಮಾಡಿತ್ತು.

ಹುಟ್ಟೂರಿಗೆ ತೆರಳಿ ಕುಟುಂಬದೊಂದಿಗೆ ಸೇರಬೇಕೆಂಬ ಅವರ ಆಶಯ ಈಡೇರ ದಿದ್ದರೂ, ಇಂದು ಮೈಸೂರಿನ ರಮ್ಮನ ಹಳ್ಳಿ, ಶಾಂತಿನಗರ, ದೇವೇಗೌಡ ಸರ್ಕಲ್ ಇನ್ನಿತರ ಬಡಾವಣೆಗಳ ತಮ್ಮ ಮನೆಗಳಿಗೆ ಸೇರಿಕೊಂಡರು. 29 ಮಂದಿಯ ಮೊದಲ ತಂಡವನ್ನು ಮಂಗಳವಾರ ಜಿಲ್ಲಾಡಳಿತದ ಅನುಮತಿ ಮೇರೆಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಕರೆದೊಯ್ದು ಅವರ ಮನೆ ಗಳಿಗೆ ತಲುಪಿಸಲಾಯಿತು.

31 ಮಂದಿಯ ಎರಡನೇ ತಂಡ ಇಂದು ಎರಡು ಲಾರಿಗಳಲ್ಲಿ ಕಡಕೊಳ, ಬನ್ನೂರು, ಮಳವಳ್ಳಿ, ಮಲೆಯೂರು, ಮೂಗೂರು, ಸಿದ್ದರಾಮನಹುಂಡಿ ಗ್ರಾಮಗಳಿಗೆ ತೆರಳಿ ದರು. ಉಳಿದವರು ಗುರುವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ತಮ್ಮ ಮನೆಗಳಿಗೆ ತೆರಳುವ ಸಾಧ್ಯತೆಯಿದೆ.