ನಾಗಮಂಗಲದಲ್ಲಿ ರಾಜ್ಯೋತ್ಸವ ಪೂರ್ವಭಾವಿ ಸಭೆ

ನಾಗಮಂಗಲ, ಅ.27(ಮಹೇಶ್)- ತಹಶೀಲ್ದಾರ್ ಕುಂಞÂ ಅಹಮದ್ ಅವರ ನೇತೃತ್ವ ದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳ ಗೊಂಡಂತೆ ಕನ್ನಡ ರಾಜ್ಯೋತ್ಸವ ಪೂರ್ವ ಭಾವಿ ಸಭೆಯು ಮಂಗಳವಾರ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನು ಬೆಳಗ್ಗೆ 11-30 ಕ್ಕೆ ನಿಗದಿಯಾಗಿತ್ತು. ತಹಶೀಲ್ದಾರ್ ನಿಗದಿತ ಸಮಯಕ್ಕೆ ಬಂದಿದ್ದರೂ ಕೆಲ ಇಲಾಖೆ ಅಧಿಕಾರಿಗಳು ಗೈರು ಹಾಜ ರಾಗಿದ್ದು ಎದ್ದು ಕಾಣುತ್ತಿತ್ತು. ತಹಶೀಲ್ದಾರ್ ಕುಂಞÂ ಅಹಮದ್ ಇಲಾಖೆ ಅಧಿಕಾರಿ ಗಳಿಗೆ ಫೆÇೀನ್ ಮುಖಾಂತರ ಮಾತ ನಾಡಿದರೂ ಸಹ ಕೆಲ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಕಂಡು ಹಲವರಿಗೆ ನೋಟೀಸ್ ಕೊಡುವ ತೀರ್ಮಾನವನ್ನು ಕೈಗೊಂಡರು.

ಪೂರ್ವಭಾವಿ ಸಭೆಯಲ್ಲಿ ತಹಸಿಲ್ದಾರ್ ಕುಂ.ಜಿ ಅಹಮದ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಎಂಬುದು ನಾಡು, ಭಾಷೆಗೆ ಗೌರವ ಸಲ್ಲಿಸುವ ದಿನವಾಗಿದೆ. ಅಲ್ಲದೇ ಸರ್ಕಾರದ ಸುತ್ತೋಲೆಯಂತೆ ಕೊರೊನಾ ಮಾರ್ಗ ಸೂಚಿಯಂತೆ ಕಾರ್ಯ ಕ್ರಮವನ್ನು ಆಯೋಜಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿದ ನಂತರ ತಾಲ್ಲೂಕು ಕಚೇರಿಯ ಆವರಣ ದಲ್ಲಿ ಅತ್ಯಂತ ಸರಳ ರೀತಿ ಯಲ್ಲಿ ಆಚರಿಸಲು ತೀರ್ಮಾನಿಸಲಾಯಿತು.

ಜೊತೆಗೆ ಪೂರ್ವಭಾವಿ ಸಭೆಯಲ್ಲಿ ರಾಜ್ಯೋತ್ಸವ ಸಂದರ್ಭದಲ್ಲಿ ಕೋವಿಡ್ ಹರಡುವ ಸಂಭವ ಇರುವುದರಿಂದ ಸರಳವಾಗಿ ತಾಲೂಕು ಕಚೇರಿಯ ಆವರಣ ದಲ್ಲಿ ಆಚರಿಸಲು ತೀರ್ಮಾನಿಸಲಾಯಿತು. ಅಲ್ಲದೇ ವಿವಿಧ ಇಲಾಖೆಗೆ ಅಧಿಕಾರಿಗಳಿಗೆ ಕಾರ್ಯ ಕ್ರಮಗಳ ಬಗ್ಗೆ ಜವಾಬ್ದಾರಿಯನ್ನು ನೀಡಲಾಯಿತು.

ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಬೇಡವೆಂದು ತೀರ್ಮಾನಿಸ ಲಾಯಿತು. ಪಿಎಸ್ ಐ ರವಿಕಿರಣ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರವಿಕುಮಾರ್, ಶಿರಸ್ತೇದಾರ್ ಪ್ರಕಾಶ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಫೋಟೊ: 03