ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಶುಭಕೋರಿದ ಶಾಸಕ ರಾಮದಾಸ್

ಮೈಸೂರು, ಜೂ.25(ಎಂಟಿವೈ)- ಕೊರೊನಾ ಭಯದ ನಡುವೆಯೂ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಿ ಎಲ್ಲಾ ಊಹಾಪೋಹಗಳಿಗೂ ಕೊನೆ ಹಾಡಿದ್ದಾರೆ ಎಂದು ಶಾಸಕ ಎಸ್.ಎ. ರಾಮದಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಸೇಂಟ್ ಮೇರಿಸ್ ಶಾಲೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಗುರು ವಾರ ಭೇಟಿ ನೀಡಿ, ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಪರೀಕ್ಷಾ ಸಿದ್ಧತೆ, ಕೊರೊನಾ ಕುರಿತು ಸಮಾಲೋಚಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಕೊರೊನಾ ಕಷ್ಟದ ನಡುವೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಬೇಕಾ? ರದ್ದು ಮಾಡ ಬೇಕಾ? ಎಂಬ ಗೊಂದಲ ಉಂಟಾಗಿತ್ತು. ಪರೀಕ್ಷೆಗಾಗಿ ವಿದ್ಯಾರ್ಥಿಗಳು ಸಿದ್ಧತೆ ಮಾಡಿ ಕೊಳ್ಳುತ್ತಿರುವುದನ್ನು ಕಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಜ್ಞರ ಅಭಿಪ್ರಾಯ ಪಡೆದು ಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಹಿನ್ನೆಲೆ ಯಲ್ಲಿ ಇಂದಿನಿಂದ ಪರೀಕ್ಷೆ ಆರಂಭ ವಾಗಿದೆ. ಪರೀಕ್ಷೆ ಬರೆಯಲು ಬರುತ್ತಿದ್ದ 10ನೇ ತರಗತಿ ವಿದ್ಯಾರ್ಥಿಗಳಿಗೆ 25 ವರ್ಷ ಗಳಿಂದಲೂ ಗುಲಾಬಿ ಹೂ ಮತ್ತು ಪೆನ್ ನೀಡಿ ಶುಭ ಕೋರಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಏನನ್ನೂ ಹಸ್ತಾಂತರಿಸಬಾರದೆಂಬ ಕಾರಣದಿಂದ ಕೇವಲ ಶುಭ ಕೋರಿದ್ದೇನೆ ಎಂದರು.

ಪರೀಕ್ಷೆ ಬರೆಯಲು ಮಕ್ಕಳು ವಿಶ್ವಾಸ ದಿಂದ ಬಂದಿದ್ದಾರೆ. ಅವರಲ್ಲಿ ಕೊರೊನಾ ಭಯ ಇಲ್ಲವಾಗಿದೆ. ಕೊರೊನಾ ಬಗ್ಗೆ ನಮಗೆ ಎಚ್ಚರಿಕೆ ಅಗತ್ಯ. ಪರೀಕ್ಷಾ ಕೇಂದ್ರಕ್ಕೆ ಬರ ಬೇಕಿದ್ದರಿಂದ 3 ದಿನದ ಹಿಂದೆ ನಾನೂ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದೆ. ಅದರ ವರದಿ ಬುಧವಾರ ಸಂಜೆ ಬಂದಿದ್ದು, ನೆಗೆಟಿವ್ ಆಗಿದೆ ಎಂದು ವಿವರಿಸಿದರು.

ಮೈಸೂರಲ್ಲಿ ಮತ್ತೆ ಕೊರೊನಾ ಪಾಸಿ ಟಿವ್ ಕೇಸ್ ಹೆಚ್ಚಾಗುತ್ತಿವೆ. ಸೋಂಕಿತರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲರೂ ಎಚ್ಚರಿಕೆ ವಹಿಸ ಬೇಕು. ಜ್ವರ ಮತ್ತಿತರÀ ಲಕ್ಷಣ ಕಂಡು ಬಂದರೆ ತಾವೇ ಹೋಗಿ ಟೆಸ್ಟ್ ಮಾಡಿಸಿ ಕೊಳ್ಳಬೇಕು. ಅನವಶ್ಯಕವಾಗಿ ಮನೆಯಿಂದ ಹೊರಬರುವುದನ್ನು ನಿಲ್ಲಿಸಬೇಕು ಎಂದರು. ಸೋಂಕು ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತದೊಂ ದಿಗೆ ಚರ್ಚಿಸುತ್ತೇನೆ. ಆದರೂ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದ ರೊಂದಿಗೆ ಸ್ಯಾನಿಟೈಸ್ ಬಳಸುವಂತೆ ಸಲಹೆ ನೀಡಿದರು. ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ದಕ್ಷಿಣ ವಲಯ ಬಿಇಒ ರಾಮಾರಾಧ್ಯ, ಇಸಿಓ ಮನೋಹರ್, ಸೇಂಟ್ ಮೇರಿಸ್ ಶಿಕ್ಷಣ ಸಂಸ್ಥೆಯ ತ್ರಿಸಾ ವರ್ಗಿಸ್, ಶಿಕ್ಷಕರ ವೃಂದ, ಶಿಕ್ಷಣ ಇಲಾಖೆಯ ಸರೋ ಜಿನಿ, ಅಂಜುಮನ್ ಸುಲ್ತಾನ್, ಸ್ಥಳೀಯ ರಾದ ಪುರುಷೋತ್ತಮ್ ಮತ್ತು ಪ್ರವೀಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.