ಮೈಸೂರು ಜಿಲ್ಲೆಯ ಪ್ರತಿ ತಾಲೂಕಲ್ಲಿ ಒಂದು ತಾತ್ಕಾಲಿಕ ಮಿನಿ ಆಸ್ಪತ್ರೆ ವ್ಯವಸ್ಥೆಗೆ ಅಗತ್ಯ ಸೌಲಭ್ಯ ಒದಗಿಸಲು ಸಿದ್ಧ

ಮೈಸೂರು,ಏ.19(ಪಿಎಂ)- ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗಾಗಿ ಹಾಸಿಗೆ ಕೊರತೆ ಉಂಟಾದರೆ ಮೈಸೂರು ಜಿಲ್ಲೆಯ ಪ್ರತಿ ತಾಲೂ ಕಿನಲ್ಲಿ ಒಂದೊಂದು ಮಿನಿ ಆಸ್ಪತ್ರೆ ಸೌಕರ್ಯಕ್ಕೆ ಅಗತ್ಯವಿರುವ ಹಾಸಿಗೆಯೂ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಲು ಸುಜೀವ್ ಫೌಂಡೇಶನ್ ಸಿದ್ಧವಿದೆ ಎಂದು ಫೌಂಡೇ ಶನ್‍ನ ಅಧ್ಯಕ್ಷ ರಾಜಾರಾಂ ತಿಳಿಸಿದರು.

ಸೋಮವಾರ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಫೌಂಡೇಶನ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಸ್ತಾಂ ತರಿಸಿ ಅವರು ಮಾತನಾಡಿದರು.

ಸುಜೀವ್ ಫೌಂಡೇಶನ್, ಮೈಸೂರು ಬ್ರಾಹ್ಮಣ ಯುವ ವೇದಿಕೆ ಹಾಗೂ ಕರ್ನಾ ಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಯುಕ್ತಾಶ್ರಯದಲ್ಲಿ ಪ್ರತಿ ತಾಲೂ ಕಿನಲ್ಲಿ 100 ಹಾಸಿಗೆಗಳ ಮಿನಿ ಆಸ್ಪತ್ರೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾ ಗಿದೆ. ಇದಕ್ಕಾಗಿ ಶಾಲಾ-ಕಾಲೇಜು ಸೇರಿದಂತೆ ಯಾವುದೇ ಸಾರ್ವಜನಿಕ ಕಟ್ಟಡದಲ್ಲಿ ಸ್ಥಳೀಯ ಆಡಳಿತ ಸ್ಥಳ ಒದಗಿಸಿದರೆ, ನಮ್ಮ ಈ ಮೂರು ಸಂಘಟನೆಗಳ ಸಹಯೋಗ ದಲ್ಲಿ ಮಿನಿ ಆಸ್ಪತ್ರೆಗೆ ಅಗತ್ಯವಿರುವ ಮೂಲ ಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಕೋವಿಡ್ ಲಾಕ್‍ಡೌನ್ ಸಂದರ್ಭ ದಲ್ಲೂ ಮಾಧ್ಯಮ ಮಿತ್ರರು ಸೋಂಕಿನ ಆತಂಕದ ನಡುವೆ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರು ನಿಜವಾದ ಮುಂಚೂಣಿ ಕೊರೊನಾ ವಾರಿಯರ್ಸ್. ಹೀಗಾಗಿ ಸರ್ಕಾರ ಮಾಧ್ಯಮದವರಿಗೆ ವಿಮಾ ಸೌಲಭ್ಯ ಸೇರಿದಂತೆ ಅಗತ್ಯವಿರುವ ಹೆಚ್ಚುವರಿ ಸವಲತ್ತುಗಳನ್ನು ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ಕೋವಿಡ್ ನಡುವೆ ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗಲು ನಮ್ಮ ಫೌಂಡೇಶನ್‍ನಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಇಂದು ವಿತರಣೆ ಮಾಡಲಾಗಿದೆ. ಪ್ರತಿ ವಾರ ಪತ್ರಕರ್ತ ರಿಗೆ ಅಗತ್ಯವಿರುವ ಮಾಸ್ಕ್ ಮತ್ತು ಸ್ಯಾನಿ ಟೈಸರ್ ಒದಗಿಸಲಾಗುವುದು ಎಂದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಕರ್ನಾ ಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಉಪಾಧ್ಯಕ್ಷ ಎಂ.ಎಸ್.ಬಸವಣ್ಣ (ನಗರ), ಕಾರ್ಯದರ್ಶಿ ಪಿ.ರಂಗಸ್ವಾಮಿ (ನಗರ) ಮತ್ತಿತರರು ಹಾಜರಿದ್ದರು.