ಉದ್ಯಮದ ಪೇಟೆಂಟ್ ನೋಂದಾಯಿಸಿಕೊಳ್ಳಿ: ಸುಧಾಕರ್ ಎಸ್.ಶೆಟ್ಟಿ

ಮೈಸೂರು,ಮಾ.1(ಆರ್‍ಕೆ)-ಉದ್ಯಮದ ಪೇಟೆಂಟ್ ಅನ್ನು ನೋಂದಣಿ ಮಾಡಿಸಿಕೊಳ್ಳಿ ಎಂದು ಎಫ್‍ಕೆ ಸಿಸಿಐ ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಯುವ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹಾಗೂ ಬೆಂಗಳೂರಿನ ಎಂಎಸ್‍ಎಂಇ ಡೆವಲಪ್‍ಮೆಂಟ್ ಇನ್‍ಸ್ಟಿಟ್ಯೂಟ್ ಆಶ್ರಯದಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಒಅಅI) ನೆರವಿನೊಂದಿಗೆ ಮೈಸೂ ರಿನ ದಿ ಕೋರಂ ಹೋಟೆಲ್‍ನಲ್ಲಿ ಆಯೋಜಿಸಿದ್ದ ‘ಇಂಟೆಲೆ ಕ್ಚುಯಲ್ ಪ್ರಾಪರ್ಟಿ ರೈಟ್ಸ್ ಮತ್ತು ಜಿಇಎಂ ಪೋರ್ಟಲ್ (ಉoveಡಿಟಿmeಟಿಣ ಇ-ಒಚಿಡಿಞeಣ Pಟಚಿಛಿe)’ ಕುರಿತ ಅರಿವು ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯುವಕ-ಯುವತಿಯರು ಆರಂಭಿಸುವ ಹೊಸ ಉದ್ಯಮದ ಪೇಟೆಂಟ್, ಲೋಗೋ ಹಾಗೂ ಟ್ರೇಡ್ ಮಾರ್ಕ್ ಅನ್ನು ನೋಂದಣಿ ಮಾಡಿಸಿ ಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಲೋಗೋ ಬಳಸಿ ಬೇರೆ ಕಡೆ ಯಾರಾದರೂ ನಿಮ್ಮದೇ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ ಎಂದು ಅವರು ತಿಳಿಸಿದರು.

ನೀವು ಸಂಪಾದಿಸಿದ ಖ್ಯಾತಿಯನ್ನು ಬಳಸಿಕೊಂಡು ಬೇರೆಯವರು ಲಾಭ ಮಾಡಿಕೊಳ್ಳಲು ಈಗ ಸುಲಭ ಮಾರ್ಗವಿದೆ. ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆ ಇರು ವುದರಿಂದ ನಿಮ್ಮ ಕ್ರಿಯೇಟಿವ್ ಐಡಿಯಾ, ಲೋಗೋ, ಟ್ರೇಡ್‍ಮಾರ್ಕ್‍ಗಳನ್ನು ದುರುಪಯೋಗಪಡಿಸಿ ಕೊಳ್ಳಬಹುದು ಎಂದ ಅವರು, ನಿಮ್ಮ ಉತ್ಪನ್ನಗಳ ಬಗ್ಗೆ ಎಚ್ಚರವಿರಲಿ ಎಂದು ಸಲಹೆ ನೀಡಿದರು.

ಎಂಎಸ್‍ಎಂಇ ನಿರ್ದೇಶಕ ಜಿ.ಆರ್.ಅಕಾದಾಸ, ಉಪನಿರ್ದೇಶಕ ಎಂ.ಶಶಿಕುಮಾರ್, ಇಂಟಿ ಲೆಕ್ಚು ಯಲ್ ಪ್ರಾಪರ್ಟಿ ರೈಟ್ಸ್ ಮುಖ್ಯಸ್ಥ ಪ್ರೊ.ರಾಮಕೃಷ್ಣ, ಎಂಸಿಸಿಐ ಅಧ್ಯಕ್ಷ ಎ.ಎಸ್.ಸತೀಶ್ ಇದ್ದರು.