ಅರಮನೆ ಆವರಣದಲ್ಲಿ 16 ಸಾವಿರ ಯೋಗಪಟುಗಳಿಂದ ಪೂರ್ವಾಭ್ಯಾಸ ಯೋಗ ಪ್ರದರ್ಶನ

ಮೈಸೂರಲ್ಲಿ ಜೂ.೨೧ರ ಅಂತಾರಾಷ್ಟಿçÃಯ ಯೋಗ ದಿನೋತ್ಸವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ

ಮೈಸೂರು, ಜೂ.೧೨(ಆರ್‌ಕೆಬಿ)- ಮೈಸೂರು ಅರಮನೆ ಆವರಣ ದಲ್ಲಿ ಜೂ.೨೧ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗ ವಹಿಸುವ ಅಂತಾರಾಷ್ಟಿçÃಯ ಯೋಗ ದಿನೋತ್ಸವ ಕಾರ್ಯಕ್ರಮದ ಪೂರ್ವಾಭ್ಯಾಸ ಭಾನುವಾರ ಮುಂಜಾನೆ ನಡೆಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ಸುಮಾರು ೧೬ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಯೋಗ ಪ್ರದರ್ಶಿಸಿದರು.

ಸಾಮಾನ್ಯ ಯೋಗ ಶಿಷ್ಟಾಚಾರದ ಆಧಾರದ ಮೇಲೆ ನಡೆದ ೨ನೇ ಅಧಿಕೃತ ಪೂರ್ವಾಭ್ಯಾಸದಲ್ಲಿ ಅರ ಮನೆ ಆವರಣ, ಅಕ್ಕಪಕ್ಕದ ಉದ್ಯಾನ ಗಳಲ್ಲಿ ಯೋಗಪಟುಗಳು ಭಾಗವಹಿಸಿದ್ದರು.

ಮುಂದಿನ ಭಾನುವಾರ (ಜೂ.೧೯) ಮಹತ್ವದ ಪೂರ್ವಾ ಭ್ಯಾಸವನ್ನು ಕೇಂದ್ರ ಆಯುಷ್ ಇಲಾಖೆ ಆಯೋಜಿಸಲಿದೆ ಎಂದು ಹೇಳಲಾಗಿದೆ. ಮೇ ೨೨ರಂದು ಮಹಾರಾಜ ಕಾಲೇಜು ಮೈದಾನದಲ್ಲಿ, ಮೇ ೨೯ರಂದು ಸುತ್ತೂರು ಮಠದಲ್ಲಿ ಪೂರ್ವಾಭ್ಯಾಸ ನಡೆಸಲಾಗಿತ್ತು. ಯೋಗ ಶಿಷ್ಟಾ ಚಾರದಡಿ ಮೊದಲ ಅಧಿಕೃತ ಪೂರ್ವಾಭ್ಯಾಸ ಕಳೆದ ಜೂ.೫ರಂದು ಅರಮನೆ ಆವರಣದಲ್ಲಿ ನಡೆಸಲಾಗಿತ್ತು.

ಇಂದಿನ ಪೂವಾಭ್ಯಾಸ ಯೋಗ ಕಾರ್ಯಕ್ರಮವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪ್ರಧಾನಿ ಮೋದಿ ಯವರು ಉದ್ದೇಶಪೂರ್ವಕವಾಗಿ ಜೂ.೨೧ ಅನ್ನು ಅಂತಾ ರಾಷ್ಟಿçÃಯ ಯೋಗ ದಿನಾಚರಣೆಗೆ ಆಯ್ಕೆ ಮಾಡಿದ್ದಾರೆ. ಅಂದು ಸೂರ್ಯ ಉತ್ತರ ಧ್ರುವದಲ್ಲಿ ೨೪ ಗಂಟೆಯೂ ಇರುತ್ತಾನೆ. ಹಾಗಾಗಿಯೇ ಮೋದಿಯವರು ಆ ದಿನವನ್ನು ಆಯ್ಕೆ ಮಾಡಿದ್ದಾರೆ. ಪ್ರತಿದಿನ ಯೋಗಾಭ್ಯಾಸ ಮಾಡು ವುದರಿಂದ ಆರೋಗ್ಯಕರ ವಿಶ್ವವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗದ ನಿರ್ದೇಶಕ ಡಾ.ಈಶ್ವರ ಬಸವಾರೆಡ್ಡಿ ಮಾತನಾಡಿ, ಮೈಸೂರು ಮಹಾರಾಜರು ಹಲವಾರು ಪುಸ್ತಕಗಳನ್ನು ಬರೆದಿದ್ದು, ಒಂದು ಪುಸ್ತಕದಲ್ಲಿ ಅರಮನೆ ಯೋಗಗುರು ಟಿ.ಕೃಷ್ಣಮಾಚಾರ್ಯ ಅವರನ್ನು ಆಧುನಿಕ ಯೋಗದ ಪಿತಾ ಮಹ ಎಂದು ಉಲ್ಲೇಖಿಸಲ್ಪಟ್ಟಿರುವುದನ್ನು ತಿಳಿಸಿದರು.
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮ ರಾಜ ಒಡೆಯರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಯವರ ಭೇಟಿ ಮೈಸೂರಿಗೆ ವಿಶೇಷ ಹೆಮ್ಮೆ ತರಲಿದೆ. ಯೋಗ ವನ್ನು ಮೊದಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಾರಂಭಿಸಿದರು. ಅರಮನೆ ಹಿಂಭಾಗದಲ್ಲಿರುವ ಸಂಸ್ಕöÈತ ಪಾಠಶಾಲೆಯಲ್ಲಿ ಯೋಗ ಪರಿಚಯಿಸಲಾಯಿತು. ಕೃಷ್ಣಮಾ ಚಾರ್ಯರು ಉಸಿರಾಟ ಮತ್ತು ದೈಹಿಕ ವ್ಯಾಯಾಮದ ಪ್ರಾಮುಖ್ಯತೆ, ಯೋಗ ಆಸನಗಳನ್ನು ಸಂಯೋಜಿಸಿದ ಮೊದಲ ಗುರುಗಳಲ್ಲಿ ಒಬ್ಬರಾಗಿದ್ದಾರೆ. ಅವರ ಶಿಷ್ಯರಾದ ಪಟ್ಟಾಭಿ ಜೋಯಿಸ್ ಮತ್ತು ಬಿಕೆಎಸ್ ಅಯ್ಯಂಗಾರ್ ಅವರು ಯೋಗ ವನ್ನು ವಿಶ್ವಾದ್ಯಂತ ಜನಪ್ರಿಯಗೊಳಿಸಿದರು ಎಂದು ತಿಳಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ಯೋಗ ಫೆಡೆರೇಷನ್ ಆಫ್ ಮೈಸೂರು ಗೌರವಾಧ್ಯಕ್ಷರೂ ಆಗಿರುವ ಶಾಸಕ ಎಸ್.ಎ. ರಾಮದಾಸ್, ಸಂಸದ ಪ್ರತಾಪ್‌ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಅರಮನೆ ಮಂಡಳಿ ಉಪನಿದೇಶಕ ಟಿ.ಎಸ್. ಸುಬ್ರಹ್ಮಣ್ಯ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣ Ãಶ್, ಯೋಗ ಫೆಡರೇಷನ್ ಆಫ್ ಮೈಸೂರು ಅಧ್ಯದಕ್ಷ ಡಿ.ಶ್ರೀಹರಿ, ಉಪಾಧ್ಯಕ್ಷ ಸತ್ಯನಾರಾಯಣ, ಕಾರ್ಯ ದರ್ಶಿ ಡಾ.ಪಿ.ಎನ್.ಗಣೇಶ್‌ಕುಮಾರ್, ಶಶಿಕುಮಾರ್, ಖಜಾಂಚಿ ಬಿ.ಪಿ.ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

 

ಗೂಗಲ್ ರಿಜಿಸ್ಟೆçÃಷನ್ ಲಿಂಕ್ ಸ್ಥಗಿತ ಯೋಗಪಟುಗಳ ನೋಂದಣ ಗೆ ಇಂದು ಆಯುಷ್ ಇಲಾಖೆ ಹೊಸ ಲಿಂಕ್ ಪ್ರಕಟ
ಮೈಸೂರು, ಜೂ.೧೨(ಎಂಟಿವೈ)- ಮೈಸೂರು ಅರಮನೆಯ ಆವರಣ ದಲ್ಲಿ ಜೂ.೨೧ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಅಂತಾ ರಾಷ್ಟಿçÃಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಚ್ಛಿಸುವವರ ನೋಂದಣ ಗಾಗಿ ತೆರೆಯಲಾಗಿದ್ದ ಗೂಗಲ್ ರಿಜಿಸ್ಟೆçÃಷನ್ ಅನ್ನು ಎಸ್‌ಪಿಜಿ ಸೂಚನೆ ಮೇರೆಗೆ ಒಂದೇ ದಿನಕ್ಕೆ ಸ್ಥಗಿತಗೊಳಿಸಲಾಗಿದ್ದು, ಕೆಲವು ಮಾರ್ಪಾಡಿನೊಂದಿಗೆ ಆಯುಷ್ ಇಲಾಖೆ ಸೋಮವಾರ(ಜೂ.೧೩) ಸಂಜೆ ವೇಳೆಗೆ ಹೊಸ ಲಿಂಕ್ ಅನ್ನು ಪ್ರಕಟಿಸಲಿದೆ.

ಈ ಸಂಬAಧ ಶಾಸಕ ಎಸ್.ಎ.ರಾಮದಾಸ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಅಂತಾರಾಷ್ಟಿçÃಯ ಯೋಗದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವ ಯೋಗಪಟುಗಳ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ಶನಿವಾರದಿಂದ ಆರಂಭಿಸಲಾಗಿತ್ತು. ಸುಮಾರು ೧೫೦೦ ರಿಂದ ೧೮೦೦ ಮಂದಿ ಯೋಗಪಟುಗಳು ಹೆಸರು ನೋಂದಾಯಿಸಿದ್ದರು. ಆದರೆ, ಭದ್ರತಾ ಹಿತದೃಷ್ಠಿಯಿಂದ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿರುವ ಯೋಗಪಟುಗಳ ಐಡೆಂಟಿಟಿಗಾಗಿ ಆಧಾರ್ ಕಾರ್ಡ್ ನಂಬರ್ ನಮೂದು, ಕೊರೊನಾ ಲಸಿಕೆ ಪಡೆದಿರುವ ಮಾಹಿತಿ ನಮೂದು ಮಾಡಬೇಕಾದ ಹಿನ್ನೆಲೆಯಲ್ಲಿ ಗೂಗಲ್ ರಿಜಿಸ್ಟೆçÃಷನ್ ಸ್ಥಗಿತಗೊಳಿಸಲಾಗಿದೆ. ನಾಳೆಯಿಂದ ಆಯುಷ್ ಇಲಾಖೆ ಹೊಸದಾಗಿ ನೋಂದಣ ಮಾಡುವ ಲಿಂಕ್ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

ಅರಮನೆ ಆವರಣದಲ್ಲಿ ಈ ಬಾರಿ ೧೫ ಸಾವಿರ ಮಂದಿ ಯೋಗ ಮಾಡಲು ಅವಕಾಶ ದೊರೆಯಲಿದೆ. ಅದರಲ್ಲಿ, ೫ ಸಾವಿರ ಮಂದಿಯನ್ನು ವಿವಿಧ ಯೋಗ ಶಾಲೆಗಳ ಯೋಗಪಟು, ೨೫ ಮಂದಿ ತೃತೀಯಲಿಂಗಿಗಳು, ೧೫ ಮಂದಿ ಹೆಚ್‌ಐವಿ ಪೀಡಿತರು, ೧೦೦ ಮಂದಿ ಕ್ರೀಡಾಪಟುಗಳು, ಆಟೋ ಚಾಲಕರು, ಎನ್‌ಸಿಸಿ, ಎನ್‌ಎಸ್‌ಎಸ್, ಬೀದಿಬದಿ ವ್ಯಾಪಾರಿ, ಟಿಬೇಟಿಯನ್ನರು, ಶ್ರೀಶಕ್ತಿ ಸಂಘ, ಅರಣ್ಯ, ವೈದ್ಯಕೀಯ ಸೇರಿದಂತೆ ವಿವಿಧ ಇಲಾಖೆಯ ತಲಾ ೫೦ ಮಂದಿಗೆ ಅವಕಾಶ ನೀಡಲಾಗುತ್ತದೆ. ೮ ಸಾವಿರ ಮಂದಿ ಹೆಸರನ್ನು ಆನ್‌ಲೈನ್ ಮೂಲಕ ನೊಂದಣ ಮಾಡಿಕೊಳ್ಳಲಾಗುತ್ತದೆ. ಎರಡು ಸಾವಿರ ಮಂದಿಗೆ ಸ್ಥಳಾವಕಾಶ ಕಾಯ್ದಿರಿಸಲಾಗಿದ್ದು, ಅಂದು ಸಚಿವರು, ಕೇಂದ್ರದ ಅಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು, ಅಧಿಕಾರಿ ವರ್ಗ ಸೇರಿದಂತೆ ಗಣ್ಯರಿಗೆ ಮೀಸಲಿಡಲಾಗುತ್ತದೆ ಎಂದು ತಿಳಿಸಿದರು.

ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಶ್ರೀಹರಿ ಮಾತನಾಡಿ, ಭದ್ರತೆಯ ಹಿತದೃಷ್ಠಿಯಿಂದ ಪ್ರಧಾನ ಮಂತ್ರಿಗಳ ಭದ್ರತಾ ವಿಭಾಗದ ಅಧಿಕಾರಿಗಳ ಸೂಚನೆ ಮೇರೆಗೆ ಈ ಹಿಂದೆ ನೋಂದಣ ಮಾಡಿಕೊಳ್ಳುತ್ತಿದ್ದ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಕೆಲವು ಮಾರ್ಪಾಡು ಮಾಡಿ ನಾಳೆಯಿಂದಲೇ ಆಯುಷ್ ಇಲಾಖೆ ನೋಂದಣ ಪ್ರಕ್ರಿಯೆಗೆ ಹೊಸ ಲಿಂಕ್ ಅನ್ನು ಬಿಡುಗಡೆ ಮಾಡಲಿದೆ. ಯೋಗ ಸಂಸ್ಥೆಗಳ ಪ್ರತಿನಿಧಿಸುವ ಯೋಗಪಟುಗಳ ಹೆಸರು ನೋಂದಾಯಿಸುವ ಪ್ರಕ್ರಿಯೆನ್ನು ಐದು ಕಡೆ ಯೋಗ ಸಂಸ್ಥೆಗಳು ಮಾಡುತ್ತಿವೆ ಎಂದರು.