ಲಸಿಕೆ ಪಡೆದ ನಂತರ ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು; ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮೃತನ ಕುಟುಂಬಸ್ಥರು, ಸಂಬಂಧಿಕರ ಪ್ರತಿಭಟನೆ

ಮೈಸೂರು,ನ.೧೫(ಪಿಎಂ)- ಕೋವಿಡ್ ಲಸಿಕೆ ಪಡೆದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲ ಕಾರಿಯಾಗದೇ ಸಾವನ್ನಪ್ಪಿದ್ದು, ಈ ಸಾವಿಗೆ ಲಸಿಕಾ ತಂಡದ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಹಾಗೂ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮೃತ ವ್ಯಕ್ತಿಯ ಕುಟುಂಬಸ್ಥರು, ಸಂಬAಧಿಕರು ಸೋಮ ವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಮೈಸೂರಿನ ಅಶೋಕಪುರಂನ ೬ನೇ ಕ್ರಾಸ್‌ನ ದಿವಂಗತ ಮಾದಯ್ಯ ಎಂಬುವರ ಪುತ್ರ ಸುರೇಶ್ (ಅವಿವಾಹಿತ-೩೯) ಮೃತ ವ್ಯಕ್ತಿ. ಇವರು ಶುಕ್ರವಾರ (ನ.೧೨) ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವ ಕಾರ್ಯ ಕ್ರಮದಡಿ ಮೊದಲ ಡೋಸ್ ಲಸಿಕೆ ಪಡೆದಿ ದ್ದರು. ಕೆಲವೇ ಕ್ಷಣಗಳಲ್ಲಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಭಾನುವಾರ (ನ.೧೪) ಸಂಜೆ ಮೃತಪಟ್ಟರು.
ಈ ಸಾವಿಗೆ ಲಸಿಕಾ ತಂಡ ಮತ್ತು ಆರೋಗ್ಯ ಇಲಾಖೆ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿ ಇಂದು ಮೃತನ ಕುಟುಂಬಸ್ಥರು ಮತ್ತು ಸಂಬAಧಿಕರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿ ದರು. ಮರಣೋತ್ತರ ಪರೀಕ್ಷೆ ಪೂರ್ಣ ಗೊಂಡಿದ್ದರೂ ಶವ ಸ್ವೀಕರಿಸದೇ ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರ ಮಾರ್ಗದ ಗೇಟ್ ಬಳಿ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿ ಭಟನಾಕಾರರು, ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಆಗಮಿಸಬೇಕೆಂದು ಆಗ್ರಹಿಸಿದರು.

ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ, ಪ್ರತಿ ಭಟನಾಕಾರರು ಪಟ್ಟುಬಿಡದೇ ಪ್ರತಿಭಟನೆ ಮುಂದುವರೆಸಿದರು. ಬಳಿಕ ಮೈಸೂರು ಉಪವಿಭಾಗಾಧಿಕಾರಿ ಕಮಲಬಾಯಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಸ್ಥಳಕ್ಕೆ ಜಿಲ್ಲಾ ಧಿಕಾರಿಗಳೇ ಬರಬೇಕೆಂದು ಪ್ರತಿಭಟನಾ ಕಾರರು ಪಟ್ಟು ಹಿಡಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪುರುಷೋತ್ತಮ್, ಸುರೇಶ್ ಅವರದು ಬಡ ಕುಟುಂಬ. ಜೊತೆಗೆ ಇಡೀ ಕುಟುಂಬಕ್ಕೆ ಪೇಂಟರ್ ಕೆಲಸ ಮಾಡು ತ್ತಿದ್ದ ಸುರೇಶ್ ಅವರೇ ಆಧಾರಸ್ತಂಭ. ಆರೋಗ್ಯದ ಬಗ್ಗೆ ಏನೂ ವಿಚಾರಿಸದೇ ಏಕಾಏಕಿ ಅವರಿಗೆ ಲಸಿಕೆ ನೀಡಿದ್ದಾರೆ. ಬಳಿಕ ಕೆಲವೇ ಕ್ಷಣಗಳಲ್ಲಿ ಅಸ್ವಸ್ಥರಾದ ಸುರೇಶ್‌ಗೆ ಮತ್ತೆ ಮತ್ತೊಂದು ಲಸಿಕೆ ನೀಡಿದ್ದಾರೆ. ಎರಡನೇ ಬಾರಿಗೆ ನೀಡಿದ ಲಸಿಕೆ ಯಾವುದೆಂದೂ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಡೀ ಭಾರತದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದ್ದು, ಇಂತಹ ಘಟನೆ ಮತ್ತೆ ಎಲ್ಲಿಯೂ ಮರುಕಳಿಸಬಾರದು. ಈ ನಿಟ್ಟಿ ನಲ್ಲಿ ಜಿಲ್ಲಾಡಳಿತವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೊತೆಗೆ ಮೃತನ ಕುಟುಂ ಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಬೇಜ ವಾಬ್ದಾರಿ ತೋರಿದವರಿಗೆ ಕಾನೂನಿನಂತೆ ಶಿಕ್ಷೆಯಾಗಬೇಕೆಂಬುದು ನಮ್ಮ ಆಗ್ರಹವಾ ಗಿದ್ದು, ಈ ಸಂಬAಧ ಅಶೋಕಪುರಂ ಠಾಣೆಗೆ ಈಗಾಗಲೇ ದೂರು ನೀಡಲಾಗಿದೆ ಎಂದರು. ಮೃತನ ತಾಯಿ ಮಹದೇವಮ್ಮ, ಸಹೋದರಿಯರಾದ ಸುಷ್ಮಾ, ಸಂಯುಕ್ತ, ಕಿರಿಯ ಸಹೋದರರಾದ ಮಧುಸೂದನ್, ಪ್ರದೀಪ್, ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಮಾಜಿ ಉಪಮೇಯರ್ ಶೈಲೇಂದ್ರ, ಕಾಂಗ್ರೆಸ್ ಮುಖಂಡ ಅಶೋಕಪುರಂ ಮಹೇಶ್, ಮುಖಂಡ ಗುಣಶೇಖರ್ ಸೇರಿದಂತೆ ಮತ್ತಿ ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಡಿಸಿ ಭರವಸೆ; ಪ್ರತಿಭಟನೆ ಕೈಬಿಟ್ಟು, ಶವ ಸ್ವೀಕಾರ ಲಸಿಕೆಯಿಂದಲೇ ಮೃತಪಟ್ಟರೆಂದು ಹೇಳಲಾಗದು; ಡಿಸಿ
ಮೈಸೂರು,ನ.೧೫(ಪಿಎಂ)-ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭೇಟಿ ನೀಡಿ, ಪರಿಹಾರ ಕೊಡಿಸುವ ಸಂಬAಧ ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುವು ದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟು, ಶವ ಸ್ವೀಕರಿಸಲಾಯಿತು.

ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಡಾ.ಬಗಾದಿ ಗೌತಮ್, ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಅಲ್ಲದೆ, ಮೃತ ಕುಟುಂಬಸ್ಥರಿAದ ಮನವಿ ಸ್ವೀಕರಿಸಿದರು. ನಮ್ಮ ಮನೆ ಕೆಲಸವೆಂದು ಭಾವಿಸಿ ಪರಿಹಾರ ಕೊಡಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಪ್ರಾಮಾಣ ಕವಾಗಿ ಮಾಡುತ್ತೇನೆಂದು ಮೃತನ ತಾಯಿ ಮಹದೇವಮ್ಮರಿಗೆ ಡಿಸಿ ಭರವಸೆ ನೀಡಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮೃತರಿಗೆ ಬಿಪಿ ಇತ್ತು ಎಂಬುದು ಗೊತ್ತಾಗಿದೆ. ಜೊತೆಗೆ ಈ ಸಂಬAಧ ಸಮರ್ಪಕ ರೀತಿ ಔಷಧ ಪಡೆಯುತ್ತಿರಲಿಲ್ಲವೆಂದೂ ವೈದ್ಯರು ವರದಿಯಲ್ಲಿ ಹೇಳಿದ್ದಾರೆ. ಲಸಿಕೆ ಯಿಂದಲೇ ಸಾವು ಸಂಭವಿಸಿದೆ ಎಂದು ನಾವು ಹೇಳಲು ಬರುವುದಿಲ್ಲ. ತಜ್ಞವೈದ್ಯರು ಪರಿಶೀಲಿಸಿ ಯಾವುದನ್ನೂ ಹೇಳಬೇಕಾಗುತ್ತದೆ. ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಪರಿಶೀಲಿಸಲು ಹೇಳಿದ್ದು, ಅವರು ವರದಿ ನೀಡಲಿದ್ದಾರೆ ಎಂದು ತಿಳಿಸಿದರು.
ಮೃತ ವ್ಯಕ್ತಿಯೇ ಇಡೀ ಕುಟುಂಬದ ಆಧಾರವಾಗಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ವಿಪತ್ತು ನಿರ್ವಹಣೆ ನಿಧಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಸೇರಿದಂತೆ ಯಾವುದರಡಿ ಪರಿಹಾರ ನೀಡಲು ಸಾಧ್ಯ ಎಂದು ಪರಿಶೀಲಿಸಿ ಕ್ರಮ ವಹಿಸಬೇಕಾಗು ತ್ತದೆ. ಈ ಸಂಬAಧ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪರಿಶೀಲಿಸಿ ಮುಂದಿನ ಕ್ರಮ ವಹಿಸುತ್ತೇವೆ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್. ಪ್ರಸಾದ್, ಡಿಸಿಪಿ ಪ್ರದೀಪ್ ಗುಂಟಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.