ಮಾನ್ಯತೆ ಹಿಂಪಡೆದ ಶಾಲೆಗಳಿಗೆ ರಿಲೀಫ್

ಬೆಂಗಳೂರು,ಏ.೨೫- ಮಾನ್ಯತೆ ಹಿಂಪಡೆದ ಶಾಲೆಗಳಿಗೆ ಹೈಕೋರ್ಟ್ ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಅತ್ತ ಮಾನ್ಯ ತೆಯೂ ಕಳೆದು ಕೊಂಡು ಇತ್ತ ತಮ್ಮ ಶಾಲೆಗಳ ಹೆಸರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳ ಅಂಕಪಟ್ಟಿಯಲ್ಲೂ ನಮೂದಿಸುತ್ತಿಲ್ಲ ವೆಂದು ನ್ಯಾಯಾಲಯದ ಮೊರೆ ಹೋಗಿದ್ದ ಖಾಸಗಿ ಶಾಲೆಗಳ ಪರ ಹೈಕೋರ್ಟ್ ನಿಂತಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೇರೊಂದು ಶಾಲೆಗಳಲ್ಲಿ ಪರೀಕ್ಷೆ ಬರೆಸಲಾಗಿದೆ. ಇದರಿಂದ, ಪರೀಕ್ಷಾ ಫಲಿತಾಂಶ ಪಟ್ಟಿ ಹಾಗೂ ಅಂಕಪಟ್ಟಿ ಯಲ್ಲಿ ನಮ್ಮ ಶಾಲೆಗಳ ಹೆಸರನ್ನು ಕೈಬಿಡುವ ಸಾಧ್ಯತೆ ಇದೆ. ಆದ್ದರಿಂದ, ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದ್ದವು. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಶೈಕ್ಷಣ ಕ ವರ್ಷದ ಕೊನೆಯಲ್ಲಿ
ಮಾನ್ಯತೆ ಹಿಂಪಡೆಯಲಾಗಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿ ಳಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. ವಿವೇಕನಗರದ ಶಾಂತಿ ನಿಕೇತನ ಪ್ರೌಢಶಾಲೆ ಸೇರಿ ೮ ಶಾಲೆಗಳು, ಶಾಶ್ವತ ಮಾನ್ಯತೆ ಇದ್ದರೂ ಶೈಕ್ಷಣ ಕ ವರ್ಷದ ಕೊನೆಯಲ್ಲಿ ಶಾಲೆಗಳ ಮಾನ್ಯತೆ ಹಿಂಪಡೆದಿವೆ ಎಂದು ಆಕ್ಷೇಪಿಸಿ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಎಸ್‌ಎಸ್‌ಎಲ್‌ಸಿ ಬೋರ್ಡ್ಗೆ ನ್ಯಾಯಾಲಯ ನಿರ್ದೇಶನ: ಅರ್ಜಿದಾರ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂಕಪಟ್ಟಿ ಹಾಗೂ ಫಲಿತಾಂಶ ಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರು, ಎಸ್‌ಎಸ್‌ಎಲ್‌ಸಿ ಬೋರ್ಡ್ಗೆ ನ್ಯಾಯಾಲಯ ನಿರ್ದೇಶನ ನೀಡಿದೆ.