ದೇವಟ್ ಪರಂಬುವಿನಲ್ಲಿ ಹಿರಿಯರ ಸ್ಮರಣೆ

ಮಡಿಕೇರಿ, ಅ.18- ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವವಾದ ಮರುದಿನ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ದೇವಟ್ ಪರಂಬುವಿನಲ್ಲಿ ಹಿರಿಯರ ಸ್ಮರಣೆ ಕಾರ್ಯಕ್ರಮ ನಡೆಯಿತು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ದೇವಟ್ ಪರಂಬು ವಿಗೆ ತೆರಳಿದ ಪ್ರಮುಖರು ಹಿರಿಯರಿಗೆ ಪುಷ್ಪನಮನ ಸಲ್ಲಿಸಿದರು. ಕಾವೇರಿ ತುಲಾ ಸಂಕ್ರಮಣದ ಸಂಪ್ರದಾಯದಂತೆ ಕಾವೇರಿ ತೀರ್ಥ, ದೋಸೆ ಮತ್ತು ಪುಟ್ಟ್ ಎಂಬ ಭಕ್ಷ್ಯವನ್ನು ಹಾಗೂ ಗಿಡಮೂಲಿಕೆಯಾದ ಬೊತ್ ಬಳ್ಳಿಯನ್ನು ಇಡಲಾಯಿತು.

ನಂತರ ಪವಿತ್ರ ಕಾವೇರಿ ತೀರ್ಥೋ ದ್ಭವ ಮತ್ತು ಜನಪದೀಯ ಬುಡಕಟ್ಟು ಸಂಪ್ರದಾಯಗಳ ಕುರಿತು ನಾಚಪ್ಪ ವಿವರಿಸಿದರು. ಇದೇ ಸಂದರ್ಭ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊ ತ್ತಾಯವನ್ನು ಅವರು ಮಂಡಿಸಿದರು.

ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವ ಜನಾಂಗೀಯ ಬುಡಕಟ್ಟು ಜನಾಂಗಕ್ಕೆ ಎಸ್‍ಟಿ ಟ್ಯಾಗ್ ನೀಡಬೇಕು. ನಮ್ಮ ಭೂಮಿ, ಭಾಷೆ, ಸಾಂಸ್ಕøತಿಕ ಪರಂಪರೆಯ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸಾಂವಿಧಾನಿಕ ಭದ್ರತೆ ನೀಡಬೇಕು, ದೇವಟ್ ಪರಂಬುವಿ ನಲ್ಲಿ ನರಮೇಧದ ಸ್ಮರಣಾರ್ಥ ಅಂತರ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡ ಬೇಕು ಹಾಗೂ ಕೊಡವ ನರಮೇಧವನ್ನು ಯುಎನ್‍ಒ ಅಂತರರಾಷ್ಟ್ರೀಯ ಹತ್ಯಾ ಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸ ಬೇಕು ಎಂದು ನಾಚಪ್ಪ ಒತ್ತಾಯಿಸಿದರು.

ಸಿಎನ್‍ಸಿ ಸಂಘಟನೆಯ ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಳಮಂಡ ಜೈ, ಅರೆಯಡ ಗಿರೀಶ್, ದಿನು ಬೇಪಡಿಯಂಡ, ಪಟ್ಟ ಮಾಡ ಕುಶ, ಮಂದಪಂಡ ಮನೋಜ್, ಕಾಟುಮಣಿಯಂಡ ಉಮೇಶ್, ಬೊಳ್ಳಾರ ಪಂಡ ಬೋಪಣ್ಣ, ಮಂದಪಂಡ ಸೂರಜ್, ಚೀಯಬೇರ ಸತೀಶ್, ಪಟ್ಟಮಾಡ ಕರಿಯಪ್ಪ, ಪುಟ್ಟಿಚಂಡ ದೇವಯ್ಯ, ಮಣವಟ್ಟಿರ ಚಿಣ್ಣಪ್ಪ, ಬೊಳ್ಳಾರಪಂಡ ಮಾಚಯ್ಯ ಮತ್ತಿತರರು ಉಪಸ್ಥಿತರಿದ್ದು ಪ್ರಾರ್ಥನೆ ಸಲ್ಲಿಸಿದರು.