ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ ಆಗ್ರಹ

ಮೈಸೂರು, ಏ.12-ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ಕರ್ತವ್ಯ ಮುಗಿದ ಮೇಲೆ ಆರೋಗ್ಯ ತಪಾಸಣೆ ಮಾಡಬೇಕು ಅಥವಾ ಪೌರ ಕಾರ್ಮಿಕರ ಭವನದಲ್ಲೇ ಉಳಿಸಿಕೊಳ್ಳುವಂತೆ ಮೈಸೂರಿನ ಸಮತಾ ಸೈನಿಕ ದಳ ಆಗ್ರಹಿಸಿದೆ. ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಮನೆಗಳಿಗೆ ಹಿಂತಿರುಗುತ್ತಿದ್ದಾರೆ. ಈ ವೇಳೆ ಪೌರಕಾರ್ಮಿಕರ ಕಾಲೋನಿಗಳಿಗೆ ಕೊರೊನಾ ಸೋಂಕು ಹರಡಿದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಆದ್ದರಿಂದ ಕರ್ತವ್ಯ ಮುಗಿದ ನಂತರ ಅವರನ್ನು ಆರೋಗ್ಯ ತಪಾಸಣೆಗೊಳಪಡಿಸಬೇಕು. ಇಲ್ಲದಿದ್ದರೆ, ಪೌರ ಕಾರ್ಮಿ ಕರ ಭವನದಲ್ಲಿ ಅವರನ್ನು ಉಳಿಸಿಕೊಂಡು ಅವರ ಆರೋಗ್ಯದ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅಧ್ಯಕ್ಷ ವಿ.ಗಣೇಶ ಮನವಿ ಮಾಡಿದ್ದಾರೆ.