ಭಾರತ್ ಬಂದ್ ಬೆಂಬಲಿಸುವಂತೆ ಮನವಿ

ಗುಂಡ್ಲುಪೇಟೆ:  ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾ ರದ ವಿರುದ್ಧ ಸೋಮವಾರ ಕರೆಯಲಾಗಿ ರುವ ಭಾರತ್‍ಬಂದ್‍ಗೆ ಪಟ್ಟಣ ಹಾಗೂ ತಾಲೂಕಿನ ಜನತೆ ಸಹಕಾರ ನೀಡಬೇ ಕೆಂದು ಕಾಂಗ್ರೆಸ್ ಮುಖಂಡ ಎಚ್.ಎಂ. ಗಣೇಶ್‍ಪ್ರಸಾದ್ ಮನವಿ ಮಾಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬಂದ್ ಹಿನ್ನೆಲೆಯಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆ ನಡೆಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಾರ್ವ ಜನಿಕರಿಗೆ ಕರಪತ್ರವನ್ನು ನೀಡುವುದ ರೊಂದಿಗೆ ಭಾರತ್ ಬಂದ್‍ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿ, ಕೇಂದ್ರ ಸರ್ಕಾರ ಬಂದ ನಂತರ ಅಗತ್ಯ ವಸ್ತುಗಳ ಏರಿಕೆ ಪ್ರಮಾಣ ಹೆಚ್ಚಾ ಗಿದೆ. ಪ್ರತಿನಿತ್ಯದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲಾ ಸರಕು ಸಾಮಗ್ರಿಗಳು ದುಬಾರಿಯಾಗಿವೆ. ಇದರಿಂದ ಶ್ರೀಸಾಮಾನ್ಯರಿಗೆ ಹಾಗೂ ಬಡವರು ಜೀವನ ನಡೆಸಲು ತೀವ್ರ ತೊಂದರೆಯಾಗಿದೆ ಎಂದು ಕೇಂದ್ರ ಸರ್ಕಾ ರದ ವಿರುದ್ದ ಕಿಡಿಕಾರಿದರು.

ಆದ್ದರಿಂದ ಪಟ್ಟಣದ ಮತ್ತು ತಾಲೂ ಕಿನ ಜನತೆ ನಮ್ಮ ಕರೆಗೆ ಓಗೊಟ್ಟು ಅಂಗಡಿ-ಮುಂಗಟ್ಟುಗಳು, ಸಾರಿಗೆ ಬಸ್, ಆಟೋ ಹಾಗೂ ಕಾರುಗಳ ಚಾಲಕರು ಬಂದ್ ಮಾಡುವುದರೊಂದಿಗೆ ಯಶಸ್ಸಿಗೆ ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಎ.ಸಿದ್ದ ರಾಜು, ಜಿಪಂ ಸದಸ್ಯರಾದ ಬಿ.ಕೆ.ಬೊಮ್ಮಯ್ಯ, ಕೆ.ಎಸ್.ಮಹೇಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕುಮಾರಸ್ವಾಮಿ, ತಾಪಂ ಅಧ್ಯಕ್ಷ ಜಗದೀಶಮೂರ್ತಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಮುಖಂಡ ರಾದ ಕೊಡಸೋಗೆಶಿವಬಸಪ್ಪ, ಎಲ್.ಸುರೇಶ್, ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್, ಪಿ.ಚಂದ್ರಪ್ಪ, ಅಣ್ಣಯ್ಯಸ್ವಾಮಿ ಸೇರಿದಂತೆ ವಿವಿಧ ಘಟಕಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.