ವಿನೋಬ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರೋಧಿಸಿ ನಿವಾಸಿಗಳ ಪ್ರತಿಭಟನೆ

ಮೈಸೂರು,ನ.24(ಆರ್‍ಕೆಬಿ)- ಮೈಸೂರಿನ ವಿನೋಬ ರಸ್ತೆಯಲ್ಲಿ 50 ಲಕ್ಷ ರೂ. ಎಸ್‍ಎಫ್‍ಸಿ ಅನುದಾನದÀಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಅವೈಜ್ಞಾನಿಕ ರೀತಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರು, ವಾಹನ ನಿಲುಗಡೆ ಮಾಡುವವರಿಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ನೇತೃತ್ವದಲ್ಲಿ ಮಂಗಳವಾರ ಶಿವರಾಂ ಪೇಟೆಯ ಲಕ್ಷ್ಮಿ ವಿಲಾಸ್ ಬ್ಯಾಂಕ್ ಬಳಿ ಅಲ್ಲಿನ ನಿವಾಸಿಗಳು, ವರ್ತಕರು ಪ್ರತಿಭಟನೆ ನಡೆಸಿದರು.

ಈ ಸ್ಥಳದಲ್ಲಿ ಖರ್ಬ್ ಸ್ಟೋನ್ ಅಳವಡಿಸಿ ಟೈಲ್ಸ್ ಹಾಕುತ್ತಿರುವುದರಿಂದ ವಾಹನ ನಿಲುಗಡೆ ಹಾಗೂ ಪಾದಚಾರಿಗಳಿಗೂ ತೊಂದರೆ ಯಾಗಿದೆ. ಈ ಸಂಬಂಧ ವಲಯ ಕಚೇರಿ-6ರ ಆಯುಕ್ತರಿಗೆ ದೂರು ನೀಡಿದ್ದರೂ ಅಧಿಕಾರಿ ಗಳು ನಿರ್ಲಕ್ಷಿಸಿದ್ದಾರೆ. ತೀರಾ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಪ್ರತಿಭ ಟನಾಕಾರರು ಆರೋಪಿಸಿದರು.
ಸಾರ್ವಜನಿಕರಿಗೆ, ಪಾದಚಾರಿಗಳಿಗೆ, ವಾಹನ ನಿಲುಗಡೆ ಮಾಡುವವರಿಗೆ ತೊಂದರೆಯಾಗುತ್ತಿರುವ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಸಾರ್ವಜನಿಕರ ತೆರಿಗೆ ಹಣವನ್ನು ಅನಗತ್ಯವಾಗಿ ಪೋಲು ಮಾಡುತ್ತಿರುವುದು ನಿಲ್ಲಬೇಕು. ಸಾರ್ವ ಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುಷ್ಪವಲ್ಲಿ, ಮುಖಂಡರಾದ ಎಂ.ಸಿ.ಮಂಜು, ಜೆ.ಜ್ಞಾನೇಶ್, ಗುರುರಾಜಶೆಟ್ಟಿ, ಹಿರೇಗೌಡ, ಆರ್.ರಾಜು, ಮಹದೇವ್, ರಾಮ್ ಪ್ರಸಾದ್, ಅರ್.ಕೆ.ರವಿ, ಹೆಚ್.ಜೆ.ಮಂಜುಳಾ, ಮಂಗಳಾ, ಶಾಂತಾ ಇನ್ನಿತರರು ಉಪಸ್ಥಿತರಿದ್ದರು.