ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಮಾಲೋಚನೆ ಮೂಲಕ ಪತಿ-ಪತ್ನಿ ಕಲಹಕ್ಕೆ ಪರಿಹಾರ

ಮೈಸೂರು, ಡಿ.7(ಆರ್‍ಕೆಬಿ)- ಕರ್ನಾ ಟಕ ರಾಜ್ಯ ಮಹಿಳಾ ಆಯೋಗಕ್ಕೆ ಕಳೆದ ಏಪ್ರಿಲ್‍ನಿಂದ ಡಿಸೆಂಬರ್‍ವರೆಗೆ ಒಟ್ಟು 1558 ದೂರುಗಳು ಬಂದಿದ್ದು, ಈ ಪೈಕಿ 506 ಪ್ರಕರಣಗಳನ್ನು ಇತ್ಯರ್ಥಪಡಿಸ ಲಾಗಿದೆ. ಒಟ್ಟಾರೆ 1052 ಪ್ರಕರಣಗಳನ್ನು ಬಗೆಹರಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ತಿಳಿಸಿದರು.

ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮ ವಾರ ನೊಂದ ಮಹಿಳೆಯರಿಂದ ದೂರು ಸ್ವೀಕರಿಸಿದ ಅವರು, ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು. ಆಯೋಗಕ್ಕೆ ಬಂದಿರುವ ದೂರುಗಳ ಪೈಕಿ 386 ಕೌಟುಂ ಬಿಕ ದೌರ್ಜನ್ಯ, 446 ರಕ್ಷಣೆ ಕೋರಿ ಹಾಗೂ 52 ವರದಕ್ಷಿಣೆ ಕಿರುಕುಳದ ದೂರುಗಳಾ ಗಿವೆ. 58 ದೂರುಗಳು ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದ್ದಾಗಿವೆ. ಇವುಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಹಳೆಯ ಅರ್ಜಿ ಗಳು ಸಹ ಬಂದಿವೆ ಎಂದರು. ಹಿರಿಯ ನಾಗರಿಕರ ಆಸ್ತಿಗೆ ಸಂಬಂಧಿಸಿದ ದೂರು ಗಳು ಸಹ ಬಂದಿವೆ ಎಂದರು.

ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಿಂದ ಬಂದಿರುವ 224 ಪ್ರಕರಣ ಗಳಲ್ಲಿ ಆಸ್ತಿ ವಿವಾದ ಮತ್ತ ದೌರ್ಜನ್ಯ ಪ್ರಕ ರಣಗಳೇ ಹೆಚ್ಚಾಗಿವೆ. ಜೊತೆಗೆ ವಿಶ್ವವಿದ್ಯಾ ಲಯಗಳ ವಿಭಾಗಗಳ ಮುಖ್ಯಸ್ಥರ ವಿರುದ್ಧ ದೂರುಗಳಿವೆ. ಗಾರ್ಮೆಂಟ್ಸ್‍ಗಳಲ್ಲಿ ಕಾರ್ಮಿಕ ರನ್ನು ಕೆಟ್ಟ ಪದಗಳಿಂದ ನಿಂದಿಸಿದ ದೂರು ಗಳೂ ಇವೆ. ಹಿರಿಯ ನಾಗರಿಕರ ಆಸ್ತಿ ಸಂಬಂ ಧಿತ ದೂರುಗಳು ಹೆಚ್ಚಾಗಿವೆ ಎಂದರು.

ಕೋವಿಡ್-19 ಲಾಕ್‍ಡೌನ್ ವೇಳೆ ಆಯೋಗವು 425 ದೂರುಗಳನ್ನು ಸ್ವೀಕರಿ ಸಿದೆ. ಇ-ಮೇಲ್ ಮೂಲಕ 77 ಮತ್ತು ಫೋನ್ ಮೂಲಕ 352 ದೂರುಗಳನ್ನು ಸ್ವೀಕರಿಸಿದ್ದು, ಈ ಪೈಕಿ ಮನೆಯಿಂದ ಹೊರ ಹೋಗಲಾಗದ ಹಿರಿಯ ನಾಗರಿಕರು ಆಹಾರ ಕ್ಕಾಗಿ ಪಟ್ಟ ಸಂಕಷ್ಟದ ದೂರುಗಳಿವೆ. ಸ್ಥಳೀಯ ಸಂಸ್ಥೆಗಳ ಗಮನಕ್ಕೆ ತಂದು ಇವರಿಗೆ ಆಹಾರ ಪದಾರ್ಥಗಳನ್ನು ಒದಗಿಸುವ ಕಾರ್ಯ ಮಾಡಿದ್ದೇವೆ ಎಂದು ತಿಳಿಸಿದರು.

ವೈಜ್ಞಾನಿಕ ಸಮಾಲೋಚನೆ: ಪತಿ-ಪತ್ನಿಯರ ನಡುವಿನ ಕಲಹಕ್ಕೆ ಸಂಬಂಧಿ ಸಿದ ದೂರುಗಳನ್ನು ಮಕ್ಕಳ ಭವಿಷ್ಯದ ದೃಷ್ಟಿ ಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಸಮಾಲೋಚನೆ ನಡೆಸಿ, ಸಮಸ್ಯೆಯನ್ನು ಸೂಕ್ಷ್ಮವಾಗಿ ಬಗೆಹರಿಸಲಾಗುತ್ತಿದೆ. ಪೊಲೀಸ್ ಇಲಾಖೆ ಮತ್ತು ಮಹಿಳಾ ಆಯೋಗ ಒಂದೇ ಕುಟುಂಬದಂತೆ ಕಾರ್ಯ ನಿರ್ವ ಹಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ, ಕುಟುಂಬ ನ್ಯಾಯಾ ಲಯದಲ್ಲಿರುವ ಮಹಿಳಾ ಸಹಾಯ ವೇದಿಕೆ ಸಲಹೆಗಾರ್ತಿ ರಂಜಿನಿ, ಅಧ್ಯಕ್ಷ ರಿಗೆ ವರದಿಯನ್ನು ಸಲ್ಲಿಸಿದರು.

ಮೈಸೂರಲ್ಲಿ ನೊಂದ ಮಹಿಳೆಯರಿಂದ ದೂರು ಸ್ವೀಕಾರ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಅವರಲ್ಲಿ ಕೌಟುಂಬಿಕ ದೌರ್ಜನ್ಯ, ಅನೈತಿಕ ಸಂಬಂಧ, ಕೆಲಸದಿಂದ ತೆಗೆದು ಹಾಕಿರುವುದು ಸೇರಿದಂತೆ ಒಟ್ಟು 7 ದೂರು ಗಳು ಇಂದು ಸಲ್ಲಿಕೆಯಾಗಿವೆ.

ಜಲದರ್ಶಿನಿ ಅತಿಥಿಗೃಹದಲ್ಲಿ ಅವರನ್ನು ಭೇಟಿ ಮಾಡಿದ ನೊಂದ ಮಹಿಳೆಯರು ತಮಗೆ ನ್ಯಾಯ ದೊರಕಿಸಿಕೊಡುವಂತೆ ದೂರಿನಲ್ಲಿ ಕೋರಿದರು. ಗಂಡನ ಮನೆ ಯಲ್ಲಿ ಅತ್ತೆ ಕಿರಿಕಿರಿ, ಮನೆಯಿಂದ ಹೊರ ಹೋಗೋಣ ಎಂದರೆ ಚಿಕ್ಕ ಮಗು ಇದ್ದು, ಮುಂದೆ ಸಮಸ್ಯೆ ಆಗುತ್ತದೆಂಬ ಆತಂಕದಿಂದ ನೋವು ಅನುಭವಿ ಸುತ್ತಿದ್ದೇನೆ. ನ್ಯಾಯ ದೊರಕಿಸಿಕೊಡಿ ಎಂದು ಮಹಿಳೆಯೊಬ್ಬರು ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಮತ್ತೊಬ್ಬ ಮಹಿಳೆ, ತನ್ನ ಪತಿ ಉಪ ನ್ಯಾಸಕ, ನಮ್ಮ ನಡುವೆ ಗಲಾಟೆಯಾಗಿದ್ದಕ್ಕೆ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟ ಲೇರಿದ್ದರು. ನಂತರ ಪತಿ ಮಹಾಶಯ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ದೂರು ವಾಸಸ್ ತೆಗೆಸಿ, ಬಳಿಕ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು, ನನಗೆ ಜೀವನಾಂಶ ದೊರಕಿಸಿ ಕೊಡಿ ಎಂದು ಮನವಿ ಮಾಡಿದರು.

ಕೌಟುಂಬಿಕ ದೌರ್ಜನ್ಯ, ಅನೈತಿಕ ಸಂಬಂಧ, ಪತಿಯಿಂದ ಮೋಸ, ಕೆಲಸ ದಿಂದ ತೆಗೆದು ಹಾಕಿದ್ದಾರೆ ಎಂಬ ಇತರೆ ದೂರುಗಳು ದಾಖಲಾದವು. ದೂರು ಸಲ್ಲಿಸಿದ ಎಲ್ಲಾ ನೊಂದ ಮಹಿಳೆಯ ರಿಗೂ ನ್ಯಾಯ ದೊರಕಿಸಿ ಕೊಡುವುದಾಗಿ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇ ಶಕಿ ಸುಶೀಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೆ. ಪದ್ಮಾ, ಮಂಜುಳಾ ಪಾಟೀಲ್ ಇದ್ದರು.