ನಿವೃತ್ತ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಕನಿಷ್ಠ 3 ಸಾವಿರ ರೂ. ಪಿಂಚಣಿಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ನಿವೃತ್ತಿ ಯಾದ ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರಿಗೆ ಕನಿಷ್ಠ 3 ಸಾವಿರ ರೂ. ಮಾಸಿಕ ಪಿಂಚಣಿ ನೀಡ ಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್‍ನ (ಎಐಟಿ ಯುಸಿ ಅಂಗ ಸಂಘಟನೆ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಅಂಗನ ವಾಡಿ ಕಾರ್ಯಕರ್ತೆಯರು ಹಾಗೂ ಸಹಾ ಯಕಿಯರು ದುಡಿದಿದ್ದಾರೆ. ಆ ಮೂಲಕ ಸರ್ಕಾರದ ಯೋಜನೆಗಳನ್ನು ಫಲಾನು ಭವಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಸೇವೆಯಿಂದ ನಿವೃತ್ತಿ ಗೊಂಡ ಬಳಿಕ ಜೀವನ ನಿರ್ವಹಣೆ ಕಷ್ಟ ಕರವಾಗಿದ್ದು, ಹೀಗಾಗಿ ಕನಿಷ್ಠ 3 ಸಾವಿರ ರೂ. ಮಾಸಿಕ ಪಿಂಚಣಿ ಜಾರಿಗೊಳಿಸ ಬೇಕು ಎಂದು ಆಗ್ರಹಿಸಿದರು.

ತಾಯಿ-ಮಗುವಿನ ಅಪೌಷ್ಠಿಕತೆ ನಿವಾ ರಣೆ ಕಾರ್ಯಕ್ರಮಗಳು, ಕುಟುಂಬ ಯೋಜನೆ ಗಳು, ಚುನಾವಣಾ ಕೆಲಸ-ಕಾರ್ಯಗಳು ಸೇರಿದಂತೆ ಇನ್ನಿತರೆ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಿರ್ವಸುತ್ತಾರೆ.

ಇಂದಿಗೂ ಕನಿಷ್ಠ ವೇತನವೂ ಇಲ್ಲದೆ ದುಡಿ ಯುವ ಪರಿಸ್ಥಿತಿ ಇದೆ. ಸೇವಾ ಅವಧಿಯಲ್ಲಿ ಕನಿಷ್ಠ ವೇತನವೂ ಇಲ್ಲದೆ, ನಿವೃತ್ತಿ ಬಳಿಕ ಪಿಂಚಣಿಯೂ ಇಲ್ಲದೆ ನಿವೃತ್ತರ ಬದುಕು ದುಸ್ಥರವಾಗಿದೆ. ಈ ಹಿನ್ನೆಲೆಯಲ್ಲಿ ನಿವೃತ್ತ ರಿಗೆ ಪಿಂಚಣಿ ಯೋಜನೆ ಜಾರಿಗೊಳಿಸಿ, ಹಾಲಿ ಸೇವೆಯಲ್ಲಿರುವವರಿಗೆ ಕನಿಷ್ಠ 18 ಸಾವಿರ ರೂ. ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಎನ್‍ಪಿಎಸ್ ಪಿಂಚಣಿ ಯೋಜನೆ ಯನ್ನು ಸಮರ್ಪಕವಾಗಿ ಜಾರಿಗೊಳಿಸ ಬೇಕು, ಮಿನಿ ಅಂಗನವಾಡಿ ಕೇಂದ್ರ ಗಳನ್ನು ಮೇಲ್ದರ್ಜೆಗೇರಿಸಬೇಕು, ಕಾರ್ಯಕರ್ತೆ ಯರಿಗೆ ಹಾಗೂ ಸಹಾಯಕಿಯರಿಗೆ ಇಎಸ್‍ಐ ಮತ್ತು ಪಿಎಫ್ ಯೋಜನೆ ಜಾರಿಗೊಳಿಸ ಬೇಕು ಹಾಗೂ ಅನಾರೋಗ್ಯ ಕಾರಣಕ್ಕೆ ಸೇವೆ ಸಲ್ಲಿಸಲಾಗದವರಿಗೆ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಅನುವು ಮಾಡಬೇಕು ಎಂದು ಆಗ್ರಹಿಸಿದರು.

ಫೆಡರೇಷನ್‍ನ ತಾಲೂಕು ಪ್ರಧಾನ ಕಾರ್ಯದರ್ಶಿ ವೈ.ಮಹದೇವಮ್ಮ, ಅಂಗನ ವಾಡಿ ಕಾರ್ಯಕರ್ತೆಯರು ಹಾಗೂ ಸಹಾ ಯಕಿಯರಾದ ಬಿ.ಸಿ.ದೇವಮ್ಮ, ಬಿ.ಎ. ಲಲಿತಾ, ಜಿ.ನಾಗಮಣಿ, ಹೆಚ್.ಎಸ್. ವಸಂತಾ, ಪ್ರೇಮಾ, ಜಯಮ್ಮ ಮತ್ತಿತ ರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.