ಕಲಾಮಂದಿರ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮೈಸೂರು,ಜ.19(ಪಿಎಂ)- ಕಲಾ ಮಂದಿರದ ಮುಖ್ಯದ್ವಾರದಲ್ಲಿ ನಾಮ ಫಲಕ ಸಹಿತ ಕಮಾನು ನಿರ್ಮಾಣ, ಅಕ್ಷರ ವಿನ್ಯಾಸದ ನಾಮಫಲಕ ಅಳವಡಿಕೆ ಸೇರಿ ದಂತೆ ಇಲ್ಲಿನ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಬುಧವಾರ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿದರು.

2021-22ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಕಲಾ ಮಂದಿರದ ಮುಖ್ಯ ದ್ವಾರದಲ್ಲಿ ಗೇಟ್‍ಗೆ `ಕಲಾಮಂ ದಿರ’ ನಾಮಫಲಕ ಒಳಗೊಂಡ ಕಮಾನು ನಿರ್ಮಾಣ, ಇಲ್ಲಿನ ಪಾರ್ಕಿಂಗ್ ಪಾತ್‍ನಲ್ಲಿ ಇಂಟರ್‍ಲಾಕ್ ಟೈಲ್ಸ್ ಅಳವಡಿಕೆ, ಕಲಾ ಮಂದಿರ ಮತ್ತು ಕಿರುರಂಗ ಮಂದಿರದ ವಿದ್ಯುತ್ ದುರಸ್ತಿ ಕಾಮಗಾರಿ ನಡೆಯಲಿದೆ.

ಅಕ್ಷರ ವಿನ್ಯಾಸದ ನಾಮಫಲಕ: ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಜೊತೆಗೆ ಕಲಾ ಮಂದಿರದ ಲಾನ್‍ನಲ್ಲಿ ಹೃದಯ ಚಿಹ್ನೆ ಒಳಗೊಂಡಂತೆ `ಪ್ರೀತಿಯ ಕಲಾಮಂ ದಿರ’ ಎಂಬ ಅಕ್ಷರ ವಿನ್ಯಾಸದ ನಾಮಫಲಕ ಅಳವಡಿಸಲಾಗುತ್ತಿದೆ. ಶ್ವೇತ ವರ್ಣದಲ್ಲಿ ಈ ನಾಮಫಲಕ ಮೂಡಿಬರಲಿದೆ.

ಇನ್ನಷ್ಟು ಅನುದಾನ ನೀಡುವೆ: ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಲ್.ನಾಗೇಂದ್ರ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿ, 1984ರಲ್ಲಿ ನಿರ್ಮಾಣ ಗೊಂಡ ಮೈಸೂರಿನ ಕಲಾಮಂದಿರ ನಗ ರದ ಪ್ರತಿಷ್ಠಿತ ಸಭಾಂಗಣವಾಗಿದೆ. ಇದರ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅನುದಾನ ಕಲ್ಪಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದರು. ಅದರಂತೆ 10 ಲಕ್ಷ ರೂ. ಅನುದಾನ ಕಲ್ಪಿಸಿದ್ದೇನೆ. ಅಗತ್ಯವಾದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ಕಲ್ಪಿಸಿ ಕೊಡುತ್ತೇನೆ ಎಂದು ತಿಳಿಸಿದರು.

ಕಲಾಮಂದಿರದ ಹಿಂಭಾಗವೇ ಇರುವ ರಂಗಾಯಣದ ಅಭಿವೃದ್ಧಿ ಕೆಲಸ ಕಾರ್ಯ ಗಳಿಗೂ ರಂಗಾಯಣದ ನಿರ್ದೇಶಕರ ಮನವಿ ಮೇರೆಗೆ ಐದು ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಒಟ್ಟಾರೆ ಕಲಾಮಂದಿರ ಮತ್ತು ರಂಗಾ ಯಣದ ಆವರಣದಲ್ಲಿ ಸದ್ಯ 15 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಗಳು ನಡೆಯಲಿವೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇ ಶಕ ಹೆಚ್.ಚೆನ್ನಪ್ಪ, ಕಲಾಮಂದಿರದಲ್ಲಿ ಇನ್ನು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಹಾಗಾಗಿ ಮುಂದೆಯೂ ಶಾಸಕರು ಇನ್ನಷ್ಟು ಅನುದಾನ ಕಲ್ಪಿಸಿ ಕೊಡಬೇಕೆಂದು ಕೋರಿದರು.
ನಗರ ಪಾಲಿಕೆ ಸದಸ್ಯೆ ಸಿ.ವೇದಾವತಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್‍ಗೌಡ, ಮುಖಂಡ ರಾದ ಶಿವಕುಮಾರ್, ಶಿವಶಂಕರ್, ಪ್ರಮೋದ್ ಕುಂಬಾರಕೊಪ್ಪಲು, ನರ ಸಿಂಹಮೂರ್ತಿ, ಸಿ.ವಿ.ನಾಗರಾಜು, ಹೆಬ್ಬಾಳು ನಾಗರಾಜ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಲವ, ಗುತ್ತಿಗೆದಾರ ಮಾದಪ್ಪ ಮತ್ತಿತರರು ಹಾಜರಿದ್ದರು.