ಶಬರಿಮಲೆ ಅಯ್ಯಪ್ಪ ದೇಗುಲ ಉಳಿಸಿ

ನಾಳೆ ನೂರಾರು ಅಯ್ಯಪ್ಪ ಭಕ್ತರಿಂದ ಅಯ್ಯಪ್ಪ ಜ್ಯೋತಿ ಮೆರವಣಿಗೆ
ಮೈಸೂರು:  ಕೇರಳದ ಶಬರಿಮಲೆ ಕ್ಷೇತ್ರದ ಸನಾತನ ಪರಂಪರೆ ಯನ್ನು ಯಥಾಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿಯು ಡಿ.26ರ ಸಂಜೆ 5.30 ಗಂಟೆಗೆ ಅಯ್ಯಪ್ಪ ಜ್ಯೋತಿ ಮೆರವಣಿಗೆ ಏರ್ಪಡಿಸಿದೆ. ಶಬರಿಮಲೆ ಕ್ಷೇತ್ರದ ಪಾವಿತ್ರ್ಯತೆ, ಆಚಾರ, ಪದ್ಧತಿಗಳ ಬಗ್ಗೆ ಜನಜಾಗೃತಿ ಮೂಡಿಸಲು ಮೈಸೂರಿನ ಗಾಂಧಿ ಚೌಕದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಸಾವಿರಾರು ಮಾಲಾಧಾರಿ ಅಯ್ಯಪ್ಪ ಭಕ್ತರು ದೀಪಗಳನ್ನು ಹಿಡಿದು ಮೆರವಣಿಗೆ ನಡೆಸಲಿದ್ದೇವೆ. ಈ ಸಂದರ್ಭದಲ್ಲಿ ವೇದಿಕೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವುದಾಗಿ ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಚಿ.ನಾ ರಾಮು ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಲವು ಎಡಪಂಥೀಯರು ಹಿಂದೂ ಪವಿತ್ರ ಕ್ಷೇತ್ರಗಳ ಪರಂಪರೆ ಹಾಗೂ ಸನಾತನ ಸಂಸ್ಕøತಿಯನ್ನು ಕದಡಲು ಷಡ್ಯಂತ್ರ ನಡೆಸಿದ್ದಾರೆ ಎಂದು ಕಿಡಿಕಾರಿದರು. ನಾಸ್ತಿಕರ ಮನವಿಗೆ ಸ್ಪಂದಿಸಿ ನೀಡಿದ ತೀರ್ಪನ್ನು ಸುಪ್ರಿಂ ಕೋರ್ಟ್ ಪುನರ್ ಪರಿಶೀಲಿಸಬೇಕೆಂದು ಮೇಲ್ಮನವಿ ಸಲ್ಲಿಸಲಾಗುವುದು ಎಂದರು. ಅಪಾರ ಗೌರವವಿರುವ ಮಹಿಳೆಯರ ಹಕ್ಕು ಗಳನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ. ಕ್ಷೇತ್ರಕ್ಕೆ ಧಕ್ಕೆ ತರುವುದನ್ನೂ ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿ ಸಂಚಾಲಕರಾದ ಗಿರಿಧರ್, ಗೋವರ್ಧನ್, ಚೇತನ್ ಮಂಜುನಾಥ್, ಹಿಂದೂ ಕಾರ್ಯಕರ್ತರಾದ ಗಿರಿಧರ್, ಮನು, ಅಯ್ಯಪ್ಪ, ಪ್ರವೀಣ್ ಉಪಸ್ಥಿತರಿದ್ದರು.