ಕೊಡಗಿನಲ್ಲಿ ಮಳೆ ಆರ್ಭಟದ ದೃಶ್ಯಾವಳಿ ಕೂಟುಹೊಳೆ ಕಿರು ಜಲಾಶಯ ಭರ್ತಿ

ಮಡಿಕೇರಿ, ಜು.14- ಮಡಿಕೇರಿ ತಾಲೂ ಕಿನ ಗಾಳಿಬೀಡು, ವಣಚಲು, ಸೀತಾರಾಮ್ ಪಾಟಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯು ತ್ತಿರುವ ಪರಿಣಾಮ ಮಡಿಕೇರಿ ನಗರಕ್ಕೆ ನೀರು ಪೂರೈಸುವ ಕೂಟುಹೊಳೆ ಕಿರು ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ಅಣೆಕಟ್ಟೆಯ ಮೇಲೆ ನೀರು ಸಂಗ್ರಹಕ್ಕಾಗಿ ಅಳವಡಿಸಿದ್ದ ಮರದ ಹಲಗೆಗಳನ್ನು ತೆರವು ಮಾಡಲಾಗಿದ್ದು, ಜಲಾಶಯದಿಂದ ರಭಸವಾಗಿ ನೀರು ಉಕ್ಕಿ ಹರಿಯುತ್ತಿದೆ.
ಇದೇ ನೈಸರ್ಗಿಕ ನೀರು ಅಬ್ಬಿಜಲ ಪಾತವನ್ನು ಸೇರುತ್ತಿರುವ ಕಾರಣ ಅಬ್ಬಿ ಜಲಪಾತ ಹಾಲ್ನೊರೆ ಸೂಸುತ್ತಾ ಧುಮ್ಮಿಕ್ಕು ತ್ತಿದೆ. 3 ಹಂತಗಳಾಗಿ ಧುಮ್ಮಿಕ್ಕುವ ಅಬ್ಬಿಯ ಸೌಂದರ್ಯವನ್ನು ನೋಡಲು ಮಳೆಯ ನಡುವೆಯೇ ನೂರಾರು ಪ್ರವಾಸಿಗರು ಅತ್ತ ಕಡೆ ಧಾವಿಸಿ ಅಬ್ಬಿ ಜಲಪಾತದ ವೈಭವ ವನ್ನು ಕಣ್ತುಂಬಿಕೊಂಡರು.

ಕೂಟುಹೊಳೆ, ಅಬ್ಬಿಫಾಲ್ಸ್‍ನಲ್ಲಿ ನೀರಿನ ಪ್ರಮಾಣ ಗಣನೀಯ ಏರಿಕೆಯಾಗಿದ್ದು ಹಟ್ಟಿಹೊಳೆಯಲ್ಲಿ ಪ್ರವಾಹ ಸ್ಥಿತಿ ಎದುರಾ ಗಿದೆ. ಇತ್ತ ದೇವಸ್ತೂರು ಸಮೀಪದ ಬಾಣೆ ಗದ್ದೆ, ಒಂಟಿ ಮನೆ ವ್ಯಾಪ್ತಿಯಲ್ಲಿ ಕಾಲೂರು ಹೊಳೆ ಪ್ರವಾಹ ಸೃಷ್ಟಿಸಿರುವ ಬಗ್ಗೆಯೂ ವರದಿಯಾಗಿದೆ. ಈ ನದಿಗಳೆಲ್ಲ ಹಾರಂಗಿ ಜಲಾಶಯದ ನೀರಿನ ನದಿ ಮೂಲಗಳಾ ಗಿದ್ದು, ಹಾರಂಗಿ ಹಿನ್ನೀರಿನ ಹರದೂರು ಬಳಿ ಸಮುದ್ರ ಮಾದರಿಯಲ್ಲಿ ನೀರು ಸಂಗ್ರಹವಾಗಿದೆ.