ಹೋರಾಟ ಕೈ ಬಿಡಲು ಸಿದ್ದರಾಮಯ್ಯ ಬ್ರಾಹ್ಮಣರಲ್ಲಿ ಮನವಿ

ಬೆಂಗಳೂರು,ನ.22(ಜಿಎ)- ಚಿಂತಕ ಪ.ಮಲ್ಲೇಶ್ ವಿರುದ್ಧ ಬ್ರಾಹ್ಮಣ ಮಹಾ ಸಭಾ ರಾಜ್ಯಾದ್ಯಂತ ನಡೆಸುತ್ತಿರುವ ಹೋರಾಟವನ್ನು ಕೈ ಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಇಂದು ಬೆಂಗ ಳೂರಿನ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷÀ ಹಾಗೂ ಖ್ಯಾತ ಹಿರಿಯ ನ್ಯಾಯವಾದಿ ಅಶೋಕ್ ಹಾರ್ನಳ್ಳಿ ಅವರನ್ನು ಭೇಟಿಯಾಗಿ ಚರ್ಚಿಸಿದ ನಂತರ ಈ ಮನವಿ ಮಾಡಿ ದ್ದಾರೆ. ನ.15ರಂದು ಮೈಸೂರಿನಲ್ಲಿ ನಡೆದ `ಸಿದ್ದರಾಮಯ್ಯ-75′ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಚಿಂತಕ ಪ.ಮಲ್ಲೇಶ್ ಬ್ರಾಹ್ಮಣ ಸಮುದಾಯ ನಿಂದಿಸಿರುವ ಪ್ರಕರಣ ಕುರಿತು ಸಿದ್ದರಾಮಯ್ಯ ಮತ್ತು ಅಶೋಕ್ ಹಾರ್ನಳ್ಳಿ ಅವರು ಕೆಲಕಾಲ ಚರ್ಚಿಸಿದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಹಾಗೂ ಖ್ಯಾತ ವಕೀಲ ಅಶೋಕ್ ಹಾರ್ನಳ್ಳಿ ಭೇಟಿ ಮಾಡಿ, ಮೈಸೂರಿನಲ್ಲಿ ನಡೆದ ಘಟನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾನು ಅವರಿಗೆ ಅಂದಿನ ಘಟನೆ ಬಗ್ಗೆ ಎಲ್ಲಾ ವಿವರಣೆ ನೀಡಿ ದ್ದೇನೆ. ಅಂದು ನಾನು ಭಾಷಣ ಮಾಡಲಿಲ್ಲ. ಪ.ಮಲ್ಲೇಶ್ ಅವರು ಏನು ಭಾಷಣ ಮಾಡಿದರೂ ಎಂಬುದನ್ನು ಕೇಳಿಸಿಕೊಂಡಿಲ್ಲ. ಆದರೂ ಪ.ಮಲ್ಲೇಶ್ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ಬಳಸಿದ ಪದ ಸರಿ ಇಲ್ಲವೆಂದು ಈಗಾಗಲೇ ವಿಷಾದ ವ್ಯಕ್ತಪಡಿ ಸಿದ್ದಾರೆ. ಆದ್ದರಿಂದ ಮತ್ತೆ ಅದನ್ನು ಮುಂದು ವರೆಸುವುದು ಅನಗತ್ಯ ಎಂದು ಭಾವಿಸಿ ದ್ದೇನೆ. ನಾನು ಇದುವರೆಗೂ ಯಾವುದೇ ಸಮಾಜವನ್ನು ನಿಂದಿಸುವ ಕೆಲಸವನ್ನು ಮಾಡಿಲ್ಲ. ಇದನ್ನು ಇಲ್ಲಿಗೆ ಕೈ ಬಿಡಬೇಕು ಎಂದು ಬ್ರಾಹ್ಮಣ ಮಹಾಸಭಾವನ್ನು ಕೇಳಿಕೊಳ್ಳುತ್ತೇನೆ ಎಂದು ವಿಡಿಯೋ ಮೂಲಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.