ದಸರಾ ಸಾಂಸ್ಕøತಿಕ ವೇದಿಕೆಯಲ್ಲಿ ಎಸ್‍ಪಿಬಿಗೆ ಗೀತ ನಮನ

ಮೈಸೂರು, ಅ.21(ಎಸ್‍ಪಿಎನ್)- ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರಕ್ಕೆ ಆರೋಗ್ಯ-ಕುಟುಂಬ ಕಲ್ಯಾಣ ಮತ್ತು ವೈದ್ಯ ಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾರ್ಚನೆ ಸಲ್ಲಿಸಿ ಗೌರವ ಅರ್ಪಿಸಿದರು.

ನಾಡಹಬ್ಬ ದಸರಾ ಮಹೋತ್ಸವದಂಗ ವಾಗಿ ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ ಆವರಣದಲ್ಲಿ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸ್ಮರ ಣಾರ್ಥ ಬುಧವಾರ ಆಯೋಜಿಸಿದ್ದ ಗಾಯಕ ರಾಜೇಶ್ ಕೃಷ್ಣನ್ ನೇತೃತ್ವದ ತಂಡದ ಗಾಯನ ಕಾರ್ಯಕ್ರಮದಲ್ಲಿ ಸಚಿವರಿಬ್ಬರೂ ಪಾಲ್ಗೊಂಡಿದ್ದರು.

ನಂತರ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸ್ಮರಣಾರ್ಥದ ಈ ಕಾರ್ಯಕ್ರಮದಲ್ಲಿ ಎಸ್‍ಪಿಬಿ ಗೀತೆಗಳನ್ನು ಹಾಡುವ ಮೂಲಕ ಗಾಯಕ ರಾಜೇಶ್ ಕೃಷ್ಣನ್ ಈ ಕಾರ್ಯ ಕ್ರಮವನ್ನು ಅರ್ಥಪೂರ್ಣಗೊಳಿಸಿದ್ದಾರೆ. ಇತ್ತೀಚೆಗೆ ನಮ್ಮನ್ನು ಅಗಲಿದ ಎಸ್‍ಪಿಬಿ ಅವರ ಹೆಸರಿನಲ್ಲಿ ಒಂದು ಕಾರ್ಯಕ್ರಮವನ್ನು ಆಯೋ ಜಿಸಬೇಕು ಎಂದು ಬಯಸಿದ್ದೆವು. ಆ ಕಾರ್ಯ ಕ್ರಮಕ್ಕೆ ರಾಜೇಶ್ ಕೃಷ್ಣನ್ ಅವರನ್ನೇ ಕರೆಸ ಬೇಕೆಂಬುದು ನಮ್ಮ ಅಭಿಲಾಷೆಯಾಗಿತ್ತು. ಆ ಬಯಕೆ ಇಂದು ಈಡೇರಿದೆ ಎಂದರು.

ಖ್ಯಾತ ಗಾಯಕ ಎಸ್‍ಪಿಬಿ ಅವರು, ತಮ್ಮ ಜೀವಿತಾವಧಿಯಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ, ಕೋಟ್ಯಾಂತರ ಅಭಿ ಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿ ದ್ದಾರೆ. ಅವರ ಹಾಡುಗಳ ಮೂಲಕ ಎಸ್‍ಪಿಬಿ ಅವರನ್ನು ಗಾಯಕ ರಾಜೇಶ್ ಕೃಷ್ಣನ್ ಮತ್ತೆ ನೆನಪು ಮಾಡಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಇದಕ್ಕೂ ಮುನ್ನ ಗಾಯಕ ರಾಜೇಶ್ ಕೃಷ್ಣನ್ ಅವರ ಸಿರಿಕಂಠದಲ್ಲಿ `ಕನ್ನಡ ನಾಡಿನ ಜೀವನದಿ ಕಾವೇರಿ’, `ಕರುನಾಡ ತಾಯಿ, ಸದಾ ಚಿನ್ಮಯಿ’, `ಕಾವೇರಮ್ಮ ಕಾಪಾಡಮ್ಮ’, `ಕೇಳದೆ ನಿಮಗೀಗ ದೂರದಲ್ಲಿ ಯಾರೋ’, ಗಾಯಕ ರಾಜೇಶ್ ಕೃಷ್ಣನ್-ಗಾಯಕಿ ಅನು ರಾಧಾ ಭಟ್ ಜೋಡಿಯಾಗಿ `ಜೊತೆ, ಜೊತೆ ಯಲ್ಲಿ ಇರುವೆನು ಎಂದೂ’…, `ಮಾಮರ ವೆಲ್ಲೋ ಕೋಗಿಲೆ ಎಲ್ಲೋ’, `ಜೀವ ವೀಣೆ’, `ಒಂದೇ ಒಂದು ಆಸೆಯೂ’, `ಎಂಥ ಸೌಂದರ್ಯ ನೋಡು’, ನಮ್ಮ ಕರುನಾಡ ಬೀಡು’ ಗೀತೆಗಳ ಮೂಲಕ ಕೇಳುಗರ ಮನತಣಿಸಿದರು.

ಗಾಯಕರಾದ ಪುಷ್ಪ ಮತ್ತು ರವಿರಾಜ್ ಜೋಡಿ `ಕನಸಲೂ ನೀನೇ, ಮನಸಲೂ ನೀನೆ’, `ನನ್ನ ಮುದ್ದು ತಾರೆ ನಗುತಲಿ ಬಾರೆ’, `ಈ ಕನ್ನಡ ಮಣ್ಣನು ಮರಿಬೇಡ’ ಗೀತೆಗಳನ್ನು ಹಾಡಿ ಎಸ್‍ಪಿಬಿ ಅವರಿಗೆ ನುಡಿನಮನ ಸಲ್ಲಿಸಿದರು. ಈ ವೇಳೆ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೆÇಲೀಸ್ ಆಯುಕ್ತ ಚಂದ್ರಗುಪ್ತ, ಪೆÇಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಡಿಸಿಪಿ ಗೀತಾ ಪ್ರಸನ್ನ, ಎಡಿಸಿ ಬಿ.ಎಸ್.ಮಂಜುನಾಥ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.