ಮೈಸೂರು ಉದಯಗಿರಿ ಮಹಾಜನ ಸಭಾದ ಶ್ರೀರಾಮಧಾಮದಲ್ಲಿ ಏ.21, 22ರಂದು ಶ್ರೀರಾಮನವಮಿ ಉತ್ಸವ ಶ್ರೀ ರಾಮನವಮಿ ವಿಶೇಷ ಸೇವೆಗಳಿಗೂ ಅವಕಾಶ

ಮೈಸೂರು,ಏ.17(ಪಿಎಂ)-ಮೈಸೂರಿನ ಉದಯಗಿರಿ ಮಹಾ ಜನ ಸಭಾದ ಶ್ರೀರಾಮ ಧಾಮದಲ್ಲಿ ಶ್ರೀಪ್ಲವ ನಾಮ ಸಂವತ್ಸರದ 36ನೇ ವರ್ಷದ ಪ್ರಯುಕ್ತ ಏ.21 ಮತ್ತು 22ರಂದು ಶ್ರೀರಾಮ ನವಮಿ ಉತ್ಸವ ಏರ್ಪ ಡಿಸಲಾಗಿದ್ದು, ಶ್ರೀರಾಮ ನವಮಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಏ.21ರಂದು ಪುಣ್ಯಾಹ, ನಾಂದಿ, ಕಳಶ ಪ್ರತಿಷ್ಠಾಪನೆ ಮಹಾಸಂಕಲ್ಪ, ಶ್ರೀರಾಮತಾರಕ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯ ಕ್ರಮಗಳು ನಡೆಯಲಿವೆ. ಏ.22ರಂದು ಬೆಳಗ್ಗೆ 8ಕ್ಕೆ ಶ್ರೀ ಸೀತಾರಾಮ ಕಲ್ಯಾಣ ನಡೆಯ ಲಿದೆ. ಬಳಿಕ ಗಣಪತಿ ಪೂಜೆ, ಪುಣ್ಯಾಹ, ಕಾಶೀಯಾತ್ರೆ, ನೀರಿಕ್ಷಣೆ, ಸಂಬಂಧ ಮಾಲೆ, ಮಹಾ ಸಂಕಲ್ಪ, ಕನ್ಯಾದಾನ, ಮಧುಪರ್ಕ, ಮಾಂಗಲ್ಯಧಾರಣೆ, ನಾಗವಲ್ಲಿ ಉತ್ಸವ ಮಹಾಮಂಗಳಾರತಿ ಕೈಂಕರ್ಯಗಳು ನಡೆಯ ಲಿವೆ. ಭಕ್ತರು ಶ್ರೀ ರಾಮನವಮಿ ವಿಶೇಷ ಸೇವೆಗಳಿಗೂ ಪಾತ್ರರಾಗಬಹುದು. ದೀಪಾ ಲಂಕಾರ ಸೇವೆಗೆ ಸಾವಿರ ರೂ., ಹೂವಿನ ಅಲಂಕಾರ ಸೇವೆಗೆ ಸಾವಿರ ರೂ., ರಾಮ ತಾರಕ ಹೋಮದ ಕಾಣಿಕೆಗೆ 500 ರೂ., ಪ್ರಸಾದ ಸೇವೆ 1 ದಿನಕ್ಕೆ 2,500 ರೂ., ಪಾನಕ ಸೇವೆ 1 ದಿನಕ್ಕೆ 1,500 ರೂ., ಸಾಂಸ್ಕøತಿಕ ಕಾರ್ಯಕ್ರಮ 1 ದಿನಕ್ಕೆ 2,500 ರೂ., ತೋಮಾಲ ಸೇವೆ (ತೊಟ್ಟಿಲು ಸೇವೆ) 250 ರೂ., ಪಂಚಾಮೃತ ಅಭಿಷೇಕ ಸೇವೆಗೆ 50 ರೂ., ಅರ್ಚನೆ ಸೇವೆಗೆ 20 ರೂ., ಸೀತಾ ರಾಮ ಕಲ್ಯಾಣ ಸಂಕಲ್ಪಕ್ಕೆ 100 ರೂ., ಸಮಗ್ರ ರಾಮತಾರಕ ಹೋಮಕ್ಕೆ (ಒಬ್ಬರಿಗೆ ಮಾತ್ರ) 5 ಸಾವಿರ ರೂ., ಸಮಗ್ರ ಸೀತಾರಾಮ ಕಲ್ಯಾ ಣಕ್ಕೆ 500 ರೂ. ನಿಗದಿ ಮಾಡಲಾಗಿದೆ. ಅಲ್ಲದೆ, ಅಕ್ಕಿ, ತೆಂಗಿನಕಾಯಿ, ಸಕ್ಕರೆ, ಬೆಲ್ಲ ಇತ್ಯಾದಿಗಳನ್ನು ಭಕ್ತರು ಧಾನ್ಯ ರೂಪದಲ್ಲಿ ಕೊಡಬಹುದು ಎಂದು ಪ್ರಕಟಣೆ ತಿಳಿಸಿದೆ.