ಸಾಧಕರಿಗೆ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ

ಮೈಸೂರು,ಆ.೨೬(ಆರ್‌ಕೆಬಿ)-ಶ್ರೀ ಶಂಕರ ಜಯಂತಿ ಅಂಗವಾಗಿ ಕರ್ನಾಟಕ ಸೇನಾ ಪಡೆ ಜಿಲ್ಲಾ ಘಟಕದ ವತಿಯಿಂದ ಮೈಸೂ ರಿನ ಶಂಕರ ಮಠದಲ್ಲಿ ತತ್ವಜ್ಞಾನಿಗಳ ದಿನವನ್ನು ಆಚರಿಸಲಾಯಿತು.

ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಂಕರಾಚಾರ್ಯರು ಮೇಧಾವಿ, ತತ್ವಶಾಸ್ತç, ಹಿಂದೂ ಧರ್ಮ ಪುನರುತ್ಥಾನ ಮಾಡಿದವರು. ಅವನತಿಯತ್ತ ಸಾಗಿದ್ದ ಹಿಂದೂ ಧರ್ಮವನ್ನು ಸಂರಕ್ಷಿಸಿದವರು. ದೇಶ ಪರ್ಯಟನೆ ಮೂಲಕ ಹಿಂದೂ ಧರ್ಮ ಪ್ರಚಾರ ಮಾಡಿದವರು ಎಂದರು.
ಈ ಮಹಾತ್ಮರ ದಿನಾಚರಣೆಯನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದಿರುವವರಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಆಚರಿಸುತ್ತಿರುವ ಕರ್ನಾಟಕ ಸೇನಾ ಪಡೆಯ ಕಾರ್ಯ ವನ್ನು ಶ್ಲಾಘಿಸಿದರು. ಈ ವೇಳೆ ಟಿ.ಎಸ್.ಸುಬ್ರಹ್ಮಣ್ಯ (ಸರ್ಕಾರಿ), ಡಾ.ಡಿ.ತಿಮ್ಮಯ್ಯ (ವೈದ್ಯಕೀಯ), ಮಡ್ಡೀಕೆರೆ ಗೋಪಾಲ್ (ಕನ್ನಡ ಸಂಘಟನೆ), ರಘುರಾಂ ಕೆ.ವಾಜಪೇಯಿ (ಸಮಾಜ ಸೇವೆ), ಸಿ.ಜಿ.ಗಂಗಾ ಧರ್ (ಸಹಕಾರ), ಎಸ್.ಆರ್.ರವಿಕುಮಾರ್ (ಸಂಘಟನೆ), ಕೆ.ಸುಬ್ರ ಹ್ಮಣ್ಯ (ಬ್ಯಾಂಕಿAಗ್), ಅವರಿಗೆ `ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿಯನ್ನು ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಎನ್.ವಿ.ಫÀಣೀಶ್ ವಿತರಿಸಿದರು. ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಎಂ.ಎನ್.ದೊರೆಸ್ವಾಮಿ, ಮರಿಮಲ್ಲಪ್ಪ ಪ್ರೌಢಶಾಲಾ ಶಿಕ್ಷಕ ಜಿ.ಸಿದ್ದೇಶ್ವರ್, ಡಾ.ಶಾಂತರಾಜೇಅರಸ್, ಪ್ರಭುಶಂಕರ್, ವಿಜ ಯೇಂದ್ರ, ಕುಮಾರ್‌ಗೌಡ, ಬಸವರಾಜು, ಚಂದ್ರ ಎಂ.ಜೆ.ಸ್ವಾಮಿ, ಬಂಗಾರಪ್ಪ, ರವಿ ನಾಯಕ್, ಗಣೇಶ್ ಪ್ರಸಾದ್, ಪ್ರಭಾಕರ್ ಇದ್ದರು.