ಪಾಲಿಬೆಟ್ಟದಲ್ಲಿ ಚಿನ್ನ-ಬೆಳ್ಳಿ ವರ್ತಕರ ರಾಜ್ಯ ಸಮ್ಮೇಳನ

ಸಿದ್ದಾಪುರ: ಚಿನ್ನ ಬೆಳ್ಳಿ ವರ್ತಕರಿಗೆ ಹಾಗೂ ಕೆಲಸಗಾರರಿಗೆ ಇತ್ತೀಚಿನ ಕಾನೂನುಗಳು, ತಂತ್ರಜ್ಞಾನ ಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕರ್ನಾಟಕ ಚಿನ್ನಬೆಳ್ಳಿ ವರ್ತಕರ ಒಕ್ಕೂಟದ ವತಿಯಿಂದ ರಾಜ್ಯಾ ದ್ಯಂತ ‘ಸ್ವರ್ಣ ಜ್ಞಾನ’ ಕಾರ್ಯಾಗಾರಗಳನ್ನು ಆಯೋ ಜಿಸಲಾಗುತ್ತಿದ್ದು, ಇರದ ಭಾಗವಾಗಿ ರಾಜ್ಯದ 4ನೇ ಸಮ್ಮೇಳನ ಹಾಗೂ ಕಾರ್ಯಾಗಾರ ಪಾಲಿಬೆಟ್ಟದ ಕೂರ್ಗ್ ಕ್ಲಿಪ್ಸ್ ರೆಸಾರ್ಟ್‍ನಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಚಿನ್ನಬೆಳ್ಳಿ ವರ್ತಕರ ಒಕ್ಕೂಟದ ಸಲಹಾ ಸಮಿತಿ ಅಧ್ಯಕ್ಷ ಸುಮೇಶ್ ವಧೇರಾ ಸಮ್ಮೇಳನ ದಲ್ಲಿ ಮಾತನಾಡಿ, ಈಗಾಗಲೇ ರಾಜ್ಯದ ಮೂರು ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಿ ಕಡ್ಡಾಯ ಹಾಲ್‍ಮಾರ್ಕಿಂಗ್ ಹಾಗೂ ಲೈಸೆನ್ಸ್ ವ್ಯವಸ್ಥೆ, ಇತ್ತೀಚಿನ ಜಿಎಸ್‍ಟಿ ಕಾನೂನು, ಆದಾಯ ತೆರಿಗೆ ಕಾನೂನು, ವಜ್ರಗಳ ಬಗ್ಗೆ ಮಾಹಿತಿ, ಇತ್ತೀಚಿನ ಚಿನ್ನಾಭರಣಗಳ ಬಗ್ಗೆ ಮಾಹಿತಿ, ಚಿನ್ನಾಭರಣಗಳ ಲೆಕ್ಕಪತ್ರ ಇಡುವ ಸಾಫ್ಟ್‍ವೇರ್ ಸೇರಿದಂತೆ ಜುವೆಲ್ಲರಿ ಕ್ಷೇತ್ರದಲ್ಲಿನ ಮಾಹಿತಿಯನ್ನು ವರ್ತಕರಿಗೆ ಹಾಗೂ ಕೆಲಸಗಾರರಿಗೆ ನೀಡಲಾಗಿದೆ ಎಂದರು.

ಜಿಲ್ಲಾ ಚಿನ್ನಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಚಿನ್ನಬೆಳ್ಳಿ ವರ್ತಕರು ಹಾಗೂ ಕೆಲಸಗಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ ರಾಜ್ಯದ ನಾಲ್ಕನೇ ಸ್ವರ್ಣಜ್ಞಾನ ಕಾರ್ಯಾಗಾರ ಆಯೋಜಿಸಲಾಗಿದ್ದು, ಇದರಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಚಿನ್ನಬೆಳ್ಳಿ ವರ್ತಕರು ಹಾಗೂ ಕೆಲಸಗಾರರು ಭಾಗವಹಿಸಿ ದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿನ್ನಾಭರಣ ಕಳವು ಪ್ರಕರಣ ಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಅಂಗಡಿ ಮಾಲಿಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಕಾರ್ಯಾಗಾರದಲ್ಲಿ ಸೂಕ್ತ ಕಾನೂನು ಮಾರ್ಗದರ್ಶನ ವನ್ನೂ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಬಿ.ಎನ್. ಪ್ರಕಾಶ್ ಸೇರಿದಂತೆ ರಾಜ್ಯದ ಪ್ರತಿನಿಧಿಗಳನ್ನು ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಚಿನ್ನಬೆಳ್ಳಿ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಬಿ.ಆರ್. ರಾಮಾ ಚಾರಿ, ಖಜಾಂಚಿ ಶ್ರೀಕಾಂತ್‍ಕಾರಿ, ಜಂಟಿ ಕಾರ್ಯ ದರ್ಶಿ ಒ.ವಿ.ದಿವಾಕರ್, ಕೆ.ಎಸ್.ರಾಜಶೇಖರ್, ಜಿಲ್ಲಾ ಸಂಘದ ಉಪಾಧ್ಯಕ್ಷ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಬಿ.ಲೀಲಾರಾಂ ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಶಾಂತ್ ಎಸ್. ವರ್ಣೇಕರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ರವಿ ಉಪಸ್ಥಿತರಿದ್ದರು.