ಜನವರಿ ಬಳಿಕ ಮೈಸೂರಿನ ಅಭಿವೃದ್ಧಿ ಕಾರ್ಯಕ್ಕೆ ರಾಜ್ಯ ಸರ್ಕಾರದ ಅನುದಾನ

ಮೈಸೂರು,ಡಿ.14(ಪಿಎಂ)- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಮೈಸೂರಿನ ಅಭಿ ವೃದ್ಧಿ ಕಾರ್ಯಗಳಿಗೆ ಮುಂದಿನ ಜನವರಿ ಬಳಿಕ ರಾಜ್ಯ ಸರ್ಕಾರದಿಂದ ಅಗತ್ಯ ಅನು ದಾನ ಕಲ್ಪಿಸಿಕೊಡಲಾಗುವುದು ಎಂದು ಸಹ ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ವತಿ ಯಿಂದ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ ಜಿಲ್ಲಾ-ನಗರ ಕನ್ನಡ ಜಾಗೃತಿ ಸಮಿತಿ ಸದಸ್ಯರಿಗೆ ಅಭಿನಂದನೆ ಹಾಗೂ `ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಭವನದ ವಿಸ್ತøತ ಕಾಮಗಾರಿಗೆ ಒಂದೂವರೆ ಕೋಟಿ ರೂ. ಅನುದಾನ ಕಲ್ಪಿ ಸುವ ಮೂಲಕ ಭವನದ ಮೊದಲ ಅಂತಸ್ತಿ ನಲ್ಲಿ ಕಲಾ ಗ್ಯಾಲರಿ, ಗ್ರಂಥಾಲಯ ನಿರ್ಮಾಣ ವಾಗಲು ಸಹಕಾರ ನೀಡಬೇಕೆಂದು ಉಸ್ತು ವಾರಿ ಸಚಿವರಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಮನವಿ ಮಾಡಿದರು.

ಈ ಹಿನ್ನೆಲೆಯಲ್ಲಿ ಮೇಲಿನ ಭರವಸೆ ನೀಡಿದ ಎಸ್.ಟಿ.ಸೋಮಶೇಖರ್, ಈಗಾ ಗಲೇ ಶಾಸಕ ಎಲ್.ನಾಗೇಂದ್ರ ಹಾಗೂ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಸೂ ರಿನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಲ್ಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸ್ವಲ್ಪ ತೊಂದರೆಯಲ್ಲಿ ರುವ ಹಿನ್ನೆಲೆಯಲ್ಲಿ ಜನವರಿ ನಂತರ ಅಗತ್ಯ ಅನುದಾನ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸಾಹಿತ್ಯ ಪರಿಷತ್ತಿನ ಒಳ್ಳೆಯ ಕೆಲಸ ಕಾರ್ಯಗಳಿಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು ಬಹಳ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸಾಧಕರನ್ನು ಪರಿಷತ್ತು ಪರಿಗಣಿಸಿ ಪ್ರಶಸ್ತಿ ನೀಡುತ್ತಿರುವುದು ಪ್ರಸಂಸನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಾ.ಸಿ.ಪಿ.ಸಿದ್ದಾ ಶ್ರಮ, ಡಾ.ವಿ.ಮುನಿವೆಂಕಟಪ್ಪ, ಸಿ.ಮಹೇ ಶ್ವರನ್, ಡಾ.ಪುಟ್ಟಸಿದ್ದಯ್ಯ, ಡಾ.ಆರ್. ರಾಮಕೃಷ್ಣ, ಡಾ.ಎ.ಎಸ್.ಚಂದ್ರಶೇಖರ್, ಎನ್.ಎಸ್.ಜನಾರ್ಧನ ಮೂರ್ತಿ, (ನಂ. ವೆಂಕೋಬರಾವ್ ಗೈರು) ಅವರನ್ನು ಸನ್ಮಾನಿ ಸಲಾಯಿತು. ಜೊತೆಗೆ ಮೈಸೂರು ನಗರ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎ.ಎಸ್. ನಾಗರಾಜು, ಸಾತನೂರು ದೇವರಾಜು, ಅರವಿಂದಶರ್ಮ, ಸೌಗಂಧಿಕಾ ಜೋಯಿಸ್, ಡಾ.ಮುಳ್ಳೂರು ನಂಜುಂಡಸ್ವಾಮಿ, (ಎನ್. ಜಿ.ಗಿರೀಶ್ ಗೈರು), ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಭೇರ್ಯ ರಾಮ್ ಕುಮಾರ್, ಡಾ.ವಿನೋದಮ್ಮ (ಜೆ.ಬಿ.ರಂಗ ಸ್ವಾಮಿ, ಡಾ.ಎಂ.ಜಿ.ಆರ್.ಅರಸು, ಕೆ.ಎಸ್. ಲಾವಣ್ಯ ಗೈರು) ಅವರನ್ನು ಸನ್ಮಾನಿಸ ಲಾಯಿತು. ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಸಾಧಕರನ್ನು ಸನ್ಮಾ ನಿಸಿದರು. ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಸದಸ್ಯರೂ ಆದ ಖ್ಯಾತ ಅಂಕಣ ಕಾರ ಡಾ.ಗುಬ್ಬಿಗೂಡು ರಮೇಶ್, ನಗರ ಪಾಲಿಕೆ ಅಪರ ಆಯುಕ್ತ ಎನ್.ಎಂ.ಶಶಿ ಕುಮಾರ್, ರಂಗಕರ್ಮಿ ರಾಜಶೇಖರ ಕದಂಬ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ವೇದಿಕೆಯಲ್ಲಿದ್ದರು. ಪಾಲಿಕೆ ಸದಸ್ಯ ಎಂ.ಯು.ಸುಬ್ಬಯ್ಯ, ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಎಂ.ಚಂದ್ರಶೇಖರ್ ಸೇರಿ ದಂತೆ ಮತ್ತಿತರರು ಹಾಜರಿದ್ದರು.