ಶುಲ್ಕ ಹೆಚ್ಚಳ ವಿರುದ್ಧ ಕಠಿಣ ಕ್ರಮ

ಮೈಸೂರು, ಮೇ 29- ಖಾಸಗಿ ಶಿಕ್ಷಣ ಸಂಸ್ಥೆಗಳು ಸದ್ಯ ಶುಲ್ಕ ಹೆಚ್ಚಳ ಮಾಡಿದರೆ ಪೋಷಕರು ಅಂತಹ ಸಂಸ್ಥೆ ವಿರುದ್ದ ದೂರು ನೀಡುವಂತೆ ಸಲಹೆ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಈ ಸಂಬಂಧ ಎಲ್ಲಾ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗುವುದು ಎಂದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶಿಕ್ಷಣ ಶುಲ್ಕ ಕುರಿತು ಶಿಕ್ಷಣ ಇಲಾಖೆ ಮೂರು ಸುತ್ತೋಲೆ ಹೊರಡಿ ಸಿದೆ. ಹಲವು ಜನರು ನನ್ನನ್ನು ಭೇಟಿ ಮಾಡಿ, `ಲಾಕ್‍ಡೌನ್‍ನಿಂದ ಕೆಲಸ ಕಳೆದು ಕೊಂಡಿದ್ದೇವೆ, ವ್ಯಾಪಾರವಿಲ್ಲ. ಶಿಕ್ಷಣ ಸಂಸ್ಥೆ ಗಳು ಮಕ್ಕಳ ಶಿಕ್ಷಣ ಶುಲ್ಕ ಪಾವತಿಸು ವಂತೆ ಒತ್ತಾಯಿಸುತ್ತಿವೆ. ಸಹಾಯ ಮಾಡಿ’ ಎಂದು ಮನವಿ ಮಾಡಿದ್ದರು. ಆ ಬಳಿಕ ಇಲಾಖೆ ಹೊರಡಿಸಿದ ಮೊದಲ ಸುತ್ತೋಲೆ ಯಲ್ಲಿ ಲಾಕ್‍ಡೌನ್‍ನಿಂದಾಗಿ ಎಲ್ಲಾ ವರ್ಗದ ಜನರು ಆರ್ಥಿಕವಾಗಿ ಜರ್ಝ ರಿತವಾಗಿರುವುದರಿಂದ ಶುಲ್ಕ ಸಂಗ್ರಹ ಮಾಡದಂತೆ ಸೂಚನೆ ನೀಡಲಾಗಿತ್ತು.

ಬಳಿಕ ಕೆಲ ಶಿಕ್ಷಕರು ನನ್ನ ಬಳಿ ಬಂದು `ನಮ್ಮ ಸಂಸ್ಥೆಗಳು ವೇತನ ನೀಡುತ್ತಿಲ್ಲ’ ಎಂದು ಅಳಲು ತೋಡಿಕೊಂಡರು. ಇದ ರಿಂದ ಇಲಾಖೆ ಹೊರಡಿಸಿದ 2ನೇ ಸುತ್ತೋಲೆಯಲ್ಲಿ ವಿದ್ಯಾರ್ಥಿಗಳ ಪೋಷ ಕರು ಸ್ವಯಂಪ್ರೇರಣೆಯಿಂದ ಶುಲ್ಕ ಪಾವ ತಿಸಲು ಮುಂದಾದರೆ ಅದನ್ನು ಸ್ವೀಕರಿಸಿ ಶಿಕ್ಷಕರ ವೇತನಕ್ಕೆ ಬಳಸಿಕೊಳ್ಳುವಂತೆ ಆದೇಶಿಸಲಾಗಿತ್ತು. ಇದೀಗ ಕೆಲವು ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಹೆಚ್ಚಿಸಿರುವುದಾಗಿ ದೂರು ಬಂದಿದೆ. ಇಲಾಖೆಯ 3ನೇ ಸುತ್ತೋಲೆಯಲ್ಲಿ ಶುಲ್ಕ ಹೆಚ್ಚಳ ಮಾಡ ದಂತೆ ಎಚ್ಚರಿಕೆ ನೀಡಲಾಗಿದೆ. ಆ ಬಳಿಕ ಕೆಲವು ಶಿಕ್ಷಣ ಸಂಸ್ಥೆಗಳು ಹೆಚ್ಚಿಸಿದ್ದ ಶುಲ್ಕ ವನ್ನು ಪೋಷಕರಿಗೆ ಹಿಂದಿರುಗಿಸಿದ್ದಾರೆ. ಈ ಮಧ್ಯೆ ಇನ್ನಷ್ಟು ಶಿಕ್ಷಣ ಸಂಸ್ಥೆಗಳು ಹೆಚ್ಚುವರಿ ಶುಲ್ಕ ಸಂಗ್ರಹಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಕ್ರಮ ಕೈಗೊಳ್ಳ ಲಾಗುವುದು ಎಂದು ಭರವಸೆ ನೀಡಿದರು.