ಗೆದ್ದವರೊಂದಿಗೆ ಸೋತವರೂ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ

ಹೆಚ್.ಡಿ.ಕೋಟೆ, ಜ.12(ಮಂಜು)- ಗ್ರಾಪಂಗೆ ಆಯ್ಕೆಯಾಗಿ ರುವ ನೂತನ ಸದಸ್ಯರೊಂದಿಗೆ ಸೋತಿರುವ ಅಭ್ಯರ್ಥಿಗಳು ಕೂಡ ತಮ್ಮ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಾಜಿ ಶಾಸಕ ಚಿಕ್ಕಣ್ಣ ಸಲಹೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಕೋಟೆ, ಸರಗೂರು, ತಾಲೂ ಕಿನ ಗ್ರಾಪಂಗಳಿಗೆ ಆಯ್ಕೆಯಾದ ನೂತನ ಗ್ರಾಪಂ ಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕಿನಲ್ಲಿ 225 ಜೆಡಿಎಸ್ ಬೆಂಬಲಿತ ಸದಸ್ಯರು ಜಯ ಗಳಿಸಿದ್ದು, ಸೋತ ಅಭ್ಯರ್ಥಿಗಳು ಬೇಸರ ಪಟ್ಟುಕೊಳ್ಳದೇ ಮುಂಬರುವ ಜಿಪಂ, ತಾಪಂ ಹಾಗೂ ವಿಧಾನ ಸಭಾ ಚುನಾವಣೆ ಗೆಲುವಿಗೆ ಶ್ರಮಿಸಬೇಕು ಎಂದರು.

ಪ್ರಸ್ತುತ ಗ್ರಾಪಂ ಚುನಾವಣೆ ಮಹತ್ವದಾಗಿದ್ದು, ತಳಮಟ್ಟದಿಂದ ಪಕ್ಷ ಸಂಘಟಿಸಲು ಸಹಕಾರಿಯಾಗಿದೆ. ಆದರೆ ಬೇರೆ ಯಾವುದೇ ಚುನಾವಣೆಯನ್ನು ಎದರಿಸಬಹುದು. ಗ್ರಾಪಂ ಚುನಾವಣೆ ಎದು ರಿಸಿ ಸದಸ್ಯರಾಗುವುದು ಬಹಳ ಕಷ್ಟದ ಕೆಲಸ. ಹೀಗಾಗಿ ಗ್ರಾಪಂ ಚುನಾವಣೆಯಲ್ಲಿ ಗೆದ್ದವರೊಂದಿಗೆ ಸೋತವರೂ ಗ್ರಾಮದ ಅಭಿವೃದ್ಧಿ ಕೈಗೊಳ್ಳುವ ಮೂಲಕ ಪಕ್ಷದ ಹೆಸರು ಉಳಿಸಿ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕೋಟೆ ಜನತೆ ಕಂಡರೆ ಬಹಳ ಇಷ್ಟ. ಅಲ್ಲದೇ ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸು ತ್ತಾರೆ. ಬಿಜೆಪಿ, ಕಾಂಗ್ರೆಸ್ ಇವೆರಡು ರೈತರ ಬಗ್ಗೆ ಕಾಳಜಿ ಇಲ್ಲದ ಪಕ್ಷಗಳು. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಇನ್ನಿತರ ಪದಾರ್ಥಗಳ ಬೆಲೆ ದಿನೇ ದಿನೇ ಏರುತ್ತಿದೆ. ಎರಡನೇ ಸೊಸೆ ಬಂದಾಗ ಮೊದಲನೆ ಸೊಸೆ ಬಂಡವಾಳ ಗೊತ್ತಾಗುತ್ತದೆ ಅಂದ ಹಾಗೆ ಸರ್ಕಾರದ ಬಂಡವಾಳ ಈಗ ಗೊತ್ತಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜೇಂದ್ರ, ಸರಗೂರು ಬ್ಲಾಕ್ ಅಧ್ಯಕ್ಷ ಬಸವಣ್ಣ, ಜಿಪಂ ಅಧ್ಯಕ್ಷೆ ಪರಿಮಳ ಶಾಮ್, ಜಿಪಂ ಮಾಜಿ ಅಧ್ಯಕ್ಷೆ ನಯೀಮಾ ಸುಲ್ತಾನ್, ಸದಸ್ಯ ಎಂ.ಪಿ.ನಾಗರಾಜು, ಪುರಸಭಾ ಅಧ್ಯಕ್ಷೆ ಸರೋಜಮ್ಮ, ಮುಖಂಡರಾದ ಚಾ.ನಂಜುಂಡಮೂರ್ತಿ, ಶಾಂತ, ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್, ನರಸಿಂಹೇಗೌಡ, ಮಹೇಂದ್ರ, ಗೋಪಾಲಸ್ವಾಮಿ, ಶೆಟ್ಟಿ, ಶಿವಯ್ಯ, ರಾಜೇಶ, ಹರೀಶ್, ಪ್ರಕಾಶ್, ನಾಗನಾಯ್ಕ, ನಾರಾಯಣಗೌಡರು, ವೆಂಕಟೇಶ್, ದಾಸ್, ನಾಗಯ್ಯ ಇನ್ನಿತರರಿದ್ದರು.