ಜಿಲ್ಲೆಯಲ್ಲಿ ‘ಸೇವಾ ಮಿತ್ರ’ ಯಶಸ್ವಿ ಅನುಷ್ಟಾನ

ಚಾಮರಾಜನಗರ,ಮಾ.23-ಸಾಮಾ ಜಿಕ ಭದ್ರತಾ ಯೋಜನೆಯಡಿ ನೀಡಲಾ ಗುವ ವಿವಿಧ ಪಿಂಚಣಿ ಸೌಲಭ್ಯವನ್ನು ಪಡೆಯಲು ನಾಗರಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಮನೆ ಬಾಗಿಲಿಗೆ ಸೇವೆ ತಲುಪಿಸುವ ಉದ್ದೇಶದಿಂದ ಆರಂಭಗೊಂಡ ‘ಸೇವಾ ಮಿತ್ರ’ ಯೋಜನೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾರ್ವಜನಿ ಕರಿಗೆ ಸೇವೆಗಳನ್ನು ಒದಗಿಸುತ್ತಿದೆ.

ಅನುಷ್ಟಾನಗೊಂಡ ಕೆಲವೇ ದಿನಗಳಲ್ಲೇ ನಾಗರಿಕರ ಮನವಿಗೆ ಕೂಡಲೇ ಸ್ಪಂದಿ ಸುವ ಮುಖೇನ ಅನೇಕರು ತಮ್ಮ ಸೌಲಭ್ಯ ವನ್ನು ತ್ವರಿತವಾಗಿ ಪಡೆಯಲು ಸಹಾಯಕವಾಗಿದೆ.

‘ಸೇವಾ ಮಿತ್ರ’ ಯೋಜನೆಯಡಿ ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ಯೋಜನೆ, ಮನಸ್ವಿನಿ ಯೋಜನೆ ಹಾಗೂ ಮೈತ್ರಿ ಯೋಜನೆಗಳ ಪಿಂಚಣಿಯ ಅರ್ಹ ಫಲಾನುಭವಿಗಳಿಗೆ ಸೇವೆ ಒದಗಿಸುವ ಕೆಲಸ ಮಾಡಲಾಗುತ್ತಿದೆ.

ಹೇಗೆ ಕಾರ್ಯನಿರ್ವಹಿಸುತ್ತಿದೆ: ಪಿಂಚಣಿ ಸೌಲಭ್ಯಕ್ಕಾಗಿ ಆಯಾ ತಾಲೂಕಿನ ಕಂಟ್ರೋಲ್ ರೂಂಗೆ ಬಂದ ಮನವಿಗಳನ್ನು ಕೂಡಲೇ ಸ್ವೀಕರಿಸಿ, ಸಂಬಂಧಪಟ್ಟ ಗ್ರಾಮ ಲೆಕ್ಕಾಧಿ ಕಾರಿಗಳು(ಸೇವಾ ಮಿತ್ರ) ಫಲಾನುಭವಿ ಗಳ ಮನೆಗೆ ಖುದ್ದು ತೆರಳಿ ಅಗತ್ಯ ದಾಖ ಲಾತಿಗಳನ್ನು ಪಡೆಯುತ್ತಿದ್ದಾರೆ. ನಂತರ ಅರ್ಜಿಗಳನ್ನು ನಿಯಮಾನುಸಾರ ಶೀಘ್ರ ವಾಗಿ ಕಚೇರಿಯಲ್ಲಿ ಪರಿಶೀಲಿಸಿ, ಅರ್ಹ ರಿಗೆ ಪಿಂಚಣಿ ಮಂಜೂರು ಮಾಡಲಾ ಗುತ್ತಿದೆ. ಅಷ್ಟೇ ಅಲ್ಲದೇ ಮನೆಗೆ ಭೇಟಿ ನೀಡಿ ಮಂಜೂರಾತಿ ಆದೇಶ ಪತ್ರವನ್ನೂ ನೀಡಲಾಗುತ್ತಿದೆ.

ಅದರಂತೆ ಈವರೆಗೆ ಜಿಲ್ಲೆಯ ಎಲ್ಲಾ ತಾಲೂಕು ಕಂಟ್ರೋಲ್ ರೂಂಗಳಿಂದ ಒಟ್ಟು 370 ಕರೆಗಳು ಸ್ವೀಕೃತವಾಗಿದ್ದು, ಸೇವಾ ಮಿತ್ರ ಜಾರಿಗೆ ಬಂದ 15 ದಿನಗಳಲ್ಲಿ 63 ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಿ, ಮಂಜೂರಾತಿ ಪತ್ರವನ್ನೂ ಸಹ ನೀಡಲಾಗಿದೆ. ಉಳಿದ ಪ್ರಕರಣಗಳು ಕಾರ್ಯರೂಪದ ಹಂತ ದಲ್ಲಿದ್ದು, ಶೀಘ್ರವಾಗಿ ಸೇವೆ ದೊರೆ ಯುವಂತೆ ಮಾಡುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಈ ಯೋಜನೆಯಿಂದ ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯವನ್ನು ಮಧ್ಯವರ್ತಿಗಳ ಹಾವಳಿ ಹಾಗೂ ಅನವಶ್ಯಕ ಅಲೆದಾಟವಿಲ್ಲದೇ ಪಡೆಯಲು ಅನುಕೂಲವಾಗಿದೆ. ವಿಶೇಷವಾಗಿ ವಯೋವೃದ್ಧರು, ಅಂಗವಿಕರು ಹಾಗೂ ವೈಯಕ್ತಿಕವಾಗಿ ನೊಂದವರಿಗೆ ‘ಸೇವಾ ಮಿತ್ರ’ ಯೋಜನೆ ವರದಾನವಾಗಿದೆ.

ಕರೆ ಮಾಡಿ, ಸೇವೆ ಪಡೆಯಿರಿ
ಸೇವಾ ಮಿತ್ರಕ್ಕಾಗಿ ರಜಾ ದಿನಗಳನ್ನು ಹೊರತುಪಡಿಸಿ, ಉಳಿದೆಲ್ಲಾ ದಿನಗಳ ಕಚೇರಿ ಸಮಯದಲ್ಲಿ ಅಂದರೆ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಆಯಾ ತಾಲೂಕು ಕಂಟ್ರೋಲ್ ರೂಂಗೆ ಕರೆ ಮಾಡಿ ಮನವಿ ಸಲ್ಲಿಸಬಹುದು. ಚಾಮರಾಜನಗರ- ದೂ.ಸಂ: 08226-222046, ಕೊಳ್ಳೇಗಾಲ- ದೂ.ಸಂ: 08224-252042, ಗುಂಡ್ಲುಪೇಟೆ- ದೂ.ಸಂ:08229-222225, ಯಳಂದೂರು- ದೂ.ಸಂ: 08226-240029 ಹಾಗೂ ಹನೂರು- ದೂ.ಸಂ: 08224-268032 ಅನ್ನು ಸಂಪರ್ಕಿಸಿ ಸೌಲಭ್ಯ ಪಡೆಯಬಹುದಾಗಿದೆ.