ರಾಜ್ಯದಲ್ಲಿ ಅತಿವೃಷ್ಟಿ ಯಶಸ್ವಿ ನಿರ್ವಹಣೆ ಕಂದಾಯ ಸಚಿವ ಅಶೋಕ್ ವಿಶ್ವಾಸ

ಬೆಂಗಳೂರು,ಆ.19(ಕೆಎಂಶಿ)-ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜೊತೆ ಗೂಡಿ, ಅತಿವೃಷ್ಟಿಯನ್ನು ಎದುರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಸಹಮತ ವಿದೆ, ಒಡಂಬಡಿಕೆ ಇದೆ. ಜನರ ಕೆಲಸವನ್ನು ಹಂಚಿಕೊಂಡು ಮಾಡಿ, ಸರ್ಕಾರದ ಸವಲತ್ತುಗಳು ಕೆಳಮಟ್ಟಕ್ಕೆ ತಲುಪುವಂತೆ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರಲ್ಲಿ ಹೊಂದಾಣಿಕೆ ಇಲ್ಲ, ಅದೇ ಬುದ್ಧಿಯನ್ನು ನಮ್ಮ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿರುವುದನ್ನು ಅಲ್ಲಗಳೆದ ಅಶೋಕ್, ಭಾರೀ ಮಳೆಯಿಂದ ಉಂಟಾದ ನೆರೆ ಹಿನ್ನೆಲೆ ಯಲ್ಲಿ 5 ಜಿಲ್ಲೆಗಳಿಗೆ ಭೇಟಿ ಮಾಡಿ, ತುರ್ತು ಪರಿಹಾರ ಕಾಮಗಾರಿ ಕೈಗೊಂಡಿದ್ದೇನೆ.

ಇದೇ ಸಮಯದಲ್ಲಿ ಗೃಹ ಸಚಿವರು, ಕೆಲವು ಜಿಲ್ಲೆಗಳಿಗೆ ಭೇಟಿ ಮಾಡಿ, ನೆರೆಯಿಂದ ಸಂಕಷ್ಟಕ್ಕೊಳಗಾದವರಿಗೆ ತಕ್ಷಣ ಪರಿಹಾರ ದೊರೆಯುವಂತೆ ಮಾಡಿದ್ದೇವೆ. ಇದ್ಯಾವು ದನ್ನೂ ಅರಿಯದ ಪ್ರತಿಪಕ್ಷದ ನಾಯಕರು, ಟೀಕೆ ಮಾಡುತ್ತಿದ್ದಾರೆ. ಭಾರೀ ಮಳೆ ಬಿದ್ದು ನೆರೆಯುಂಟಾಗುತ್ತಿದೆ ಎಂಬ ಮಾಹಿತಿ ಇತ್ತು, ಇದನ್ನು ಆಧರಿಸಿ, ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರಿಂದ ಕಳೆದ ಬಾರಿಯಾದ ಅನಾಹುತಗಳು ಈ ಬಾರಿ ಆಗಲಿಲ್ಲ.

ಅತಿವೃಷ್ಟಿ ಪ್ರದೇಶದಲ್ಲಿ ತಕ್ಷಣ ಪರಿಹಾರ ಕಾಮಗಾರಿ ಕೈಗೊಳ್ಳಲು ಅಗತ್ಯ ಹಣ ವನ್ನು ಜಿಲ್ಲಾಡಳಿತಕ್ಕೆ ನೀಡಿರುವುದಲ್ಲದೆ, ಕೇಂದ್ರ ಸರ್ಕಾರಕ್ಕೆ ತುರ್ತು ಪರಿಹಾರ ನೀಡುವಂತೆ ಮನವಿಯನ್ನು ಸಲ್ಲಿಸಿದ್ದೇವೆ. ಕೋವಿಡ್-19 ಸೋಂಕಿನ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದರಾಮಯ್ಯನವರಿಗೆ ಪಾಪ ಇದರ ಯಾವುದೇ ಮಾಹಿತಿ ಅವರಿಗೆ ತಿಳಿದಿರಲಿಲ್ಲವೇನೂ, ಈಗಲಾದರೂ ತಿಳಿದುಕೊಂಡು ಮಾತನಾಡಲಿ ಎಂದಿದ್ದಾರೆ.