ಮೃಗಾಲಯದ ಜೀಬ್ರಾ ದತ್ತು ಸ್ವೀಕರಿಸಿದ ಸುಮನ

ಮೈಸೂರು,ಮೇ8-ಮೈಸೂರಿನ ಶ್ರೀಮತಿ ಡಿ. ಸುಮನ ಅವರು 50 ಸಾವಿರಗಳನ್ನು ಪಾವತಿಸಿ ಮೈಸೂರು ಮೃಗಾಲಯದ ಜೀಬ್ರಾವನ್ನು ಮಾರ್ಚ್ 8, 2020 ರಿಂದ 2021ರ ಮಾರ್ಚ್ 7ರ ಒಂದು ವರ್ಷ ಅವಧಿಗೆ ದತ್ತು ಸ್ವೀಕರಿಸಿದ್ದಾರೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚಾಮ ರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.