ಸೆ.28ರ ಕರ್ನಾಟಕ ಬಂದ್‍ಗೆ ಹಲವು  ಸಂಘಟನೆಗಳ ಬೆಂಬಲ: ಹೋರಾಟ ಸಮಿತಿ

ಮೈಸೂರು, ಸೆ.26(ಎಂಟಿವೈ)- ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಬಂಡವಾಳಶಾಹಿಗಳಿಗೆ ಮಣೆ ಹಾಕಲು ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ್ದು ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಎಂದು ಖಂಡಿಸಿ ಸೆ.28ರಂದು ಕರೆ ನೀಡಿರುವ `ಕರ್ನಾಟಕ ಬಂದ್’ಗೆ ಮೈಸೂರಲ್ಲಿ ಹಲವು ಸಂಘಟನೆಗಳು ಬೆಂಬಲ ನೀಡಿವೆ ಎಂದು ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಮುಖಂಡ  ಹೊಸಕೋಟೆ ಬಸವರಾಜು ಮೈಸೂರಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೆ.28ರ ಕರ್ನಾಟಕ ಬಂದ್‍ಗೆ ಮೈಸೂರಲ್ಲಿ ಪ್ರಗತಿಪರ ಸಂಘಟನೆ, ಕನ್ನಡ ಪರ, ರೈತ ಪರ ಸಂಘಟನೆಗಳು ಹಾಗೂ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ  ಗಳು ಬೆಂಬಲ ಸೂಚಿಸಿವೆ. ಜಿಲ್ಲೆಯಲ್ಲಿ 29 ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿ ಯಶಸ್ವಿಗೊಳಿಸಲು ನಿರ್ಧರಿಸಿವೆ. ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಬೆಂಬಲ ನೀಡಬೇಕು. ಮೈಸೂರಿನ ಎಲ್ಲಾ ಸಂಘಟನೆಗಳು ಪಕ್ಷಭೇದÀ ಮರೆತು ಬೆಂಬಲ ನೀಡಿ ಪ್ರತಿಭÀಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಪೂರ್ವಭಾವಿ ಸಭೆ: ಇದಕ್ಕೂ ಮುನ್ನ ಜಲದರ್ಶಿನಿ ಅತಿಥಿಗೃಹ ಆವರಣದಲ್ಲಿ ಪೂರ್ವ ಭಾವಿ ಸಭೆ ನಡೆದಿದ್ದು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಸ್ವರಾಜ್ ಇಂಡಿಯಾ ಪಕ್ಷ, ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ, ಐಎನ್‍ಟಿಯುಸಿ, ಐಯುಟಿಯುಸಿ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ 14 ಸಂಘಟನೆಗಳ ಮುಖ್ಯಸ್ಥರು ಸೆ.28ರಂದು ನಡೆಯುವ ಬಂದ್‍ನ ರೂಪುರೇಷೆÉಗಳ ಬಗ್ಗೆ ಚರ್ಚೆ ನಡೆಸಿದರು. ರೈತ ಮುಖಂಡ ಮರಂಕಯ್ಯ, ವಿವಿಧÀ ಸಂಘಟನೆ ಮುಖಂಡರಾದ ಕೆ.ಎಸ್.ಶಿವರಾಮ್, ಉಗ್ರ ನಗಸಿಂಹೇಗೌಡ, ಗಿರೀಶ್ ಶಿವಾರ್ಚಕ, ಪುನೀತ್, ಅನಿಲ್ ಕುಮಾರ್, ಮುದ್ದುಕೃಷ್ಣ, ಭಾನುಮೋಹನ್ ಸೇರಿದಂತೆ ಹಲವರು ಗೋಷ್ಠಿಯಲ್ಲಿದ್ದರು.