ಮ್ಯಾರಾಥಾನ್ ಮೂಲಕ ಸ್ವಾಮಿ ವಿವೇಕಾನಂದರ ಸ್ಮರಣೆ

ಮೈಸೂರು:  ಬೆಳಂಬೆಳಿಗ್ಗೆಯ ಪ್ರಶಾಂತಮಯ ವಾತಾವರಣದಲ್ಲಿ ನೂರಾರು ಮಂದಿ ಹೆಜ್ಜೆ ಹಾಕಿ ಸ್ವಾಮಿ ವಿವೇಕಾನಂದರನ್ನು ಸ್ಮರಿಸಿ ಸಂಭ್ರಮಿಸಿದರು. ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ದಿಕ್ಸೂಚಿ ಭಾಷಣ ಒಂದು ಐತಿಹಾಸಿಕ ಸನ್ನಿವೇಶವಾಗಿದ್ದು, ಇದೀಗ ವಿವೇಕಾನಂದರ ಈ ಮಾತುಗಳನ್ನಾಡಿ 125 ವರ್ಷಗಳೇ ತುಂಬಿವೆ.

ಇದರ ಅಂಗವಾಗಿ ಯುವ ಬ್ರಿಗೇಡ್ ಮೈಸೂರು ಘಟಕದ ವತಿಯಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಮ್ಯಾರಾಥಾನ್ ನಲ್ಲಿ ಯುವಕರು, ಯುವತಿಯರು, ಹಿರಿ ಯರು ಹಾಗೂ ಕಿರಿಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮ್ಯಾರಾಥಾನ್‍ಗೆ ಅಂತಾರಾಷ್ಟ್ರೀಯ ವಾಲಿಬಾಲ್ ಪಟುವೂ ಆದ ಭಾರತದ ಮಹಿಳಾ ವಾಲಿಬಾಲ್ ತಂಡದ ತರಬೇತುದಾರರಾದ ಹೇಮಲತಾ ಹಸಿರು ನಿಶಾನೆ ತೋರಿದರು. ಈ ವೇಳೆ ಅತಿಥಿಯಾಗಿ ಉದ್ಯಮಿ ಮಂಜುನಾಥ್ ಹಾಜರಿದ್ದರು. ಯುವತಿಯರು, ಯುವಕರು, ಪುರುಷರು, ಮಹಿಳೆಯರ ವಿಭಾಗಗಳಲ್ಲಿ ಮ್ಯಾರಾಥಾನ್ ಓಟ ನಡೆಯಿತು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಿಂದ ಆರಂಭಗೊಂಡ ಮ್ಯಾರಾಥಾನ್, ಚಾಮರಾಜ ಒಡೆಯರ್ ವೃತ್ತ, ಗಾಂಧಿ ಚೌಕ, ಚಿಕ್ಕಗಡಿಯಾರ ವೃತ್ತದ ಮೂಲಕ ಡಿ.ದೇವರಾಜ ಅರಸು ರಸ್ತೆಗೆ ತಲುಪಿತು. ಬಳಿಕ ಮೇಟ್ರೋಫೋಲ್ ವೃತ್ತದ ಮಾರ್ಗ ವಾಗಿ ಯಾದವಗಿರಿಯ ಚೆಲುವಾಂಬ ಉದ್ಯಾನವನದ ಸ್ವಾಮಿ ವಿವೇಕಾನಂದ ಪ್ರತಿಮೆ ಬಳಿ ಅಂತ್ಯಗೊಂಡಿತು.

ಇದೇ ವೇಳೆ ಮ್ಯಾರಾಥಾನ್‍ನಲ್ಲಿ ಪಾಲ್ಗೊಂ ಡಿದ್ದ ಎಲ್ಲಾ ಪಟುಗಳಿಗೆ 78 ವರ್ಷದ ಹಿರಿಯ ಮ್ಯಾರಾಥಾನ್ ಪಟು ಶಿವಣ್ಣ ಪ್ರಮಾಣ ಪತ್ರ ವಿವರಿಸಿದರು. ಯುವ ಬ್ರಿಗೇಡ್ ಮೈಸೂರು ಜಿಲ್ಲಾ ಸಂಚಾಲಕ ಎಸ್.ಚಂದ್ರ ಶೇಖರ್, ಸಂಘಟನೆಯ ಸ್ವಯಂ ಸೇವಕ ರಾದ ಪ್ರಶಾಂತ್, ಸುನಿಲ್, ದರ್ಶನ್, ವಿಜಯ್, ಪ್ರಭು, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

ಸೆ.20ರಂದು ಬಹುಮಾನ ವಿತರಣೆ: ಯುವ ಕರ ವಿಭಾಗದಲ್ಲಿ ಎಸ್.ಆರ್.ರಾಹುಲ್, ಡಿ.ಸುನಿಲ್, ಆರ್.ಹೇಮಂತ್, ಯುವತಿ ಯರ ವಿಭಾಗದಲ್ಲಿ ಟಿ.ಕವನ, ಮೋನಿತಾ, ಏಕಾಂಷ, ಪುರುಷರ ವಿಭಾಗದಲ್ಲಿ ಎಸ್. ಎಂ.ಚರಣ್‍ಗೌಡ, ಸಜಲ್, ಉಮಾ ಶಂಕರ್, ಮಹಿಳೆಯರ ವಿಭಾಗದಲ್ಲಿ ಆಶಾ ನಾಗರಾಜ್, ಪಿ.ಎನ್.ಹೇಮಶ್ರೀ, ಸ್ಮಿತ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದು ಕೊಂಡರು. ಇವರಿಗೆ ಸೆ.20ರಂದು ಮೈಸೂ ರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಯುವ ಬ್ರಿಗೇಡ್ ಮೈಸೂರು ಘಟಕದ ವತಿಯಿಂದ ಹಮ್ಮಿಕೊಂಡಿರುವ `ಮತ್ತೊಮ್ಮೆ ದಿಗ್ವಿಜಯ’ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು. ಈ ಕಾರ್ಯಕ್ರಮದ ಅತಿಥಿಗಳಾಗಿ ವಿಶ್ವಸಂಸ್ಥೆಯ ಗಾರ್ಡನ್ ಬ್ರೌನ್ ಯುವ ಸಾಧಕ ಪ್ರಶಸ್ತಿ ಪುರಸ್ಕೃತರೂ ಆದ ಬೆಳಕು ಅಕಾಡೆಮಿಯ ಅಶ್ವಿನಿ ಅಂಗಡಿ, ರಾಮಕೃಷ್ಣ ಆಶ್ರಮದ ಸ್ವಾಮಿ ಯುಕೇಶಾ ನಂದಜಿ ಮಹಾರಾಜ್ ಪಾಲ್ಗೊಳ್ಳಲಿದ್ದು, ಯುವ ಬ್ರಿಗೇಡ್‍ನ ಮಾಜಿ ರಾಜ್ಯ ಸಂಚಾ ಲಕ ನಿತ್ಯಾನಂದ ವಿವೇಕಾವಂಶಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದು ಯುವ ಬ್ರಿಗೇಡ್ ಮೈಸೂರು ಜಿಲ್ಲಾ ಸಂಚಾ ಲಕ ಎಸ್.ಚಂದ್ರಶೇಖರ್ ತಿಳಿಸಿದರು.