ಕೊರೊನಾ ನಿಯಮ ಪಾಲನೆಗೆ ತಹಸೀಲ್ದಾರ್ ಮನವಿ

ಸರಗೂರು, ಏ.24(ನಾಗೇಶ್)-ನಗರ ಪ್ರದೇಶಗಳಲ್ಲಿ ಮಾತ್ರ ಕೊರೊನಾ ಹರಡುತ್ತಿದೆ ಎನ್ನುವ ಮನೋಭಾವ ಬಿಟ್ಟು ಗ್ರಾಮೀಣ ಭಾಗದ ಜನರೂ ಜಾಗೃತರಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಿ, ಮುನ್ನೆ ಚ್ಚರಿಕೆ ವಹಿಸಬೇಕು ಎಂದು ತಹಸೀಲ್ದಾರ್ ಬಸವಣ್ಣಪ್ಪ ಕಲ್ಲಶೆಟ್ಟಿ ಮನವಿ ಮಾಡಿದರು.

ತಾಲೂಕು ಅಡಳಿತ, ಪಟ್ಟಣ ಪಂಚಾ ಯಿತಿ, ಪೊಲೀಸ್ ಇಲಾಖೆಗಳ ಸಹಯೋಗ ದೊಂದಿಗೆ ಸಾರ್ವಜನಿಕರಿಗೆ ಕೋವಿಡ್-19 ಅರಿವು ಮೂಡಿಸುವ ಉದ್ದೇಶದಿಂದ ಪಟ್ಟಣದಲ್ಲಿ ಏರ್ಪಡಿಸಿದ್ದ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ತಾಲೂಕು ಹಾಗೂ ಗ್ರಾಮೀಣ ಭಾಗ ದಲ್ಲೂ ಕೊರೊನಾ ತೀವ್ರವಾಗಿ ಬಾಧಿಸ ಬಹುದು. ಸಾರ್ವಜನಿಕರು ಮೈಮರೆಯದೆ ಮಾಸ್ಕ್ ಧÀರಿಸಿ, ಸ್ಯಾನಿಟೈಸರ್ ಬಳಸುವು ದಲ್ಲದೆ, ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು. ಸುಖಾಸುಮ್ಮನೆ ಮನೆಯಿಂದ ಹೊರಬರಬಾರದು ಎಂದು ಸಲಹೆ ನೀಡಿದರು. ಸರಗೂರು ಠಾಣಾ ಸಬ್‍ಇನ್ಸ್ ಪೆಕ್ಪರ್ ದಿವ್ಯಾ ಮಾತನಾಡಿ, ಸರ್ಕಾರ ಕೋವಿಡ್-19 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಿದ್ದು, ಬುಧÀವಾರದಿಂದ ಮೇ 4ರ ತನಕ ನಿಯಮ ಜಾರಿಯಲ್ಲಿದ್ದು, ರಾತ್ರಿ ಹಾಗೂ ವಿಕೇಂಡ್ ಕಫ್ರ್ಯೂ ಮೂಲಕ ಲಾಕ್‍ಡೌನ್ ಕೂಡ ಘೋಷಣೆ ಮಾಡ ಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀಣಾ ಮಾತನಾಡಿ, ಪಟ್ಟಣದ 12 ವಾರ್ಡ್ ನಿವಾಸಿಗಳಿಗೆ ಅರೆ ಲಾಕ್‍ಡೌನ್ ಹಾಗೂ ಕಡ್ಡಾಯವಾಗಿ 45 ವರ್ಷದ ಮೇಲಿನ ವರಿಗೆ ಲಸಿಕೆ ಹಾಕಿಸಿಕೊಳ್ಳುವುದು, ಕೊರೊನಾ ತಪಾಸಣೆ ಕುರಿತು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ ಮಾಹಿತಿ ನೀಡಲಾಗು ತ್ತಿದೆ. ಸಾರ್ವಜನಿಕರು, ಪಪಂ ಜೊತೆ ಕೈಜೋಡಿಸಿ ಎಂದು ಕೋರಿದರು. ಈ ವೇಳೆ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್, ಪಟ್ಟಣ ಪಂಚಾಯಿತಿ ಸಿಬ್ಬಂದಿ, ಪಪಂ ಸದಸ್ಯರು ಹಾಜರಿದ್ದರು,