ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪ.ಜಾತಿ-ಪಂಗಡದ ಹಿತರಕ್ಷಣಾ ಸಮಿತಿ ಸಭೆ

ಮೂಲ ಸೌಕರ್ಯಕ್ಕೆ ಸಮಿತಿ ಸದಸ್ಯರ ಆಗ್ರಹ
ಸೋಮವಾರಪೇಟೆ, ಅ.26-ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ತಹ ಸೀಲ್ದಾರ್ ಗೋವಿಂದರಾಜು ಅಧ್ಯಕ್ಷತೆ ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸಭೆ ನಡೆಯಿತು.

ಪರಿಶಿಷ್ಟ ಪಂಗಡದ ಹಾಡಿಗಳಲ್ಲಿ ಇಂದಿಗೂ ತಮ್ಮ ಕೃಷಿ ಭೂಮಿಗೆ ಸೂಕ್ತ ದಾಖಲಾತಿ ಹೊಂದಿಲ್ಲದ ಕಾರಣ, ರೈತರು ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸದಸ್ಯ ಸುಬ್ರಮಣಿ ಸಭೆಯ ಆರಂಭದಲ್ಲೇ ದೂರಿದರು. ಕೂಡಲೇ ದಾಖಲಾತಿ ದುರಸ್ತಿ ಮಾಡಿಕೊಡುವ ಕೆಲಸ ಇಲಾಖೆ ಯಿಂದಾಗಬೇಕು ಎಂದು ಆಗ್ರಹಿಸಿದರು.

ಹಾಡಿಗಳಲ್ಲಿ ಮೂಲ ಸೌಕರ್ಯ ಗಳಿಲ್ಲದೆ, ಮಳೆಯ ನೀರು ಮನೆಯೊಳಗೆ ನುಗ್ಗುತ್ತಿದೆ. ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಡಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ. ಸ್ಥಳದಲ್ಲಿಯೇ ಹಾಡಿಯ ನಿವಾಸಿಗಳಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಜಾತಿ ಸಂಬಂಧಿತ ದಾಖಲಾತಿಗಳನ್ನು ವಿರತಿಸಲು ಕ್ರಮ ಕೈಗೊಳ್ಳಬೇಕು. ಹಿತರಕ್ಷಣಾ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೂ ಹಾಡಿಗಳಿಗೆ ಭೇಟಿ ನೀಡಿ, ಸಮಸ್ಯೆ ಆಲಿಸ ಬೇಕೆಂದು ಸುಬ್ರಮಣಿ ಒತ್ತಾಯಿಸಿದರು.

ಹಾಡಿಗಳ ಕೃಷಿ ಭೂಮಿಗೆ ಸಂಬಂಧಿ ಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಮುಂದಿನ 15 ದಿನಗಳ ಒಳಗೆ ದಾಖ ಲಾತಿ ನೀಡಲು ಕ್ರಮ ಕೈಕೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಖರ್ ಭರವಸೆ ನೀಡಿದರು.

ಸಮಿತಿ ಸದಸ್ಯ ಬಿ.ಈ.ಜಯೇಂದ್ರ ಮಾತ ನಾಡಿ, ಕಳೆದ ಹಲವು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ತಮ್ಮ ಹಕ್ಕಿನಲ್ಲಿರುವ ಭೂಮಿಗೆ ಹದ್ದುಬಸ್ತು ಸರ್ವೆ ಮಾಡಿಸಿಕೊಡುವಂತೆ ಮನವಿ ಮಾಡ ಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ನಿವೇಶನ ಹೊಂದಿರುವವರು 94 `ಸಿ’ಯಡಿ ಅರ್ಜಿ ಸಲ್ಲಿಸಿದ್ದು, ಕೂಡಲೇ ಫಲಾನು ಭವಿಗಳಿಗೆ ಹಕ್ಕು ಪತ್ರ ನೀಡುವಂತೆ ಮನವಿ ಮಾಡಿದರು. ತಹಸೀಲ್ದಾರ್ ಗೋವಿಂದರಾಜು ಪ್ರತಿಕ್ರ್ರಿಯಿಸಿ, ಫಲಾನು ಭವಿಗಳಿಂದ ನಿಗಧಿಗೊಳಿಸಿರುವ ಹಣವನ್ನು ಸರ್ಕಾರಕ್ಕೆ ಕಟ್ಟಿಸಿದಲ್ಲಿ ತಕ್ಷಣವೇ ಹಕ್ಕುಪತ್ರ ವಿತರಿಸಲು ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಮಿತಿ ತಾಪಂ ಅಧ್ಯಕ್ಷೆ ಪುಷ್ಪಾ ರಾಜೇಶ್, ಕಾರ್ಯನಿರ್ವ ಹಣಾಧಿಕಾರಿ ಜಯಣ್ಣ, ಹಿತರಕ್ಷಣಾ ಸಮಿತಿ ಸದಸ್ಯೆ ಸುಮತಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.